ಕಿಮ್ ಜಾಂಗ್ ಹುನ್
ಕಿಮ್ ಜಾಂಗ್ ಹುನ್

ಉತ್ತರ ಕೊರಿಯಾದಲ್ಲಿ ಅಮೆರಿಕ ಮೂಲದ ವ್ಯಕ್ತಿ ಬಂಧನ

ಮಾಜಿ ಕೊರಿಯನ್-ಅಮೆರಿನ್ ಪ್ರೊಫೆಸರ್ ಅನ್ನು ಉತ್ತರ ಕೊರಿಯಾದ ಪಯೋಂಗ್ಯಾಂಗ್ ನಲ್ಲಿ ಬಂಧಿಸಲಾಗಿದೆ ಎಂದು ದಕ್ಷಿಣ ಕೊರಿಯಾದ ಯೊನ್ಯಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ...
ಸಿಯೋಲ್(ದಕ್ಷಿಣ ಕೊರಿಯಾ): ಮಾಜಿ ಕೊರಿಯನ್-ಅಮೆರಿನ್ ಪ್ರೊಫೆಸರ್ ಅನ್ನು ಉತ್ತರ ಕೊರಿಯಾದ ಪಯೋಂಗ್ಯಾಂಗ್ ನಲ್ಲಿ ಬಂಧಿಸಲಾಗಿದೆ ಎಂದು ದಕ್ಷಿಣ ಕೊರಿಯಾದ ಯೊನ್ಯಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ. 
ಪಯೋಂಗ್ಯಾಂಗ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಮೂಲಕ ಮೂವರು ಅಮೆರಿಕ ಮೂಲದ ವ್ಯಕ್ತಿಯನ್ನು ಉತ್ತರ ಕೊರಿಯಾ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಸುದ್ದಿಯಾಗಿದೆ. 
ಕೇವಲ ಕಿಮ್ ಎಂಬ ಸರ್ ನೇಮ್ ಇದ್ದಿದ್ದರಿಂದಲೇ ಆತನನ್ನು ಶುಕ್ರವಾರ ರಾತ್ರಿ ಉತ್ತರ ಕೊರಿಯಾ ಅಧಿಕಾರಿಗಳು ಬಂಧಿಸಿದ್ದಾರೆ. ಆದರೆ ಆತನನ್ನು ಯಾಕೆ ಬಂಧಿಸಿದ್ದಾರೆ ಎಂಬ ಮಾಹಿತಿಯನ್ನು ಉತ್ತರ ಕೊರಿಯಾ ಸರ್ಕಾರ ನೀಡಿಲ್ಲ. 
ಕಿಮ್ ಸೇರಿದಂತೆ ಇನ್ನಿಬ್ಬರು ಅಮೆರಿಕ ಮೂಲದವರಾದ ಕಾಲೇಜು ವಿದ್ಯಾರ್ಥಿ ಓಟೋ ವಾರ್ಮ್ಬಿಯರ್ ಮತ್ತು ಕೊರಿಯನ್-ಅಮೆರಿಕನ್ ಪಾದ್ರಿ ಕಿಮ್ ಡೊಂಗ್-ಚೂಲ್ ರನ್ನು ಬಂಧಿಸಿದ್ದು ದೇಶದ ವಿರುದ್ಧ ವಿಧ್ವಂಸಕ ಕೃತ್ಯಗಳು ನಡೆಸಿದ್ದಾರೆ ಎಂಬ ಆರೋಪದ ಮೇಲೆ ಈ ಇಬ್ಬರಿಗೆ ದೀರ್ಘ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. 

Related Stories

No stories found.

Advertisement

X
Kannada Prabha
www.kannadaprabha.com