ಕುಲಭೂಷಣ್ ಜಾಧವ್ ಪ್ರಕರಣದ ನಡುವೆಯೇ 3 ಶಂಕಿತ 'ರಾ' ಗೂಢಚಾರರನ್ನು ಬಂಧಿಸಿದ ಪಾಕ್

ಸಿಪಿಇಸಿಯನ್ನು ಟಾರ್ಗೆಟ್ ಮಾಡುತ್ತಿರುವ ಆರೋಪದಡಿ ಪಾಕಿಸ್ತಾನ 3 ರಾ. ಶಂಕಿತ ಗೂಢಚಾರರನ್ನು ಬಂಧಿಸಿರುವುದಾಗಿ ಹೇಳಿದೆ.
ಪಾಕಿಸ್ತಾನ
ಪಾಕಿಸ್ತಾನ
ಇಸ್ಲಾಮಾಬಾದ್: ಕುಲಭೂಷಣ್ ಜಾಧವ್ ಗೆ ಗಲ್ಲು ಶಿಕ್ಷೆ ವಿಧಿಸಿರುವ ಪ್ರಕರಣದಿಂದ ಭಾರತ-ಪಾಕ್ ದ್ವಿಪಕ್ಷೀಯ ಸಂಬಂಧ ಮತ್ತಷ್ತು ಹದೆಗೆಟ್ಟಿದೆ. ಈ ನಡುವೆಯೇ ಸಿಪಿಇಸಿಯನ್ನು ಟಾರ್ಗೆಟ್ ಮಾಡುತ್ತಿರುವ ಆರೋಪದಡಿ ಪಾಕಿಸ್ತಾನ 3 ರಾ. ಶಂಕಿತ ಗೂಢಚಾರರನ್ನು ಬಂಧಿಸಿರುವುದಾಗಿ ಹೇಳಿದೆ. 
ಪಾಕಿಸ್ತಾನ 3 ರಾ. ಶಂಕಿತ ಗೂಢಚಾರರನ್ನು ಬಂಧಿಸಿರುವುದಾಗಿ ಹೇಳಿಕೊಂಡಿರುವ ಬಗ್ಗೆ ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಪ್ರಕಟಿಸಿದೆ. "ನಾವು ಮೂವರು ಭಯೋತ್ಪಾದಕರನ್ನು ಬಂಧಿಸಿದ್ದೇವೆ. ಬಂಧಿತ ಖಲೀಲ್, ಇಮ್ತಿಯಾಜ್, ರಶೀದ್ ಮೂವರು ಭಾರತದ ಗುಪ್ತಚರ, ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್ ನ ಏಜೆಂಟ್ ಗಳಾಗಿದ್ದು, ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯನ್ನು ಟಾರ್ಗೆಟ್ ಮಾಡುತ್ತಿದ್ದರು ಎಂದು ಅಲ್ಲಿನ ಪೊಲೀಸರು ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದನ್ನು ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. 
ಚೀನಾ ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆ, ಕಂಬೈನ್ಡ್ ಮಿಲಿಟರಿ ಹಾಸ್ಪೆಟಲ್ ರಾವಲಕೋಟ್, ಆಜಾದ್ ಕಾಶ್ಮೀರದಲ್ಲಿ ಚೀನಾ ಇಂಜಿನಿಯರ್ ಗಳನ್ನು ಟಾರ್ಗೆಟ್ ಮಾಡುವ ಕೆಲಸವನ್ನು ಈ ಮೂವರು ಏಜೆಂಟರಿಗೆ ಭಾರತ ವಹಿಸಿತ್ತು ಎಂದು ಪಾಕಿಸ್ತಾನದ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಮೂವರ ವಿರುದ್ಧವೂ ಭಯೋತ್ಪಾದನೆ ನಿಗ್ರಹ ಕಾಯ್ದೆಯ ಪ್ರಕಾರ ಪ್ರಕರಣ ದಾಖಲಿಸಿ ಪಾಕಿಸ್ತಾನದ ಭಯೋತ್ಪಾದನ ನಿಗ್ರಹ(ವಿರೋಧಿ) ನ್ಯಾಯಾಲಯದ ಎದುರು ಹಾಜರುಪಡಿಸುವುದಾಗಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com