ಪಾಕಿಸ್ತಾನದಲ್ಲಿ ಲವ್ ಜಿಹಾದ್: ಹಿಂದೂ ಹುಡುಗಿಯ ಅಪಹರಿಸಿ ಇಸ್ಲಾಂಗೆ ಬಲವಂತದ ಮತಾಂತರ, ಬಳಿಕ ಮದುವೆ ಆರೋಪ

ಕೇರಳದ ಲವ್ ಜಿಹಾದ್ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಪಾಕಿಸ್ತಾನದಲ್ಲೂ ಲವ್ ಜಿಹಾದ್ ಪ್ರಕರಣದ ಕುರಿತು ಅನುಮಾನಗಳು ವ್ಯಕ್ತಪಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕರಾಚಿ: ಕೇರಳದ ಲವ್ ಜಿಹಾದ್ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಪಾಕಿಸ್ತಾನದಲ್ಲೂ ಲವ್ ಜಿಹಾದ್ ಪ್ರಕರಣದ ಕುರಿತು ಅನುಮಾನಗಳು ವ್ಯಕ್ತಪಾಗುತ್ತಿದೆ.
ಪಾಕಿಸ್ತಾನದ ಕರಾಚಿಯ ಥಾರ್ ಗ್ರಾಮದಲ್ಲಿ ಹಿಂದೂ ಧರ್ಮಕ್ಕೆ ಸೇರಿದ ಯುವತಿಯೋರ್ವಳನ್ನು ದುಷ್ಕರ್ಮಿಗಳು ಅಪಹರಿಸಿ ಆಕೆಯನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಗೊಳಿಸಿದ್ದಾರೆ. ಬಳಿಕ ಮುಸ್ಲಿಂ  ಯುವಕನೊಂದಿಗೆ ಅಕ್ರಮವಾಗಿ ಮದುವೆ ಮಾಡಿದ್ದಾರೆ ಎಂದು ಯುವತಿಯ ಪೋಷಕರು ದೂರು ನೀಡಿದ್ದಾರೆ.
ಈ ಬಗ್ಗೆ ಯುವತಿ ಪೋಷಕರು ಮತ್ತು ಸಂಬಂಧಿಕರು ಇಸ್ಲಾಮ್ ಕೋಟ್ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಮೂವರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ದಿಢೀರನೇ ತಮ್ಮ ಮನೆ ಮೇಲೆ ದಾಳಿ ಮಾಡಿದರು. ಈ  ವೇಳೆ ಮನೆಯೊಳಗಿದ್ದ ತಮ್ಮ ಪುತ್ರಿಯನ್ನು ಅಪಹರಿಸಿದ್ದಾರೆ. ಬಳಿಕ ಆಕೆಯನ್ನು ತಮ್ಮ ಮನೆಗೆ ಎಳೆದೊಯ್ದು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡು ಬಳಿಕ ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದ್ದಾರೆ. ಬಳಿಕ  ಆಕೆಯನ್ನು ಓರ್ವ ಯುವಕನೊಂದಿಗೆ ವಿವಾಹ ಮಾಡಿಸಿದ್ದಾರೆ ಎಂದು ಯುವತಿ ತಂದೆ ಮೇಘ್ವಾರ್ ಆರೋಪಿಸಿದ್ದಾರೆ. 
ಈ ಬಗ್ಗೆ ಯುವತಿ ತಂದೆ ಮೇಘ್ವಾರ್ ಸ್ಥಳೀಯ ಪೊಲೀಸರಿಗೆ ದೂರು ನೀಡಿದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಆದರೆ ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಥಾರ್ ಗ್ರಾಮದ  ಪೊಲೀಸ್ ವರಿಷ್ಠಾಧಿಕಾರಿಗಳು ಎಫ್ ಐಆರ್ ದಾಖಲಿಸಿಕೊಂಡಿರುವುದಾಗಿ ಹೇಳಿದ್ದಾರೆ.
ಏತನ್ಮಧ್ಯೆ ಇದೀಗ ಲವ್ ಜಿಹಾದ್ ಪ್ರಕರಣಕ್ಕೆ ತುತ್ತಾಗಿರುವ ಯುವತಿ ತನ್ನ ಪತಿಯೊಂದಿಗೆ ಆಗಮಿಸಿ ತಮಗೆ ಜೀವ ಬೆದರಿಕೆ ಇದ್ದು ರಕ್ಷಣೆ ನೀಡುವಂತೆ ಸಿಂಧ್ ಹೈಕೋರ್ಟ್ ಗೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com