ಆಫ್ಘಾನಿಸ್ತಾನ ಸೇನಾ ಕ್ಯಾಂಪ್ ಮೇಲೆ ಉಗ್ರರ ದಾಳಿ: 140ಕ್ಕೆ ಏರಿದ ಸಾವಿನ ಸಂಖ್ಯೆ

ಆಫ್ಘಾನಿಸ್ತಾನದ ಸೇನಾ ಕ್ಯಾಂಪ್ ಮೇಲಿನ ತಾಲಿಬಾನ್ ಉಗ್ರರ ದಾಳಿಯಲ್ಲಿ ಸಾವಿನ ಸಂಖ್ಯೆ 140ಕ್ಕೆ ಏರಿಕೆಯಾಗಿದೆ...
ಆಫ್ಘಾನ್ ಸೇನೆ
ಆಫ್ಘಾನ್ ಸೇನೆ
ಕಾಬುಲ್: ಆಫ್ಘಾನಿಸ್ತಾನದ ಸೇನಾ ಕ್ಯಾಂಪ್ ಮೇಲಿನ ತಾಲಿಬಾನ್ ಉಗ್ರರ ದಾಳಿಯಲ್ಲಿ ಸಾವಿನ ಸಂಖ್ಯೆ 140ಕ್ಕೆ ಏರಿಕೆಯಾಗಿದೆ. 
ಮಜರ್ ಇ ಷರೀಫ್ ನಗರದ ಉತ್ತರ ಭಾಗದಲ್ಲಿರುವ ಸೇನಾ ಕ್ಯಾಂಪ್ ಮೇಲೆ ಸುಮಾರು 10 ಮಂದಿ ತಾಲಿಬಾನ್ ಉಗ್ರರು ಅಟ್ಟಹಾಸ ಮೆರೆದಿದ್ದು, ಮನಸೋ ಇಚ್ಝೆ ಗುಂಡಿನ ಸುರಿಮಳೆ ಗರೆದಿದ್ದರು. ಈ ದಾಳಿಯಲ್ಲಿ ಆಫ್ಘಾನಿಸ್ತಾನದ 100ಕ್ಕೂ ಹೆಚ್ಚು ಯೋಧರು ಸೇರಿದಂತೆ 140 ಮಂದಿ ಮೃತಪಟ್ಟಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. 
ಆಫ್ಘಾನಿಸ್ತಾನ ಸೇನಾ ಸಮವಸ್ತ್ರದಂತೆಯೇ ಬಟ್ಟೆ ತೋಟ್ಟಿದ್ದ ಉಗ್ರರು ಅನುಮಾನ ಬಾರದಂತೆ ಸೇನಾ ಕ್ಯಾಂಪ್ ಪ್ರವೇಶಿಸಿದ್ದರು. ಈ ವೇಳೆ ಗುಂಡಿನ ಮಳೆಗರೆದಿದ್ದಾರೆ. 
ಕ್ಯಾಂಪ್ ನಲ್ಲಿದ್ದ ಇತರೆ ಸೈನಿಕರು ಕೂಡ ಪ್ರತಿದಾಳಿ ಮುಂದಾದರಾದರೂ ಉಗ್ರರನ್ನು ಮಟ್ಟಹಾಕಲು ಸಾಧ್ಯವಾಗಲ್ಲಿಲ್ಲ. ಕ್ಯಾಂಪ್ ಆಯಕಟ್ಟಿನ ಪ್ರದೇಶದಲ್ಲಿ ಅವಿತಿದ್ದ ಉಗ್ರರು ಗುಂಡಿನ ಮಳೆ ಗರೆದರು. ಉಗ್ರರು ಕೂಡ ಸೇನಾಸಮವಸ್ತ್ರದಲ್ಲೇ ಇದ್ದುದರಿಂದ ಯೋಧರು ಯಾರು? ಉಗ್ರರು ಯಾರು ಎಂಬ ಗೊಂದಲದಿಂದಾಗಿ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ಆಫ್ಘಾನಿಸ್ತಾನ ರಕ್ಷಣಾ ಇಲಾಖೆಯ ವಕ್ತಾರ ದಾವ್ಲತ್ ವಜೀರಿ ಹೇಳಿದ್ದಾರೆ. 
ಉಗ್ರ ದಾಳಿಯಲ್ಲಿ ಐವರು ಉಗ್ರರರನ್ನು ಆಫ್ಗಾನಿಸ್ತಾನ ಯೋಧರು ಹತ್ಯೆ ಮಾಡಿದ್ದು ಓರ್ವನನ್ನು ಸೆರೆ ಹಿಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com