ಹಿಜ್ಬುಲ್ ಮುಜೀಹಿದ್ದೀನ್ ಸಂಘಟನೆ ಮುಖ್ಯಸ್ಥ ಸಯ್ಯದ್ ಸಲಾಹುದ್ದೀನ್
ವಿದೇಶ
ಹಿಜ್ಬುಲ್ ಮುಜಾಹಿದ್ದೀನ್ 'ವಿದೇಶಿ ಉಗ್ರ ಸಂಘಟನೆ': ಅಮೆರಿಕ ಘೋಷಣೆ
ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗೆ ಪ್ರಚೋದಿಸುತ್ತಿರುವ ಉಗ್ರ ಸಂಘಟನೆ 'ಹಿಜ್ಬುಲ್ ಮುಜಾಹಿದ್ದೀನ್' ಅನ್ನು 'ವಿದೇಶಿ ಭಯೋತ್ಪಾದನಾ ಸಂಘಟನೆ' ಎಂದು ಅಮೆರಿಕ ಬುಧವಾರ ಘೋಷಿಸಿದೆ...
ವಾಷಿಂಗ್ಟನ್: ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗೆ ಪ್ರಚೋದಿಸುತ್ತಿರುವ ಉಗ್ರ ಸಂಘಟನೆ 'ಹಿಜ್ಬುಲ್ ಮುಜಾಹಿದ್ದೀನ್' ಅನ್ನು 'ವಿದೇಶಿ ಭಯೋತ್ಪಾದನಾ ಸಂಘಟನೆ' ಎಂದು ಅಮೆರಿಕ ಬುಧವಾರ ಘೋಷಿಸಿದೆ.
ಸಂಘಟನೆಯ ಮುಖ್ಯಸ್ಥ ಸಯ್ಯದ್ ಸಲಾಹುದ್ದೀನ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಿದ ಬೆನ್ನಲ್ಲೇ ಅಮೆರಿಕ ಮತ್ತೊಂದು ದೊಡ್ಡ ಮಹತ್ವದ ನಿರ್ಧಾರ ಕೈಗೊಂಡಿದೆ.
ಇತ್ತೀಚಿನ ಕೆಲ ತಿಂಗಳುಗಳಿಂದ ಹಿಜ್ಬುಲ್ ಸಂಘಟನೆ ಕಾಶ್ಮೀರದಲ್ಲಿ ಸರಣಿ ಭಯೋತ್ಪಾದಕ ಕೃತ್ಯಗಳನ್ನು ಎಸಗುತ್ತಿರುವ ಹಿನ್ನಲೆಯಲ್ಲಿ ಅಮೆರಿಕಾವು ಹಿಜ್ಬುಲ್ ಮುಜಾಹಿದ್ದೀನ್ ನನ್ನು ಉಗ್ರ ಪಟ್ಟಿಗೆ ಸೇರ್ಪಡೆಗೊಳಿಸಿದೆ. ಈ ಸಂಘಟನೆಯೊಂದಿಗೆ ಯಾವುದೇ ಕಾರಣಕ್ಕೂ ಯಾವ ರೀತಿಯ ಒಪ್ಪಂಗಳನ್ನು ಅಮೆರಿಕಾದ ನಾಗರಿಕರು ಕೈಗೊಳ್ಳಬಾರದು ಎಂದು ಸರ್ಕಾರಿ ಪ್ರಕಟಣೆಯಲ್ಲಿ ಆದೇಶ ಹೊರಡಿಸಲಾಗಿದೆ.
ಈ ಘೋಷಣೆಯಿಂದಾಗಿ ಸಂಘಟನೆಯ ಮೇಲೆ ಸರಣಿ ನಿಷೇಧಗಳು ಜಾರಿಯಾಗಲಿವೆ. ಈ ಘೋಷಣೆ ಹಿಜ್ಬುಲ್ ಮುಜಾಹಿದ್ದೀನ್ ಗೆ ಭಯೋತ್ಪಾದನಾ ಚಟುವಟಿಕೆಗಳನ್ನು ನಿರ್ವಹಿಸಲು ಸಂಪನ್ಮೂಲ ಕ್ರೋಢೀಕರಣವನ್ನು ತಡೆಯುತ್ತದೆ. ಅಮೆರಿಕದ ವ್ಯಾಪ್ತಿಯಲ್ಲಿರುವ ಸಂಘಟನೆಯ ಆಸ್ತಿ ಮತ್ತು ಅವುಗಳಿಂದ ಬರುವ ಆದಾಯಗಳನ್ನು ತಡೆಹಿಡಿಯಲಾಗುತ್ತದೆ. ಸಂಘಟನೆಯೊಂದಿಗೆ ಅಮೆರಿಕದ ಪ್ರಜೆ ಯಾವುದೇ ವ್ಯವಹಾರಗಳನ್ನು ನಡೆಸುವುದಕ್ಕೆ ನಿಷೇಧವಿರುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ