ಭಾರತದಲ್ಲಿರುವ ತನ್ನ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳಲು ಪಾಕ್ ಚಿಂತನೆ

ಪಾಕಿಸ್ತಾನದ ಓರ್ವ ರಾಯಭಾರಿ ಅಧಿಕಾರಿಯನ್ನು ಅಂಗೀಕರಿಸಲು ಭಾರತ ನಿರಾಕರಿಸಿರುವ ಬೆನ್ನಲ್ಲೇ, ಭಾರತದಲ್ಲಿರುವ ತನ್ನ ನಾಲ್ವರು ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳಲು ಪಾಕಿಸ್ತಾನ ಚಿಂತನೆ.
ಭಾರತದಲ್ಲಿರುವ ತನ್ನ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳಲು ಪಾಕ್ ಚಿಂತನೆ
ಭಾರತದಲ್ಲಿರುವ ತನ್ನ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳಲು ಪಾಕ್ ಚಿಂತನೆ

ಇಸ್ಲಾಮಾಬಾದ್: ಪಾಕಿಸ್ತಾನದ ಓರ್ವ ರಾಯಭಾರಿ ಅಧಿಕಾರಿಯನ್ನು ಅಂಗೀಕರಿಸಲು ಭಾರತ ನಿರಾಕರಿಸಿರುವ ಬೆನ್ನಲ್ಲೇ, ಭಾರತದಲ್ಲಿರುವ ತನ್ನ ನಾಲ್ವರು ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳಲು ಪಾಕಿಸ್ತಾನ ಚಿಂತನೆ ನಡೆಸುತ್ತಿದೆ.

ಇದು ಕೇವಲ ಪ್ರಸ್ತಾಪವಾಗಿದ್ದು, ಶೀಘ್ರವೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಪಾಕಿಸ್ತಾನದ ವಿದೇಶಾಂಗ ಅಧಿಕಾರಿಗಳು ಹೇಳಿದ್ದಾರೆ. ವಾಣಿಜ್ಯ ವಿಭಾಗದ ವಿದೇಶಾಂಗ ಅಧಿಕಾರಿ ಸಯೀದ್ ಫುರ್ಕ್ ಹಬೀಬ್ ಹಾಗು ಖಾದಿಮ್ ಹುಸೇನ್, ಮುದಸ್ಸಿರ್ ಚೀಮಾ ಹಾಗು ಶಾಹಿದ್ ಇಕ್ಬಾಲ್ ಅವರನ್ನು ವಾಪಸ್ ಕರೆಸಿಕೊಳ್ಳುವ ಬಗ್ಗೆ ಪಾಕಿಸ್ತಾನ ಯೋಚಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಇದಕ್ಕೂ ಮುನ್ನ ಭಾರತ ಸರ್ಕಾರ ಪಾಕ್ ಹೈಕಮಿಷನರ್ ನ ಅಧಿಕಾರಿ ಮೆಹಮೂದ್ ಅಕ್ತರ್ ನನ್ನ ಉಚ್ಛಾಟಿಸಿ ಅಂಗೀಕರಿಸಲು ಸಿದ್ಧವಿಲ್ಲ ಎಂಬ ಮಾತನ್ನು ಹೇಳಿತ್ತು. ಪಾಕಿಸ್ತಾನದ ಅಧಿಕಾರಿಗಳು ಭಾರತದ ರಕ್ಷಣಾ ವಿವರಗಳ ಬಗ್ಗೆ ಬೇಹುಗಾರಿಕೆ ನಡೆಸುತ್ತಿರುವುದಕ್ಕೆ ಸಂಬಂಧಿಸಿದಂತೆ ಈ ಬೆಳವಣಿಗೆ ನಡೆದಿದ್ದು, ಪಾಕ್ ಸಂಚನ್ನು ಬಯಲುಗೊಳಿಸುವಂತಹ ಹೇಳಿಕೆ ನೀಡಿದ್ದ ಪಾಕ್ ಅಧಿಕಾರಿ ಮೆಹಮೂದ್ ಅಕ್ತರ್ ಈಗ ಉಲ್ಟಾ ಹೊಡೆದಿದ್ದಾರೆ.

ನನ್ನನ್ನು ಬಂಧಿಸಿದ ನಂತರ ಬಲವಂತದಿಂದ ಪಾಕ್ ವಿರುದ್ಧದ ಹೇಳಿಕೆಯನ್ನು ಪಡೆಯಲಾಗಿದೆ. ಒತ್ತಡದಲ್ಲಿ ಹೇಳಿಕೆ ನೀಡಿರುವುದಾಗಿ ಮೆಹಮೂದ್ ಅಕ್ತರ್ ತಿಳಿಸಿದ್ದಾರೆ. ಅಕ್ತರ್ ನೀಡಿದ್ದ ಹೇಳಿಕೆಯಲ್ಲಿ ಪಾಕ್ ಹೈಕಮಿಷನರ್ ನ 4 ಅಧಿಕಾರಿಗಳು  ಪಾಕ್ ನ ಗುಪ್ತಚರ ಸಂಸ್ಥೆ ಐಎಸ್ಐ ಗೆ ಸಂಬಂಧಿಸಿದವರು ಎಂದು ಮೆಹಮೂದ್ ಅಕ್ತರ್ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಮೆಹಮೂದ್ ಅಕ್ತರ್ ಪಾಕ್ ಹೈಕಮಿಷನರ್ ಅಧಿಕಾರಿಯನ್ನು ಉಚ್ಚಾಟಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com