ಅಮೆರಿಕಾಗೆ ಸೆಡ್ಡು ಹೊಡೆದಿದ್ದ ಉತ್ತರ ಕೊರಿಯಾಗೆ ಶಾಕ್ ನೀಡಿದ ಚೀನಾ!

ಉತ್ತರ ಕೊರಿಯಾಗೆ ಸದಾ ಬೆಂಬಲ ನೀಡುತ್ತಿದ್ದ ಮಿತ್ರ ರಾಷ್ಟ್ರ ಚೀನಾ ಇದೀಗ ಕೊರಿಯಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಕಲ್ಲಿದ್ದಲು, ಕಬ್ಬಿಣ, ಸೀಸ ಮತ್ತು...
ಡೊನಾಲ್ಡ್ ಟ್ರಂಪ್-ಕ್ಸಿ ಜಿನ್ ಪಿಂಗ್
ಡೊನಾಲ್ಡ್ ಟ್ರಂಪ್-ಕ್ಸಿ ಜಿನ್ ಪಿಂಗ್
ಬೀಜಿಂಗ್: ಉತ್ತರ ಕೊರಿಯಾಗೆ ಸದಾ ಬೆಂಬಲ ನೀಡುತ್ತಿದ್ದ ಮಿತ್ರ ರಾಷ್ಟ್ರ ಚೀನಾ ಇದೀಗ ಕೊರಿಯಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಕಲ್ಲಿದ್ದಲು, ಕಬ್ಬಿಣ, ಸೀಸ ಮತ್ತು ಸಮುದ್ರಾಹಾರವನ್ನು ಸಂಪೂರ್ಣವಾಗಿ ನಿಷೇಧಿಸಿದೆ. 
ಚೀನಾ ಎಂತಹ ಕಠಿಣ ಪರಿಸ್ಥಿತಿಯಲ್ಲೂ ಉತ್ತರ ಕೊರಿಯಾಗೆ ಬೆಂಬಲ ನೀಡುತ್ತಿತ್ತು. ಆದರೆ ಇದೀಗ ಉತ್ತರ ಕೊರಿಯಾದ ಉತ್ಪನ್ನಗಳನ್ನು ನಿಷೇಧಿಸುವ ಮೂಲಕ ಅಮೆರಿಕಾದ ಜತೆ ಯುದ್ಧೋತ್ಸಾಹದಲ್ಲಿದ್ದ ಕೊರಿಯಾಗೆ ಒಂದು ರೀತಿಯಲ್ಲಿ ಪರೋಕ್ಷ ಎಚ್ಚರಿಕೆ ನೀಡಿದೆ. 
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಆಗಸ್ಟ್ 5ರಂದು ಅನುಮೋದಿಸಿದ ನಿರ್ಬಂಧಗಳಿಗೆ ಅನುಗುಣವಾಗಿ ಚೀನಾ ಉತ್ಪನ್ನಗಳ ಆಮದನ್ನು ನಿಷೇಧಿಸಿದೆ. ಚೀನಾ ಸಹ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರವಾಗಿದ್ದು ತನ್ನ ವಿಟೋ ಅಧಿಕಾರ ಬಳಿಸಿ ಉತ್ತರ ಕೊರಿಯಾ ಉತ್ಪನ್ನಗಳನ್ನು ನಿಷೇಧಿಸಿದೆ. 
ಅಮೆರಿಕಾ ಹಾಗೂ ಉತ್ತರ ಕೊರಿಯಾ ನಡುವೆ ನಡೆಯುತ್ತಿರುವ ಶೀತಲ ಸಮರದ ಹಿನ್ನೆಲೆಯಲ್ಲಿ ಈ ನಿಷೇಧ ಹೆಚ್ಚು ಮಹತ್ವ ಪಡೆದುಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com