1960ರ ಸೆಪ್ಟೆಂಬರ್ 19ರಂದು ಕರಾಚಿಯಲ್ಲಿ ಸಿಂಧೂ ನದಿ ಜಲ ಒಪ್ಪಂದಕ್ಕೆ ಭಾರತ ಮತ್ತು ಪಾಕಿಸ್ತಾನ ಸಹಿ ಹಾಕಿದ್ದವು. ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ಒಪ್ಪಂದದ ಅನ್ವಯ ಪೂರ್ವದಲ್ಲಿ ಹರಿಯುವ ಬಿಯಾಸ್, ರಾವಿ, ಸಟ್ಲೇಜ್ ಭಾರತಕ್ಕೆ ಹಂಚಿಕೆ ಮಾಡಲಾಯಿತು. ಈ ನದಿಗಳು ಪಂಜಾಬ್ ನಿಂದ ಹರಿಯುತ್ತವೆ. ಪಶ್ಚಿಮದಲ್ಲಿರುವ ಸಿಂಧೂ, ಚೇನಬ್ ಮತ್ತು ಜೇಲಂ ಪಾಕಿಸ್ತಾನಕ್ಕೆ ಎಂದು ನಿರ್ಧರಿಸಲಾಯಿತು. ಈ ನದಿಗಳು ಜಮ್ಮು ಮತ್ತು ಕಾಶ್ಮೀರದಿಂದ ಹರಿಯುತ್ತವೆ.