ರಷ್ಯಾ ಅಧ್ಯಕ್ಷೀಯ ಚುನಾವಣೆ: ಪುಟಿನ್ ಎದುರಾಳಿ ನಾವಲ್ನಿ ಸ್ಪರ್ಧೆ ತಿರಸ್ಕಾರ

ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಪ್ರಬಲ ಎದುರಾಳಿ ಎಂದೇ ಸುದ್ದಿಗೆ ಗ್ರಾಸವಾಗಿದ್ದ ವಿರೋಧ ಪಕ್ಷದ ಮುಖಂಡ ಅಲೆಕ್ಸೀ ನಾವಲ್ನಿಗೆ ಅಲ್ಲಿನ ಚುನಾವಣಾ ಆಯೋಗ ದೊಡ್ಡ ಆಘಾತ ನೀಡಿದ್ದು, ನಾವಲ್ನಿ ಅವರ ಸ್ಪರ್ಧೆಯನ್ನೇ ಅನೂರ್ಜಿತ ಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಾಸ್ಕೋ: ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಪ್ರಬಲ ಎದುರಾಳಿ ಎಂದೇ ಸುದ್ದಿಗೆ ಗ್ರಾಸವಾಗಿದ್ದ ವಿರೋಧ ಪಕ್ಷದ ಮುಖಂಡ ಅಲೆಕ್ಸೀ ನಾವಲ್ನಿಗೆ ಅಲ್ಲಿನ ಚುನಾವಣಾ ಆಯೋಗ ದೊಡ್ಡ  ಆಘಾತ ನೀಡಿದ್ದು, ನಾವಲ್ನಿ ಅವರ ಸ್ಪರ್ಧೆಯನ್ನೇ ಅನೂರ್ಜಿತ ಗೊಳಿಸಿದೆ.
ಅಲೆಕ್ಸೀ ನಾವಲ್ನಿ ವಿರುದ್ಧ ಕೇಳಿಬಂದಿರುವ ಅಧಿಕಾರ ದುರುಪಯೋಗದಂತಹ ಗಂಭೀರ ಆರೋಪ ಮತ್ತು ಆ ಸಂಬಂಧದ ತೀರ್ಪಿನ ಅಧಾರದ ಮೇರೆಗೆ ಅವರ ಅಧ್ಯಕ್ಷೀಯ ಚುನಾವಣಾ ಸ್ಪರ್ಧೆಯನ್ನು ಅನೂರ್ಜಿತಗೊಳಿಸಲಾಗಿದೆ  ಎಂದು ರಷ್ಯಾ ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ನಾವಲ್ನಿ ವಿರುದ್ಧ ಈ ಹಿಂದೆ ಅಲ್ಲಿನ ಕೋರ್ಟ್ ಐದು ವರ್ಷಗಳ ಅಮಾನತು ಶಿಕ್ಷೆ ಹೊರಡಿಸಿತ್ತು. ಇದರ ಹೊರತಾಗಿಯೂ ನಾವಲ್ನಿ ತಾವೇ ಮುಂದಿನ ಅಧ್ಯಕ್ಷೀಯ  ಚುನಾವಣೆಯ ಪ್ರತಿಪಕ್ಷ ಅಭ್ಯರ್ಥಿ ಎಂದು ಹೇಳಿಕೊಂಡಿದ್ದರು.
ಅಲ್ಲದೆ ರಷ್ಯಾದ 20 ನಗರಗಳಲ್ಲಿ ಯಾತ್ರೆ ನಡೆಸಿ ಅಲ್ಲಿನ ಜನಪ್ರತಿನಿಧಿಗಳ ಸಹಿ ಕೂಡ ಪಡೆದಿರುವುದಾಗಿ ಹೇಳಿಕೊಂಡಿದ್ದರು. 
ಚುನಾವಣಾ ರದ್ದುಗೊಳಿಸಿಲು ಪ್ರತಿಪಕ್ಷಗಳ ಪ್ರತಿಭಟನೆ
ಅತ್ತ ರಷ್ಯಾ ಚುನಾವಣಾ ಆಯೋಗ ಅಧ್ಯಕ್ಷೀಯ ಚುನಾವಣೆಯಿಂದ ನಾವಲ್ನಿ ಅವರ ಸ್ಪರ್ಧೆಯನ್ನು ಅನೂರ್ಜಿತಗೊಳಿಸುತ್ತಿದ್ದಂತೆಯೇ ಇತ್ತ ಪ್ರತಿಪಕ್ಷಗಳು ಚುನಾವಣಾ ಆಯೋಗ ಮತ್ತು ಪುಟಿನ್ ಸರ್ಕಾರದ ವಿರುದ್ಧ ಪ್ರತಿಭಟನೆಗೆ  ಇಳಿಯಲು ಮುಂದಾಗಿವೆ. ಅಲ್ಲದೆ ಅಧ್ಯಕ್ಷೀಯ ಚುನಾವಣೆಯನ್ನೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com