ಇಸ್ಲಮಾಬಾದ್: ನೈಜೀರಿಯನ್ ಏರ್ ಫೋರ್ಸ್ (ಎನ್ ಎ ಎಫ್) ಪಾಕಿಸ್ತಾನದಿಂದ 10 ಸೂಪರ್ ಸಾನಿಕ್ ಮುಷ್ಶಾಕ್ ಯುದ್ಧ ವಿಮಾನಗಳನ್ನು ಕೊಳ್ಳಲಿದೆ ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.
"ಈ ಒಪ್ಪಂದವನ್ನು ಅಬೂಜ (ನೈಜೀರಿಯಾ) ದಲ್ಲಿ ಸಹಿ ಮಾಡಲಾಗಿದೆ. ಏರ್ ವೈಸ್ ಮಾರ್ಷಲ್ ಇಯ ಅಹಮದ್ ಅಬ್ದುಲ್ಲಾಯಿ ಮತ್ತು ಪಾಕಿಸ್ತಾನದ ಏರೊನಾಟಿಕಲ್ ಕಾಂಪ್ಲೆಕ್ಸ್ (ಪಿ ಎ ಎಫ್) ನ ಮುಖ್ಯಸ್ಥ ಏರ್ ಮಾರ್ಷಲ್ ಆರ್ಷದ್ ಮಲಿಕ್ ಇದಕ್ಕೆ ಸಹಿ ಹಾಕಿದ್ದಾರೆ" ಎಂದು ಪಾಕಿಸ್ತಾನ ಏರ್ ಫೋರ್ಸ್ ವಕ್ತಾರ ಸಯ್ಯದ್ ಮೊಹಮದ್ ಅಲಿ ಶುಕ್ರವಾರ ಹೇಳಿದ್ದಾರೆ.
ಕಾರ್ಯಕಾರಿ ತರಬೇತಿ ಮತ್ತು ಎನ್ ಎ ಎಫ್ ಗೆ ತಾಂತ್ರಿಕ ಸಹಕಾರ ಕೂಡ ಈ ಒಪ್ಪಂದದ ಭಾಗವಾಗಿದೆ. ಈ ಸೌಲಭ್ಯವನ್ನು ಆದಷ್ಟು ಸಣ್ಣ ಸಮಯದಲ್ಲಿ ಒದಗಿಸುವುದಾಗಿ ಪಿ ಎ ಎಫ್ ಒಪ್ಪಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಈ ಯುದ್ಧ ವಿಮಾನಗಳು ಈಗಾಗಲೇ ಸೌದಿ ಅರೇಬಿಯಾ, ಒಮನ್, ಇರಾನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕಾರ್ಯನಿರತವಾಗಿವೆಯಂತೆ.
ಸೂಪರ್ ಸಾನಿಕ್ ಜೆ ಎಫ್-17 ಮತ್ತು ಸೂಪರ್ ಸಾನಿಕ್ ಮುಷ್ಶಾಕ್ ಯುದ್ಧ ವಿಮಾನಗಳನ್ನು ಉತ್ಪಾದಿಸುವ ವಿಶ್ವ ದರ್ಜೆಯ ಏವಿಯೇಷನ್ ಸಂಸ್ಥೆಯಾಗಿರುವ ಪಿ ಎ ಸಿ ಬಲವನ್ನು ಈ ಒಪ್ಪಂದ ವೃದ್ಧಿಸಲಿದೆ ಎಂದು ಅವರು ಹೇಳಿದ್ದಾರೆ.