ಇಸ್ರೇಲ್- ಅಮೆರಿಕ ನಡುವೆ 38 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ನೆರವಿನ ಒಪ್ಪಂದ

ಇಸ್ರೇಲ್- ಅಮೆರಿಕ ಸುಮಾರು 38 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ನೆರವು ಒಪ್ಪಂದಕ್ಕೆ ಸಹಿ ಹಾಕಿದ್ದು, ಅಮೆರಿಕ- ಇಸ್ರೇಲ್ ನಡುವೆ ಅಭೂತ ಪೂರ್ವ ರಕ್ಷಣಾ ಒಪ್ಪಂದ ಏರ್ಪಟ್ಟಿದೆ.
ಇಸ್ರೇಲ್- ಅಮೆರಿಕ ನಡುವೆ 38 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ನೆರವಿನ ಒಪ್ಪಂದ
ಇಸ್ರೇಲ್- ಅಮೆರಿಕ ನಡುವೆ 38 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ನೆರವಿನ ಒಪ್ಪಂದ

ವಾಷಿಂಗ್ ಟನ್: 2019-2028 ವರೆಗೆ ಒಪ್ಪಂದ ಅಸ್ತಿತ್ವದಲ್ಲಿರಲಿದ್ದು, 33 ಬಿಲಿಯನ್ ಡಾಲರ್ ನಷ್ಟು ವಿದೇಶಿ ಸೇನಾ ಹಣಕಾಸು ನಿಧಿ ಹಾಗೂ ಹಿಂದೆಂದಿಗಿಂತಲೂ ಹೆಚ್ಚು ಅಂದರೆ 5 ಬಿಲಿಯನ್ ಡಾಲರ್ ನ ಕ್ಷಿಪಣಿ ರಕ್ಷಣಾ ನೆರವನ್ನು ಇಸ್ರೇಲ್ ಅಮೆರಿಕದಿಂದ ಪಡೆದುಕೊಳ್ಳಲಿದೆ.

ಈ ಹಿಂದೆ 2007 ರಲ್ಲಿ ನಡೆದಿದ್ದ ಒಪ್ಪಂದ 2018 ಕ್ಕೆ ಮುಕ್ತಾಯಗೊಳ್ಳಲಿದ್ದು, ಆ ನಂತರದ ಆರ್ಥಿಕ ವರ್ಷ(2019) ರ ವೇಳೆಗೆ ಹೊಸ ಒಪ್ಪಂದ ಜಾರಿಗೆ ಬರಲಿದೆ. ಅಮೆರಿಕದ ರಕ್ಷಣಾ ಅಧೀನ ಕಾರ್ಯದರ್ಶಿ ಹಾಗೂ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಮ್ಮುಖದಲ್ಲಿ ಇಸ್ರೇಲ್ ನ ಹಂಗಾಮಿ ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿಗೆ ಒಪ್ಪಂದಕ್ಕೆ ಸಹಿಹಾಕಲಾಗಿದೆ.

ಒಪ್ಪಂದ ನಡೆಯುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಇಸ್ರೇಲ್ ನೊಂದಿಗೆ ನಡೆಯಲಿರುವ ರಕ್ಷಣಾ ನೆರವಿನ ಒಪ್ಪಂದ ಅಲ್ಲಿನ ಭದ್ರತೆಗೆ ಅಮೆರಿಕದ ಬದ್ಧತೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com