ಸಿರಿಯಾದಲ್ಲಿ ವಿಷಾನಿಲ ದಾಳಿ: ಸಾವಿನ ಸಂಖ್ಯೆ 100ಕ್ಕೆ ಏರಿಕೆ, ವಿಶ್ವ ನಾಯಕರ ಖಂಡನೆ

ಬಂಡುಕೋರರ ಹಿಡಿತದಲ್ಲಿರುವ ಸಿರಿಯಾದಲ್ಲಿ ನಡೆಸಲಾಗಿದ್ದ ಶಂಕಿತ ವಿಷಾನಿಲ ದಾಳಿಗೆ ಬಲಿಯಾದವರ ಸಂಖ್ಯೆ ಬುಧವಾರ 100ಕ್ಕೆ ಏರಿಕೆಯಾಗಿದೆ.
ವಿಷಾನಿಲ ದಾಳಿಗೆ ಮೃತಪಟ್ಟಿರುವ ವ್ಯಕ್ತಿಗಳು
ವಿಷಾನಿಲ ದಾಳಿಗೆ ಮೃತಪಟ್ಟಿರುವ ವ್ಯಕ್ತಿಗಳು
ಬೈರೂತ್: ಬಂಡುಕೋರರ ಹಿಡಿತದಲ್ಲಿರುವ ಸಿರಿಯಾದಲ್ಲಿ ನಡೆಸಲಾಗಿದ್ದ ಶಂಕಿತ ವಿಷಾನಿಲ ದಾಳಿಗೆ ಬಲಿಯಾದವರ ಸಂಖ್ಯೆ ಬುಧವಾರ 100ಕ್ಕೆ ಏರಿಕೆಯಾಗಿದೆ. 
ಬಂಡುಕೋರರ ಹಿಡಿತದಲ್ಲಿರುವ ಸಿರಿಯಾದಲ್ಲಿ ನಿನ್ನೆ ಶಂಕಿತ ವಿಷಾನಿಲ ದಾಳಿ ನಡೆಸಲಾಗಿತ್ತು. ಮಕ್ಕಳು ಹಾಗೂ ಮಹಿಳೆಯರು ಸೇರಿದಂತೆ ಒಟ್ಟು 58 ನಾಗರೀಕರು ಬಲಿಯಾಗಿದ್ದರು. ಇದೀಗ ಸಾವಿನ ಸಂಖ್ಯೆ 100ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ. 
ಇದ್ಲಿಬ್ ಪ್ರಾಂತ್ಯದ ಖಾನ್ ಶೈಖೌನ್ ಪ್ರಾಂತ್ಯದಲ್ಲಿ ವಿಷಾನಿಲ ದಾಳಿ ನಡೆಸಲಾಗಿತ್ತು. ದಾಳಿಯಲ್ಲಿ 100 ಮಂದಿ ಸಾವನ್ನಪ್ಪಿದ್ದಾರೆಂದು ಸಿರಿಯಾದ ಮಾನವ ಹಕ್ಕು ಮೇಲ್ವಿಚಾರಣೆ ಸಂಸ್ಥೆ ಮಾಹಿತಿ ನೀಡಿದೆ. 
ರಾಸಾಯನಿಕ ದಾಳಿಗೆ ಒಳಗಾದ ಹೆಚ್ಚಿನವರು ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ. ಕೆಲವರು ವಾಂತಿಮಾಡಿಕೊಂಡಿದ್ದು, ಪ್ರಜ್ಞಾಹೀನರಾಗಿದ್ದಾರೆ, ಇನ್ನುಳಿದವರ ಬಾಯಲ್ಲಿ ನೊರೆ ಕಂಡು ಬಂದಿದೆ ಎಂದು ಮಾನವ ಹಕ್ಕು ಮೇಲ್ವಿಚಾರಣೆ ಸಂಸ್ಥೆ ತಿಳಿಸಿದೆ. 
ಸರ್ಕಾರದ ಹಿಡಿತದಲ್ಲಿರುವ ಸೇನೆಯ ಯುದ್ಧ ವಿಮಾನಗಳು ಶಂಕಿತ ವಿಷಾನಿಲ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದ್ದು, ದಾಳಿಯಲ್ಲಿ ಭಾಗಿಯಾಗಿದ್ದು ರಷ್ಯಾದ ಮೈತ್ರಿಕೂಟದ ವಿಮಾನಗಳೇ ಅಥವಾ ಸಿರಿಯಾದ್ದೇ ಎನ್ನುವುದು ಈವರೆಗೂ ಖಚಿತವಾಗಿಲ್ಲ. 
ಇದ್ಲಿಬ್ ಪ್ರಾಂತ್ಯ ಅಲ್ ಖೈದಾದ ಫಾತೆಹ್ ಅಲ್-ಶಾಮ್ ಫ್ರಂಟ್ ನ ನಿಯಂತ್ರಣದಲ್ಲಿದೆ. ರಷ್ಯಾ ಮತ್ತು ಅಮೆರಿಕಾದ ಯುದ್ಧ ವಿಮಾನಗಳು ಸಿರಿಯಾದಲ್ಲಿ ಉಗ್ರರನ್ನು ಗುರಿಯಾಗಿರಿಸಿಕೊಂಡು ನಿರಂತ ದಾಳಿ ನಡೆಸುತ್ತಿವೆ. ಅಮೆರಿಕದ ಮಿಲಿಟರಿ ದಾಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ರಾಸಾಯನಿಕ ಶಸ್ತ್ರಾಸ್ತ್ರ ಬಳಕೆ ನಿರ್ಬಂಧಕ್ಕೆ ಸಿರಿಯಾ ಸರ್ಕಾರ 2013ರಲ್ಲಿ ಒಪ್ಪಿಗೆ ಸೂಚಿಸಿತ್ತು. 
ಸಿರಿಯಾದ ವಿರೋಧ ಪಕ್ಷಗಳು ಅಧ್ಯಕ್ಷ ಬಷರ್ ಅಲ್-ಅಸಾದ್ ಪಡೆಗಳ ವಿರುದ್ಧ ಕಿಡಿಕಾರುತ್ತಿದ್ದು, ಈ ದಾಳಿ ಭವಿಷ್ಯದ ಶಾಂತಿಯುತ ಮಾತುಕತೆ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿಕೊಂಡಿವೆ. 
ಇನ್ನು ದಾಳಿಯಲ್ಲಿ ಕೈವಾಡವಿದೆ ಎಂಬ ಆರೋಪಗಳನ್ನು ಸೇನೆ ತಿರಸ್ಕರಿಸಿದ್ದು, ಉಗ್ರ ಸಂಘಟನೆಗಳು ರಾಸಾಯನಿಕ ದಾಳಿ ನಡೆಸಿವೆ ಎಂದು ಹೇಳಿದೆ. 
ಇನ್ನು ವಿಷಾನಿಲ ದಾಳಿಗೆ ಅಮೆರಿಕ, ಫ್ರಾನ್ಸ್ ಹಾಗೂ ಬ್ರಿಟನ್ ಸೇರಿದಂತೆ ವಿಶ್ವ ನಾಯಕರು ಖಂಡನೆ ವ್ಯಕ್ತಪಡಿಸಿದ್ದಾರೆ. 
'ಇದೊಂದು ಹೇಯ ಕೃತ್ಯ' ಎಂದು ಫ್ರಾನ್ಸ್ ವಿದೇಶಾಂಗ ಸಚಿವ ಜಿಯಾನ್ ಮಾರ್ಕ್ ಅರೌಲ್ಟ್ ಹೇಳಿದ್ದಾರೆ. 
ಖಾನ್ ಶೇಕ್ ಹೌಸ್ ಪಟ್ಟಣದ ಮೇಲೆ ಯಾವುದೇ ದಾಳಿ ನಡೆಸಿಲ್ಲ. ದಾಳಿಗೊಳಗಾದ ಜನರಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯ ಮೇಲೆಯೂ ನಾವು ದಾಳಿ ನಡೆಸಿದ್ದ ಎಂದು ರಷ್ಯಾ ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com