ತಾಲಿಬಾನ್ ದಾಳಿ: ಅಫ್ಘಾನಿಸ್ತಾನ ರಕ್ಷಣಾ ಸಚಿವ, ಸೇನಾ ಮುಖಸ್ಥ ರಾಜಿನಾಮೆ

ಉತ್ತರ ಅಫ್ಘಾನಿಸ್ತಾನದ ಸೇನಾ ನೆಲೆಯ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದ ಬೆನ್ನಲ್ಲೇ ಅಫ್ಘಾನಿಸ್ತಾನ ರಕ್ಷಣಾ ಸಚಿವ ಹಾಗೂ ಸೇನಾ ಮುಖ್ಯಸ್ಥ ತಮ್ಮ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸಿದ್ದಾರೆಂದು ಸೋಮವಾರ ತಿಳಿದುಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕಾಬೂಲ್: ಉತ್ತರ ಅಫ್ಘಾನಿಸ್ತಾನದ ಸೇನಾ ನೆಲೆಯ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದ ಬೆನ್ನಲ್ಲೇ ಅಫ್ಘಾನಿಸ್ತಾನ ರಕ್ಷಣಾ ಸಚಿವ ಹಾಗೂ ಸೇನಾ ಮುಖ್ಯಸ್ಥ ತಮ್ಮ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸಿದ್ದಾರೆಂದು ಸೋಮವಾರ ತಿಳಿದುಬಂದಿದೆ. 
ಏಪ್ರಿಲ್ 21 ರಂದು ಉತ್ತರ ಅಫ್ಘಾನಿಸ್ತಾನದ ಸೇನಾ ನೆಲೆಯ ಮೇಲೆ ತಾಲಿಬಾನ್ ಉಗ್ರರು ಭೀಕರ ದಾಳಿ ನಡೆಸಿದ್ದರು. ದಾಳಿಯಲ್ಲಿ 100 ಭದ್ರತಾ ಪಡೆಗಳು ಸೇರಿದಂತೆ ಒಟ್ಟು 140 ಮಂದಿ ಸಾವನ್ನಪ್ಪಿದ್ದರು. 
ದಾಳಿಗೆ ಅಫ್ಘಾನಿಸ್ತಾನದ ಜನತೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ರಕ್ಷಣಾ ಸಚಿವ ಹಾಗೂ ಸೇನಾ ಮುಖ್ಯಸ್ಥರು ರಾಜಿನಾಮೆ ಸಲ್ಲಿಸುವಂತೆ ಆಗ್ರಹಿಸಿದ್ದರು. 
ಈ ಹಿನ್ನಲೆಯಲ್ಲಿ ಅಫ್ಘಾನಿಸ್ತಾನ ರಕ್ಷಣಾ ಸಚಿವ ಅಬ್ದುಲ್ಲಾ ಹಬಿಬಿ ಮತ್ತು ಸೇನಾ ಮುಖ್ಯಸ್ಥ ಕ್ವಾದಮ್ ಶಾ ಶಹೀಮ್ ಅವರು ಇಂದು ತಮ್ಮ ತಮ್ಮ ಸ್ಥಾನಗಳಿಗೆ ರಾಜಿನಾಮೆಯನ್ನು ಸಲ್ಲಿಸಿದ್ದು, ಅಧ್ಯಕ್ಷ ಅಶ್ರಫ್ ಘನಿಯವರು ರಾಜಿನಾಮೆ ಪತ್ರವನ್ನು ಅಂಗೀಕರಿಸಿದ್ದಾರೆಂದು ತಿಳಿದುಬಂದಿದೆ. 
ಅಫ್ಘನ್ ಸೇನಾ ಸಮವಸ್ತ್ರ ಧರಿಸಿದ್ದ ತಾಲಿಬಾನ್ ಉಗ್ರರು ಉತ್ತರು ಅಫ್ಘಾನಿಸ್ತಾನದ ಸೇನಾ ನೆಲೆಯ ಮೇಲೆ ಭೀಕರವಾಗಿ ದಾಳಿ ನಡೆಸಿದ್ದರು. ಹಿಂದೆಂದೂ ನಡೆಯದ ಭೀಕರ ದಾಳಿ ಇದಾಗಿತ್ತು ಎಂದು ಹೇಳಲಾಗುತ್ತಿತ್ತು. 
ದಾಳಿ ಹಿನ್ನಲೆಯಲ್ಲಿ ಸರ್ಕಾರದ ವಿರುದ್ಧ ತೀವ್ರ ಖಂಡನೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ನಿರ್ಲಕ್ಷ್ಯ ಹಿನ್ನಲೆಯಲ್ಲಿ ಇಬ್ಬರು ಜನರಲ್ ಗಳು ಸೇರಿದಂತೆ ಒಟ್ಟು 12 ಮಂದಿ ಸೇನಾಧಿಕಾರಿಗಳನ್ನು ವಜಾ ಮಾಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com