ಖ್ವೆಟ್ಟಾ: 60 ತರಬೇತಿ ನಿರತ ಪೊಲೀಸರನ್ನು ಬಲಿ ಪಡೆದ ಪೊಲೀಸ್ ಅಕಾಡೆಮಿ ದಾಳಿಯೊಂದಿಗೆ ನಂಟು ಹೊಂದಿದ್ದ ಲಷ್ಕರ್ ಇ ಜಾಗ್ವಿ ಉಗ್ರ ಸಂಘಟನೆಯ ನಾಲ್ವರು ಶಂಕಿತ ಉಗ್ರರನ್ನು ಹತ್ಯೆ ಮಾಡಲಾಗಿದೆ.
ನಿನ್ನೆ ಖ್ವೆಟ್ಟಾದ ಹಝರಂಜ್ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರನ್ನು ಪೊಲೀಸರು ಹತ್ಯೆ ಮಾಡಿದ್ದಾರೆ.
ಗುಪ್ತಚರ ಮಾಹಿತಿಯನ್ನು ಆಧರಿಸಿ ಉಗ್ರ ನಿಗ್ರಹ ಪಡೆಯ ಅಧಿಕಾರಿಗಳು ಖ್ವೆಟ್ಟಾದ ಹೊರವಲಯದಲ್ಲಿ ದಾಳಿ ನಡೆಸಿದ್ದು, ನಾಲ್ವರು ಉಗ್ರರು ಹತ್ಯೆ ಮಾಡಲಾಗಿದೆ ಎಂದು ಬಲೊಚಿಸ್ತಾನ ಉಪ ಪೊಲೀಸ್ ಮಹಾ ನಿರ್ದೇಶಕ ರಝಾಕ್ ಚೀಮಾ ಅವರು ತಿಳಿಸಿದ್ದಾರೆ.
ಕಳೆದ ಸೋಮವಾರ ರಾತ್ರಿ ಪೊಲೀಸ್ ಅಕಾಡೆಮಿ ಮೇಲೆ ದಾಳಿ ನಡೆಸಿದ್ದ ಉಗ್ರರು, ಇಬ್ಬರು ಸೇನಾ ಸಿಬ್ಬಂದಿ ಸೇರಿದಂತೆ 60 ತರಬೇತಿ ನಿರತ ಪೊಲೀಸರು ಹತ್ಯೆ ಮಾಡಿದ್ದರು. ಅಲ್ಲದೆ ದಾಳಿಯಲ್ಲಿ 106ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.