
ಇಸ್ಲಾಮಾಬಾದ್: ಭಾರತದೊಂದಿಗೆ ವಾಣಿಜ್ಯ ವಹಿವಾಟು ನಡೆಸಲು ಅಫ್ಘಾನಿಸ್ತಾನಕ್ಕೆ ವಾಘಾ ಗಡಿ ಪ್ರದೇಶವನ್ನು ನಿರ್ಬಂಧಿಸಲಾಗಿಲ್ಲ ಎಂದು ಪಾಕಿಸ್ತಾನ ಸ್ಪಷ್ಟನೆ ನೀಡಿದೆ.
ವಾಘಾ ಗಡಿ ಮೂಲಕ ಭಾರತದೊಂದಿಗೆ ವಾಣಿಜ್ಯ ವಹಿವಾಟು ನಡೆಸಲು ಅಫ್ಘಾನಿಸ್ತಾನಕ್ಕೆ ನಿರ್ಬಂಧ ವಿಧಿಸಿದ್ದ ಪಾಕಿಸ್ತಾನದ ನಡೆಗೆ ಅಸಮಾಧಾನಗೊಂಡಿದ್ದ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ, ಭಾರತದೊಂದಿಗೆ ವಾಣಿಜ್ಯ ವಹಿವಾಟು ನಡೆಸಲು ಅನುಕೂಲವಾಗುವಂತೆ ಭೂಮಾರ್ಗದ ಗಡಿಯನ್ನು ಮುಕ್ತಗೊಳಿಸಿ ಇಲ್ಲವೇ ಮಧ್ಯ ಏಷ್ಯಾಗೆ ಸಂಪರ್ಕ ಕಲ್ಪಿಸುವ ಸಾರಿಗೆ ಮಾರ್ಗವನ್ನು ಸಂಪೂರ್ಣವಾಗಿ ಕಳೆದುಕೊಳ್ಳಲು ಸಿದ್ಧವಾಗಿರಿ ಎಂದು ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನೆ ಮಾಡಿದ್ದರು.
ಅಫ್ಘಾನಿಸ್ತಾನ ಅಧ್ಯಕ್ಷರ ಎಚ್ಚರಿಕೆ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಇಲಾಖೆ ಅಧಿಕಾರಿ ನಫೀಜ್ ಝಕಾರಿಯಾ, ಭಾರತಕ್ಕೆ ವಾಣಿಜ್ಯ ಉತ್ಪನ್ನಗಳನ್ನು ರವಾನಿಸಲು ಅಫ್ಘಾನಿಸ್ತಾನಕ್ಕೆ ವಾಘಾ ಗಡಿ ಮುಕ್ತವಾಗಿದೆ ಎಂದು ಹೇಳಿದ್ದಾರೆ. " ಅಫ್ಘಾನಿಸ್ತಾನದ ಜನತೆಗೆ ವ್ಯಾಪಾರ ಸಾರಿಗೆ ಸೌಲಭ್ಯವನ್ನು ಒದಗಿಸುವ ಬದ್ಧತೆಯನ್ನು ಪಾಕಿಸ್ತಾನ ಈಡೇರುಸುತ್ತದೆ ಎಂದಿದ್ದಾರೆ.
ಭಾರತಕ್ಕೆ ವಾಣಿಜ್ಯ ಉತ್ಪನ್ನಗಳನ್ನು ಸಾಗಿಸಲು ಪಾಕಿಸ್ತಾನ ವಾಘಾ ಗಡಿ ಪ್ರದೇಶದಲ್ಲಿ ನಮಗೆ ನಿರ್ಬಂಧ ವಿಧಿಸಿದರೆ, ನಾವು ಪಾಕಿಸ್ತಾನದ ಸರಕುಗಳು ಮಧ್ಯ ಏಷ್ಯಾಗೆ ತಲುಪದಂತೆ ನಿರ್ಬಂಧ ವಿಧಿಸುತ್ತೇವೆ ಎಂದು ಅಫ್ಘಾನಿಸ್ತಾನ ಎಚ್ಚರಿಕೆ ವಿಧಿಸಿತ್ತು.
Advertisement