ದಕ್ಷಿಣ ಚೀನಾ ಸಮುದ್ರ ವಿವಾದ: ಅಮೇರಿಕ-ಚೀನಾ ನಡುವೆ ಸೇನಾ ಸಮರದ ಆತಂಕ: ಗಾರ್ಡಿಯನ್

ಸೌತ್ ಚೈನಾ ಸಮುದ್ರದ ಬಗ್ಗೆ ಅಮೆರಿಕಾ ಮತ್ತು ಚೈನಾ ತಿಕ್ಕಾಟ ತಾರಕಕ್ಕೇರಿ ಮಿಲಿಟರಿ ಮುಖಾಮುಖಿಯ ಅಪಾಯ ಇದೆ ಎಂದು ಬ್ರಿಟಿಷ್ ದಿನಪತ್ರಿಕೆ ವರದಿ ಮಾಡಿದೆ. ಈ ಮಿಲಿಟರಿ ಮುಖಾಮುಖಿಯ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹಾಂಕಾಂಗ್: ಸೌತ್ ಚೈನಾ ಸಮುದ್ರದ ಬಗ್ಗೆ ಅಮೆರಿಕಾ ಮತ್ತು ಚೈನಾ ತಿಕ್ಕಾಟ ತಾರಕಕ್ಕೇರಿ ಮಿಲಿಟರಿ ಮುಖಾಮುಖಿಯ ಅಪಾಯ ಇದೆ ಎಂದು ಬ್ರಿಟಿಷ್ ದಿನಪತ್ರಿಕೆ ವರದಿ ಮಾಡಿದೆ. ಈ ಮಿಲಿಟರಿ ಮುಖಾಮುಖಿಯ ಬಗ್ಗೆ ಎಚ್ಚರಿಕೆ ನೀಡಿದ್ದ ವ್ಯಕ್ತಿಯೊಬ್ಬರನ್ನು ಡೊನಾಲ್ಡ್ ಟ್ರಂಪ್ ತಮ್ಮ ಆಡಳಿತದ ಪ್ರಮುಖ ಸ್ಥಾನಕ್ಕೆ ಸೇರಿಸಿಕೊಂಡಿರುವುದು ಮತ್ತು ಅಮೆರಿಕಾ ರೆಕ್ಸ್ ಸ್ಟೇಟ್ ನ ಕಾರ್ಯದರ್ಶಿ ಟಿಲ್ಲಸ್ರನ್ ನೀಡಿರುವ ಹೇಳಿಕೆಗಳು ಇಂತಹ ಅಪಾಯದ ಮುನ್ಸೂಚನೆ ನೀಡಿದೆ ಎಂದು ಗಾರ್ಡಿಯನ್ ಗುರುವಾರ ವರದಿ ಮಾಡಿದೆ. 
"ಏಳು ಕೃತಕ ದ್ವೀಪಗಳಿಗೆ ಚೈನಾ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ" ಎಂದು ಟಿಲ್ಲರ್ಸನ್ ಹೇಳಿದ್ದರು ಎಂದು ಗಾರ್ಡಿಯನ್ ವರದಿ ಮಾಡಿದೆ. 
ಹಾಗೆಯೇ ಬಲಪಂಥೀಯ ಅಂತರ್ಜಾಲ ಪತ್ರಿಕೆಯ ಮಾಜಿ ಮುಖ್ಯಸ್ಥ ಸ್ಟೀವ್ ಬ್ಯಾನನ್ ಏಷಿಯಾದಲ್ಲಿ ಚೈನಾ ಬಲಶಾಲಿಯಾಗಿ ಬೆಳೆಯುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಮತ್ತು ಈಗ ಅವರು ಟ್ರಂಪ್ ಅವರ ಅಧಿಕಾರಿ ಬಳಗದಲ್ಲಿ ಪ್ರಮುಖ ಸ್ಥಾನವನ್ನು ಅಲಂಕರಿಸಿದ್ದಾರೆ ಎಂದು ಕೂಡ ಪತ್ರಿಕೆ ವರದಿ ಮಾಡಿದೆ. 
ಅಚ್ಚರಿಯ ನಡೆಯಲ್ಲಿ ಬ್ಯಾನನ್ ಅವರನ್ನು ರಾಷ್ಟೀಯ ಭದ್ರತಾ ಮಂಡಳಿಯ, ನಿಯಮಾವಳಿ ಸಮಿತಿಗೆ ನೇಮಿಸಲಾಗಿದ್ದು, ಟ್ರಂಪ್ ಸಹಿ ಮಾಡಿರುವ ಮುಸ್ಲಿಂ ಬಹುಸಂಖ್ಯಾತ ಏಳು ರಾಷ್ಟ್ರಗಳ ವಲಸೆ ನಿಷೇಧ ಆದೇಶಕ್ಕೆ ಕೂಡ ಇವರು ಕಾರಣಕರ್ತರು ಎನ್ನಲಾಗಿದೆ. 
ಮಾರ್ಚ್ ೨೦೧೬ ರಲ್ಲಿ ನೀಡಿದ ರೇಡಿಯೋ ಕಾರ್ಯಕ್ರಮವೊಂದರಲ್ಲಿ ಬ್ಯಾನನ್ "ಇನ್ನು ಐದು ವರ್ಷಗಳಲ್ಲಿ ಅಮೆರಿಕಾ ಸೌತ್ ಚೈನಾ ಸಮುದ್ರದಲ್ಲಿ ಯುದ್ಧಕ್ಕೆ ಇಳಿಯುತ್ತದೆ... ಅದರ ಬಗ್ಗೆ ಯಾವುದೇ ಅನುಮಾನವಿಲ್ಲ" ಎಂದಿದ್ದರು. 
ಸಂಪೂರ್ಣ ಸೌತ್ ಚೈನಾ ಸಮುದ್ರದ ಒಡೆತನವನ್ನು ಚೈನಾ ಸಾಧಿಸುತ್ತಿದ್ದು, ಹಲವಾರು ಕೃತಕ ದ್ವೀಪಗಳನ್ನು ನಿರ್ಮಿಸಿ ಮಿಲಿಟರಿಯನ್ನು ಕೂಡ ನಿಯೋಜಿಸಿದೆ. 
ಟ್ರಂಪ್ ಅವರು ಅಧಿಕಾರ ಸ್ವೀಕರಿಸಿದ ದಿನ ಎರಡು ದೇಶಗಳ ನಡುವೆ ಯುದ್ಧ ನಿಜವಾಗುವ ಸಾಧ್ಯತೆಯಿದೆ ಇದೆ ಎಂದು ಚೈನಾ ಮಿಲಿಟರಿ ಎಚ್ಚರಿಸಿತ್ತು. 
"ಈ ಅಧ್ಯಕ್ಷರ ಅವಧಿಯಲ್ಲಿ ಯುದ್ಧ ಅಥವಾ ಇಂದು ರಾತ್ರಿ ಯುದ್ಧವಾಗುವುದು ಕೇವಲ ಘೋಷಣೆಗಳಲ್ಲ, ಅವುಗಳು ನಿಜವಾಗುವ ಎಲ್ಲ ಸಾಧ್ಯತೆಗಳಿವೆ" ಎಂದು ಪೀಪಲ್ಸ್ ಲಿಬರೇಶನ್ ಆರ್ಮಿ ಅಂತರ್ಜಾಲ ತಾಣದಲ್ಲಿ ಒಬ್ಬ ಅಧಿಕಾರಿ ಬರೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com