ಅಮೆರಿಕ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಆಸ್ಪತ್ರೆಗೆ ದಾಖಲು

ಅನಾರೋಗ್ಯದಿಂದಾಗಿ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಹೆಚ್ ಡಬ್ಲ್ಯೂ ಬುಷ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಬುಧವಾರ ತಿಳಿದುಬಂದಿದೆ...
ಅಮೆರಿಕ ಮಾಜಿ ಅಧ್ಯಕ್ಷ ಜಾರ್ಜ್ ಹೆಚ್ ಡಬ್ಲ್ಯೂ ಬುಷ್
ಅಮೆರಿಕ ಮಾಜಿ ಅಧ್ಯಕ್ಷ ಜಾರ್ಜ್ ಹೆಚ್ ಡಬ್ಲ್ಯೂ ಬುಷ್
ಹೌಸ್ಟನ್: ಅನಾರೋಗ್ಯದಿಂದಾಗಿ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಹೆಚ್ ಡಬ್ಲ್ಯೂ ಬುಷ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಬುಧವಾರ ತಿಳಿದುಬಂದಿದೆ. 
ಜಾರ್ಜ್ ಬುಷ್ ಆಸ್ಪತ್ರೆಗೆ ದಾಖಲಾಗಿರುವುದನ್ನು ಬುಷ್ ವರ್ಕಾರ ಜಿಮಿ ಎಂಸಿಗ್ರಾತ್ ಅವರು ದೃಢಪಡಿಸಿದ್ದಾರೆ. ಜಾರ್ಜ್ ಬುಷ್ ಅವರಲ್ಲಿ ತೀವ್ರ ಕೆಮ್ಮು ಕಂಡು ಬಂದ ಹಿನ್ನಲೆಯಲ್ಲಿ ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರು ನ್ಯುಮೋನಿಯಾದಿಂದ ಬಳಲುತ್ತಿರುವುದಾಗಿ ಹೇಳಿದ್ದರು. ವೈದ್ಯರು ಚಿಕಿತ್ಸೆ ನೀಡಿದ್ದು, ಪರಿವೀಕ್ಷಣೆಯಲ್ಲಿರಿಸಿದ್ದಾರೆಂದು ಹೇಳಿದ್ದಾರೆ. 
ಮಾಜಿ ಅಧ್ಯಕ್ಷರು ಉತ್ತಮವಾದ ಶಕ್ತಿಯನ್ನು ಹೊಂದಿದ್ದು, ಶಕ್ತಿ ವೃದ್ಧಿಗಾಗಿ ವೈದ್ಯರು ಪರಿವೀಕ್ಷಣೆಯಲ್ಲಿರಿಸಿದ್ದಾರೆಂದು ಗ್ರಾತ್ ತಿಳಿಸಿದ್ದಾರೆ. 
ಕಳೆದ ಜನವರಿ ತಿಂಗಳಿನಲ್ಲಿ ಬುಷ್ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಅನಾರೋಗ್ಯಕ್ಕೆ ಕಾರಣವೇನುಎಂಬುದನ್ನು ತಿಳಿಸಿದ ವೈದ್ಯರು ಬುಷ್ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದರು. 
ಜಾರ್ಜ್ ಬುಷ್ ಸೀನಿಯರ್ ಅಮೆರಿಕಾದ ಜೀವಂತವಿರುವ ಅತಿ ಹಿರಿಯ ಮಾಜಿ ಅಧ್ಯಕ್ಷರಾಗಿದ್ದಾರೆ. 2015 ರಲ್ಲಿ ಕತ್ತು ಮೂಳೆ ಮುರಿದಿದ್ದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಬುಷ್ ಪಾರ್ಕಿನ್‍ಸನ್ ಸಮಸ್ಯೆಯನ್ನು ಎದುರಿಸುತ್ತಿದ್ದು, ಓಡಾಡಲು ವೀಲ್ ಚೇರ್ ಮೇಲೆ ಅವಲಂಬಿತರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com