ಇಸ್ಲಾಮಾಬಾದ್: ಕೆಲಸ ಬಿಡಲು ನಿರಾಕರಿಸಿದ ಪತ್ನಿಯ ತಲೆಯನ್ನು ಪತಿ ಕಡಿದಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮೃತ ಮಹಿಳೆಯನ್ನು 37 ವರ್ಷದ ನಸ್ರಿನ್ ಎಂದು ಗುರುತಿಸಲಾಗಿದ್ದು ಈಕೆ ಪಾಕಿಸ್ತಾನದ ಲಾಹೋರ್ ನಲ್ಲಿ ನೆಲೆಸಿದ್ದರು. ಮೂರು ಮಕ್ಕಳ ತಾಯಿಯಾಗಿದ್ದಾರೆ.
ಕೂಲಿ ಕೆಲಸ ಮಾಡುತ್ತಾ ಮಕ್ಕಳನ್ನು ಪೋಷಿಸುತ್ತಿದ್ದ ನಸ್ರಿನ್ ರನ್ನು ಕೆಲಸ ಬಿಡುವಂತೆ ಪತಿ ಅಫ್ರಹಿಮ್ ಹೇಳಿದ್ದು ಇದಕ್ಕೆ ಪತ್ನಿ ಒಲ್ಲೆ ಅಂದಿದ್ದಾಳೆ. ಇದರಿಂದ ಆಕ್ರೋಶಗೊಂಡ ಅಫ್ರಹಿಮ್ ಆಕೆಯ ತಲೆ ಕಡಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.