ಪತಿಯ ಬಳಿ ಗನ್ ಇಲ್ಲ ಗುಂಡು ಹಾರಿಸಬೇಡಿ: ಮೊಬೈಲ್ ನಲ್ಲಿ ದಾಖಲಾದ ಷಾರ್ಲೆಟ್ ಎನ್ ಕೌಂಟರ್

ಅಮೆರಿಕದ ಉತ್ತರ ಕ್ಯಾರೋಲಿನಾದಲ್ಲಿ ನಡೆದ ಎನ್ ಕೌಂಟರ್ ವಿಡಿಯೋ ಒಂದು ಭಾರಿ ಸುದ್ದಿ ಮಾಡುತ್ತಿದ್ದು, ವ್ಯಕ್ತಿಯ ಬಂಧನಕ್ಕೆ ಬಂಧನಕ್ಕೆ ಆಗಮಿಸಿದ್ದ ಪೊಲೀಸರನ್ನು ಆತನ ಪತ್ನಿ ಗುಂಡು ಹಾರಿಸದಂತೆ ಮನವಿ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಷಾರ್ಲೆಟ್ ಎನ್ ಕೌಂಟರ್ (ಎಪಿ ಚಿತ್ರ)
ಷಾರ್ಲೆಟ್ ಎನ್ ಕೌಂಟರ್ (ಎಪಿ ಚಿತ್ರ)

ಉತ್ತರ ಕ್ಯಾರೋಲಿನಾ: ಅಮೆರಿಕದ ಉತ್ತರ ಕ್ಯಾರೋಲಿನಾದಲ್ಲಿ ನಡೆದ ಎನ್ ಕೌಂಟರ್ ವಿಡಿಯೋ ಒಂದು ಭಾರಿ ಸುದ್ದಿ ಮಾಡುತ್ತಿದ್ದು, ವ್ಯಕ್ತಿಯ ಬಂಧನಕ್ಕೆ ಬಂಧನಕ್ಕೆ ಆಗಮಿಸಿದ್ದ ಪೊಲೀಸರನ್ನು  ಆತನ ಪತ್ನಿ ಗುಂಡು ಹಾರಿಸದಂತೆ ಮನವಿ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉತ್ತರ ಕ್ಯಾರೋಲಿನಾದಲ್ಲಿ ಸತತ ಮೂರು ದಿನಗಳ ಕಾಲ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪ್ರತಿಭಟನಾಕಾರರು ಹಾಗೂ ಭದ್ರತಾ ಪಡೆಗಳ ನಡುವಿನ ಕದನವಾಗಿ ಮಾರ್ಪಟ್ಟಿತ್ತು. ಈ  ಪ್ರಕರಣ ಸಂಬಂಧ ಅಂದು ಪ್ರತಿಭಟನೆ ನಡೆಸುತ್ತಿದ್ದ ಕೀತ್ ಲ್ಯಾಮಾಂಟ್ ಸ್ಕಾಟ್ ಎಂಬಾತನನ್ನು ಪೊಲೀಸರು ಬಂಧಿಸಲು ಆಗಮಿಸಿದ್ದಾರೆ. ಈ ವೇಳೆ ಶಸ್ತ್ರಸಜ್ಜಿತ ಪೊಲೀಸರು ಸ್ಕಾಟ್ ನನ್ನು  ಸುತ್ತುವರೆದಿದ್ದು, ಇದನ್ನು ದೂರದಿಂದಲೇ ನೋಡುತ್ತಿದ್ದ ಪತ್ನಿ ರಕೇಯಿಯಾ ಸ್ಕಾಟ್ ಕೂಡಲೇ ತನ್ನ ಮೊಬೈಲ್ ತೆಗೆದು ಚಿತ್ರೀಕರಿಸಿದ್ದಾಳೆ.

ಯಾವಾಗ ಪೊಲೀಸರು ತಮ್ಮ ಗನ್ ಗಳನ್ನು ತೆಗೆದು ಸ್ಕಾಟ್ ನತ್ತ ಗುರಿ ಮಾಡಿದರೋ ಆಗ ಹೆದರಿದ ರಕೇಯಿಯಾ ವಿಡಿಯೋ ಚಿತ್ರೀಕರಣ ಮಾಡುತ್ತಲೇ ತನ್ನ ಪತಿ ಬಳಿ ಯಾವುದೇ ರೀತಿಯ  ಶಸ್ತ್ರಾಸ್ತ್ರಗಳಿಲ್ಲ. ಅತನ ಕೈಯಲ್ಲಿ ಪುಸ್ತಕ ಮಾತ್ರವಿದೆ. ದಯಮಾಡಿ ಗುಂಡು ಹಾರಿಸಬೇಡಿ ಎಂದು ಕೂಗಿದ್ದಾಳೆ. ಈ ನಡುವೆಯೇ ಕೆಲ ಸುತ್ತು ಗುಂಡು ಹಾರಿದ್ದು, ಸ್ಕಾಟ್ ನನ್ನು ಪೊಲೀಸರು  ನೆಲಕ್ಕುರುಳಿಸಿ ಆತನ ಕೈಗಳನ್ನು ಕಟ್ಟಿ ಹಿಡಿದಿದ್ದಾರೆ. ಇವಿಷ್ಟೂ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕವಾಗಿ ಹರಿದಾಡುತ್ತಿದೆ.

ಇನ್ನು ಎನ್ ಕೌಂಟರ್ ವೇಳೆ ಗುಂಡೇಟು ತಿಂದ ಸ್ಕಾಟ್ ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆಯಾದರೂ, ಪೊಲೀಸರ ವಿರುದ್ಧ ಆತನ ಕುಟುಂಬದ ಸದಸ್ಯರು ಆರೋಪಗಳ ಸುರಿಮಳೆ  ಗೈದಿದ್ದಾರೆ. ತನ್ನ ಪತಿಯಾವುದೇ ತಪ್ಪು ಮಾಡಿಲ್ಲವೆಂದರೂ ಆತನ ಮೇಲೆ ಗುಂಡುಹಾರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕ್ಯಾರೋಲಿನಾ ಪೊಲೀಸರು  ಸ್ಕಾಟ್ ಬಳಿ ಗನ್ ಇತ್ತು. ನಾವು ಗುಂಡು ಹಾರಿಸುವುದು ಕೊಂಚ ತಡವಾಗಿದ್ದರೂ ಆತ ತಮ್ಮ ಮೇಲೆ ಗುಂಡು ಹಾರಿಸುತ್ತಿದ್ದ ಎಂದು ಹೇಳಿದ್ದಾರೆ.

ಆದರೆ ಸ್ಕಾಟ್ ಪತ್ನಿ ತೆಗೆದಿರುವ ವಿಡಿಯೋದಲ್ಲಿ ಸ್ಕಾಟ್ ಬಳಿ ಗನ್ ಇತ್ತೇ ಅಥವಾ ಇಲ್ಲವೇ ಎಂಬ ಪ್ರಶ್ನೆಗೆ ಯಾವುದೇ ರೀತಿಯ ಉತ್ತರ ದೊರೆಯುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com