ಪಾಕ್ ಪ್ರಧಾನಿ ನವಾಜ್ ಷರೀಫ್ ವಿರುದ್ಧ ತನಿಖೆಗೆ 'ಸುಪ್ರೀಂ' ಆದೇಶ

ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್‌‌ಗೆ ಗಂಡಾಂತರ ಶುರುವಾಗಿದೆ. ಪನಾಮ ಪೇಪರ್ ಹಗರಣಕ್ಕೆ ಸಂಬಂಧಿಸಿದಂತೆ ನವಾಜ್ ಷರೀಫ್ ವಿರುದ್ಧ...
ನವಾಜ್ ಷರೀಫ್
ನವಾಜ್ ಷರೀಫ್
ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್‌‌ಗೆ ಗಂಡಾಂತರ ಶುರುವಾಗಿದೆ. ಪನಾಮ ಪೇಪರ್ ಹಗರಣಕ್ಕೆ ಸಂಬಂಧಿಸಿದಂತೆ ನವಾಜ್ ಷರೀಫ್ ವಿರುದ್ಧ ತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿದೆ. 
ನವಾಜ್ ಷರೀಫ್ ಮತ್ತು ಅವರ ಕುಟುಂಬದ ವಿರುದ್ಧ ಪಾಕಿಸ್ತಾನ ತೆಹರೀಕ್-ಇ-ಇನ್ಸಾಫ್ ಪಕ್ಷದ ಮುಖಂಡ ಇಮ್ರಾನ್ ಖಾನ್ ಸೇರಿದಂತೆ ಹಲವರು ಭ್ರಷ್ಟಾಚಾರ ಆರೋಪ ಮಾಡಿ ಅರ್ಜಿ ಸಲ್ಲಿಸಿದ್ದರು. 
ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಗಳಾದ ಅನ್ವರ್ ಜಹೀರ್ ಜಮಾಲಿ, ಅಸಿಫ್ ಸೈಯಿದ್ ಖಾನ್, ಅಮಿರ್ ಹನಿ ಮುಸ್ಲಿಂ, ಶೇಕ್ ಸೈಯದ್ ಮತ್ತು ಇಜಾಜುಲ್ ಅಸಾನ್ ಐವರನ್ನು ಒಳಗೊಂಡ ತಂಡ ಈ ಆದೇಶವನ್ನು ನೀಡಿದೆ. 
ಈ ಪ್ರಕರಣ ಸಂಬಂಧ ತನಿಖಾ ತಂಡವನ್ನು ರಚಿಸಲು ಸುಪ್ರೀಂಕೋರ್ಟ್ ರೆಡಿ ಇದೆ ಎಂದು ನ್ಯಾಯಮೂರ್ತಿಗಳು ಹೇಳಿದೆ. ಅಲ್ಲದೆ ಸರ್ಕಾರ ಹಾಗೂ ಅರ್ಜಿದಾರರಿಗೆ ತಮ್ಮ ನಿಯಮವಳಿಗಳನ್ನು ತನಿಖಾ ತಂಡಕ್ಕೆ ನೀಡುವಂತೆ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com