ಅಭಿವೃದ್ಧಿಶೀಲ ದೇಶಗಳು ತಮ್ಮ ಗುರಿ ಸಾಧಿಸಲು ಬ್ರಿಕ್ಸ್ ರಾಷ್ಟ್ರಗಳು ಸಹಾಯ ಮಾಡಬೇಕಿದೆ: ಪ್ರಧಾನಿ ಮೋದಿ

ಅಭಿವೃದ್ಧಿಶೀಲ ದೇಶಗಳು ತಮ್ಮ ಗುರಿ ಸಾಧಿಸುವ ಅಗತ್ಯವಿದ್ದು, ಇಂತಹ ದೇಶಗಳಿಗೆ ಸಹಾಯ ಮಾಡುವುದು ಬ್ರಿಕ್ಸ್ ರಾಷ್ಟ್ರಗಳ ಜವಾಬ್ದಾರಿಯಾಗಿರುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ...
ಚೀನಾದ ಹಂಗ್'ಝೌ ನಗರದಲ್ಲಿ ನಡೆಯುತ್ತಿರುವ 2 ದಿನಗಳ ಜಿ.20 ಶೃಂಗಸಭೆಯಲ್ಲಿ ವಿಶ್ವನಾಯಕರು
ಚೀನಾದ ಹಂಗ್'ಝೌ ನಗರದಲ್ಲಿ ನಡೆಯುತ್ತಿರುವ 2 ದಿನಗಳ ಜಿ.20 ಶೃಂಗಸಭೆಯಲ್ಲಿ ವಿಶ್ವನಾಯಕರು

ಹಂಗ್'ಝೌ: ಚೀನಾದ ಹಂಗ್'ಝೌ ನಗರದಲ್ಲಿ 2 ದಿನಗಳ ಜಿ.20 ಶೃಂಗಸಭೆ ಭಾನುವಾರದಿಂದ ಆರಂಭಗೊಂಡಿದ್ದು, ಅಭಿವೃದ್ಧಿಶೀಲ ದೇಶಗಳು ತಮ್ಮ ಗುರಿ ಸಾಧಿಸುವ ಅಗತ್ಯವಿದ್ದು, ಇಂತಹ ದೇಶಗಳಿಗೆ ಸಹಾಯ ಮಾಡುವುದು ಬ್ರಿಕ್ಸ್ ರಾಷ್ಟ್ರಗಳ ಜವಾಬ್ದಾರಿಯಾಗಿರುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ.

2 ದಿನಗಳ ಕಾಲ ಜಿ20 ಶೃಂಗಸಭೆ ನಡೆಯಲಿದ್ದು, ಪ್ರಬಲ ಆರ್ಥಿಕ ವ್ಯವಸ್ಥೆಯನ್ನು ಹೊಂದಿರುವ ವಿಶ್ವದ 20 ರಾಷ್ಟ್ರಗಳು ಈ ಸಮಾವೇಶದಲ್ಲಿ ಭಾಗಿಯಾಗಲಿದೆ. ವಿಯೆಟ್ನಾಂ ಭೇಟಿ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿನ್ನೆ ಸಂಜೆಯಷ್ಟೇ ಚೀನಾದ ಹಂಗ್'ಝೌಗೆ ತಲುಪಿದ್ದರು.

ಇದೀಗ ಮೊದಲ ದಿನ ಸಮಾವೇಶ ಆರಂಭಗೊಂಡಿದ್ದು, ವಿಶ್ವನಾಯಕರು ಮಾತುಕತೆ ಆರಂಭಿಸಿದ್ದಾರೆ. ಸಮಾವೇಶದಲ್ಲಿ ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಬ್ರಿಕ್ಸ್ ರಾಷ್ಟ್ರಗಳ ಧ್ವನಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಪ್ರಭಾವಶಾಲಿ ಧ್ವನಿಯಾಗಿದೆ. ಹೀಗಾಗಿ ಅಭಿವೃದ್ಧಿಶೀಲ ರಾಷ್ಟ್ರಗಳೂ ತಮ್ಮ ಗುರಿ ಸಾಧಿಸಲು ಆ ದೇಶಗಳಿಗೆ ಸಹಾಯ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ.

ಬ್ರಿಕ್ಸ್ ನಲ್ಲಿರುವ ದೇಶಗಳನ್ನು ಹೊರತು ಪಡಿಸಿ ಇತರೆ ದೇಶಗಳ ಜನರನ್ನು ನಮ್ಮ ಹೆಜ್ಜೆಯಲ್ಲಿ ಭಾಗಿಯಾಗುವಂತೆ ಮಾಡಬೇಕಿದೆ. ವಿಶ್ವದ ಇನ್ನಿತರೆ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಲು ಇದೊಂದು ಉತ್ತಮ ಅವಕಾಶವಾಗಲಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com