ಪಾಕ್ ಸೇನೆಗೆ ಶೀಘ್ರವೇ ಹೊಸ ಮುಖ್ಯಸ್ಥರ ನೇಮಕ: ಪಾಕ್ ಸಚಿವ

ನವೆಂಬರ್ ತಿಂಗಳಾಂತ್ಯಕ್ಕೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಷರೀಫ್ ನಿವೃತ್ತಿಯಾಗಲಿದ್ದು, ಪಾಕಿಸ್ತಾನ ಸರ್ಕಾರ ಹೊಸ ಸೇನಾ ಮುಖ್ಯಸ್ಥರನ್ನು ನೇಮಕ ಮಾಡಲಿದೆ.
ಪಾಕ್ ಸೇನೆಗೆ ಶೀಘ್ರವೇ ಹೊಸ ಮುಖ್ಯಸ್ಥರ ನೇಮಕ: ಪಾಕ್ ಸಚಿವ
ಪಾಕ್ ಸೇನೆಗೆ ಶೀಘ್ರವೇ ಹೊಸ ಮುಖ್ಯಸ್ಥರ ನೇಮಕ: ಪಾಕ್ ಸಚಿವ

ಇಸ್ಲಾಮಾಬಾದ್: ನವೆಂಬರ್ ತಿಂಗಳಾಂತ್ಯಕ್ಕೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಷರೀಫ್ ನಿವೃತ್ತಿಯಾಗಲಿದ್ದು, ಪಾಕಿಸ್ತಾನ ಸರ್ಕಾರ ಹೊಸ ಸೇನಾ ಮುಖ್ಯಸ್ಥರನ್ನು ನೇಮಕ ಮಾಡಲಿದೆ ಎಂದು ಅಲ್ಲಿನ ಹಿರಿಯ ಸಚಿವರು ಮಾಹಿತಿ ನೀಡಿದ್ದಾರೆ.

ಒಂದು ವಾರ ಅಥವಾ 10 ದಿನಗಳಲ್ಲಿ ಪಾಕಿಸ್ತಾನ ಸರ್ಕಾರ ನೂತನ ಸೇನಾ ಮುಖ್ಯಸ್ಥರ ಹೆಸರನ್ನು ಘೋಷಣೆ ಮಾಡಲಿದೆ ಎಂದು ಪಾಕಿಸ್ತಾನದ ಸಚಿವ ತರಿಕ್ ಫಜಲ್ ಚೌಧರಿ ಮಾಹಿತಿ ನೀಡಿದ್ದಾರೆ. ತಾವು ಎರಡನೇ ಅವಧಿಗೆ ಆಯ್ಕೆಯನ್ನು ಬಯಸುವುದಿಲ್ಲ ಎಂದು ಹೇಳಿದ್ದರು. ಪಾಕಿಸ್ತಾನದಲ್ಲಿ ಉಂಟಾಗಿರುವ ಆಂತರಿಕ ಕಲಹ, ಭದ್ರತಾ ಸವಾಲುಗಳನ್ನು ಎದುರಿಸಲು ರಹೀಲ್ ಅವರನ್ನೇ ಎರಡನೇ ಅವಧಿಗೆ ನೇಮಕ ಮಾಡಬೇಕೆಂಬ ಒತ್ತಡ ಪಾಕ್ ಸರ್ಕಾರದ ಮೇಲಿದೆ.  ಸೇನಾ ಮುಖ್ಯಸ್ಥರ ನೇಮಕ ಪ್ರಕ್ರಿಯೆಯಲ್ಲಿ ಪಾಕ್ ಪ್ರಧಾನಿಯ ನಿರ್ಧಾರವೇ ಅಂತಿಮವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com