ಇಂಡೋನೇಷ್ಯಾದ ಬಾಲಿ ಬೀಚ್ ನಲ್ಲಿ ಸ್ಫೋಟ; 2 ಸಾವು, 13ಕ್ಕೂ ಹೆಚ್ಚು ಮಂದಿಗೆ ಗಾಯ

ಇಂಡೋನೇಷ್ಯಾದ ಖ್ಯಾತ ಪ್ರವಾಸಿ ಕೇಂದ್ರ ಬಾಲಿ ಬೀಚ್ ನಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಲೊಂಬೊಕ್ ಬೀಚ್ ನಲ್ಲಿ ರಕ್ಷಣಾ ಕಾರ್ಯಾಚರಣೆ ನಿರತ ಸಿಬ್ಬಂದಿ(ಎಎಫ್ ಪಿ ಚಿತ್ರ)
ಲೊಂಬೊಕ್ ಬೀಚ್ ನಲ್ಲಿ ರಕ್ಷಣಾ ಕಾರ್ಯಾಚರಣೆ ನಿರತ ಸಿಬ್ಬಂದಿ(ಎಎಫ್ ಪಿ ಚಿತ್ರ)

ಬಾಲಿ: ಇಂಡೋನೇಷ್ಯಾದ ಖ್ಯಾತ ಪ್ರವಾಸಿ ಕೇಂದ್ರ ಬಾಲಿ ಬೀಚ್ ನಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಇಂಡೋನೇಷ್ಯಾದ ಖ್ಯಾತ ಪ್ರವಾಸಿ ಕೇಂದ್ರಗಳಾದ ಬಾಲಿ ಮತ್ತು ಲೊಂಬೊಕ್ ಬೀಚ್ ಗಳ ನಡುವಿನ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ದುರಂತದಲ್ಲಿ ಓರ್ವ ಇಂಡೋನೇಷ್ಯ ಪ್ರಜೆ  ಮತ್ತೋರ್ವ ವಿದೇಶಿ ಪ್ರಜೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸ್ ಮೂಲಗಳ ಪ್ರಕಾರ ಲೊಂಬೊಕ್ ಬೀಚ್ ನ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದ್ದು, ಬೋಟ್ ಎಂಜಿನ್ ನಲ್ಲಿನ  ತಾಂತ್ರಿಕ ದೋಷದಿಂದಾಗಿ ಎಂಜಿನ್ ಸ್ಫೋಟಗೊಂಡಿದೆ. ಸ್ಪೀಡ್ ಬೋಟ್ ಚಾಲ್ತಿಯಲ್ಲಿದ್ದ ಸಂದರ್ಭದಲ್ಲೇ ಸ್ಫೋಟ ಸಂಭವಿಸಿರುವುದರಿಂದ ಇಬ್ಬರು ಸಾವನ್ನಪ್ಪಿದ್ದು, 13ಕ್ಕೂ ಹೆಚ್ಚು ಮಂದಿ  ಗಾಯಗೊಂಡಿದ್ದಾರೆ.

ಪ್ರಯಾಣಿಕ ಸ್ಪೀಡ್ ಬೋಟ್ ನಲ್ಲಿ ಒಟ್ಟು 35 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು  ಮಾಡಲಾಗಿದೆ. ಇನ್ನು ಘಟನೆಯಲ್ಲಿ ಸಾವನ್ನಪ್ಪಿರುವ ವಿದೇಶ ಪ್ರಜೆ ಜರ್ಮನ್ ಮೂಲದವರೆಂದು ಹೇಳಲಾಗುತ್ತಿದೆಯಾದರೂ ಅಧಿಕಾರಿಗಳಿಂದ ಈ ಬಗ್ಗೆ ಯಾವುದೇ ಹೇಳಿಕೆಗಳು ಹೊರಬಂದಿಲ್ಲ.  ಪ್ರಕರಣ ದಾಖಲಿಸಿಕೊಂಡಿರುವ ಲೊಂಬೊಕ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com