ಇಮ್ರಾನ್ ಖಾನ್'ರಿಂದ ಅಶ್ಲೀಲ ಸಂದೇಶ ರವಾನೆ: ಬೇಸತ್ತ ಪಿಟಿಐ ಶಾಸಕಿ ರಾಜೀನಾಮೆ

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಇಮ್ರಾನ್ ಖಾನ್ ವಿರುದ್ಧ ತೆಹರೀಕ್-ಎ-ಇನ್ಸಾಫ್ ಪಕ್ಷದ ಮಹಿಳಾ ಶಾಸಕಿಯೊಬ್ಬರು ಅಶ್ಲೀಲ ಸಂದೇಶ ರವಾನಿಸಿದ...
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಇಮ್ರಾನ್ ಖಾನ್
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಇಮ್ರಾನ್ ಖಾನ್
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಇಮ್ರಾನ್ ಖಾನ್ ವಿರುದ್ಧ ತೆಹರೀಕ್-ಎ-ಇನ್ಸಾಫ್ ಪಕ್ಷದ ಮಹಿಳಾ ಶಾಸಕಿಯೊಬ್ಬರು ಅಶ್ಲೀಲ ಸಂದೇಶ ರವಾನಿಸಿದ ಆರೋಪ ಮಾಡಿದ್ದಾರೆ. 
ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಮುಖ್ಯಸ್ಥರಾಗಿರುವ ಇಮ್ರಾನ್ ಖಾನ್ ಅವರು ಅಶ್ಲೀಲ ಸಂದೇಶ ರವಾನಿಸುತ್ತಿದ್ದಾರೆಂದು ಶಾಸಕಿ ಆಯೆಷಾ ಗುಲಾಲೈ ಆರೋಪ ಮಾಡಿದ್ದು. ಈ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. 
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಆಯೆಷಾ ಗುಲಾಲೈ ಅವರು, ಇಮ್ರಾನ್ ಖಾನ್ ಅವರು ನನಗೆ ಕಳುಹಿಸಿರುವ ಅಶ್ಲೀಲ ಮೊಬೈಲ್ ಸಂದೇಶಗಳಿಂದ ಬೇಸತ್ತು ನಾನು ಅವರ ಪಕ್ಷದ ಶಾಸಕಿಯ ಸ್ಥಾನವನ್ನು ತ್ಯಜಿಸಲು ನಿರ್ಧರಿಸಿದ್ದೇನೆಂದು ಹೇಳಿದ್ದಾರೆ. 
2013ರ ಅಕ್ಟೋಬರ್ ತಿಂಗಳಿನಲ್ಲಿ ಇಮ್ರಾನ್ ಖಾನ್ ಅವರಿಂದ ಮೊದಲ ಬಾರಿಗೆ ನನ್ನ ಮೊಬೈಲ್ ಗೆ ಅಶ್ಲೀಲ ಸಂದೇಶ ಬಂದಿತ್ತು. ಸಂದೇಶಗಳು ಬೇರಾರಿಗೂ ತಿಳಿಯಬಾರದು ಹಾಗೂ ಅಳಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಇತರೆ ಮಹಿಳೆಯರು ಬ್ಲ್ಯಾಕ್'ಬೆರ್ರಿ ಮೊಬೈಲ್ ಗಳನ್ನೇ ಬಳಸುವಂತೆ ಇಮ್ರಾನ್ ತಾಕೀತು ಮಾಡುತ್ತಿದ್ದರು. ಅಶ್ಲೀಲ ಸಂದೇಶ ರವಾನಿಸಿರುವುದರ ಬಗ್ಗೆ ಮಾಹಿತಿ ಬೇಕಿದ್ದರೆ ಇಮ್ರಾನ್ ಅವರ ಬಳಿಯಿರುವ ಬ್ಲ್ಯಾಕ್'ಬೆರ್ರಿ ಮೊಬೈಲ್ ನ್ನು ಪರಿಶೀಲಿಸಿ. ನಂತರ ಎಲ್ಲವೂ ನಿಮಗೇ ತಿಳಿಯುತ್ತದೆ. 
ಗೌರವಯುತವಾಗಿ ಬದುಕುತ್ತಿರುವವರು ಯಾರೂ ಇದನ್ನು ಸಹಿಸಲು ಸಾಧ್ಯವಿಲ್ಲ. ಇಷ್ಟು ದಿನ ನಾನು ಮಾನಸಿಕ ಹಿಂಸೆಯನ್ನು ಅನುಭವಿಸಿದ್ದೇ. ಇದೇ ಕಾರಣಕ್ಕೆ ನಾನು ಪಕ್ಷಕ್ಕೆ ರಾಜೀನಾಮೆಯನ್ನು ನೀಡುತ್ತಿದ್ದೇನೆ. ನನ್ನಂತೆಯೇ ಇತರೆ ಮಹಿಳೆಯರೂ ಕೂಡ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಇಮ್ರಾನ್ ಖಾನ್'ಗೆ ತನ್ನನ್ನು ತಾನು ನಿಯಂತ್ರಿಕೊಳ್ಳುವುದು ತಿಳಿಯುತ್ತಿಲ್ಲ. ಅವರು ಮಾನಸಿಕ ರೋಗದಿಂದ ಬಳಲುತ್ತಿದ್ದು, ಪ್ರತಿಭಾವಂತ ವ್ಯಕ್ತಿಗಳನ್ನು ಅವರು ಸಹಿಸುವುದಿಲ್ಲ ಎಂದು ಗುಲಾಲೈ ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com