ಭಾರತ ಭಯೋತ್ಪಾದನೆಯಲ್ಲಿ ತನ್ನ ಪಾತ್ರ ಏನೆಂಬುದನ್ನು ನೋಡಿಕೊಳ್ಳಲಿ: ಪಾಕ್

ಮುಂಬೈ ದಾಳಿಯ ರೂವಾರಿ ಉಗ್ರ ಹಫೀಜ್ ಸೈಯೀದ್ ಗೃಹ ಬಂಧನಕ್ಕೆ ಪೂರಕ ಸಾಕ್ಷ್ಯಾಧಾರ ಕೇಳಿದ್ದ ಭಾರತಕ್ಕೆ ಪಾಕಿಸ್ತಾನ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ಭಾರತ ಭಯೋತ್ಪಾದನೆಯಲ್ಲಿ ತನ್ನ ಪಾತ್ರ ಏನೆಂಬುದನ್ನು ನೋಡಿಕೊಳ್ಳಲಿ: ಪಾಕ್
ಭಾರತ ಭಯೋತ್ಪಾದನೆಯಲ್ಲಿ ತನ್ನ ಪಾತ್ರ ಏನೆಂಬುದನ್ನು ನೋಡಿಕೊಳ್ಳಲಿ: ಪಾಕ್
ಇಸ್ಲಾಮಾಬಾದ್: ಮುಂಬೈ ದಾಳಿಯ ರೂವಾರಿ ಉಗ್ರ ಹಫೀಜ್ ಸೈಯೀದ್ ಗೃಹ ಬಂಧನಕ್ಕೆ ಪೂರಕ ಸಾಕ್ಷ್ಯಾಧಾರ ಕೇಳಿದ್ದ ಭಾರತಕ್ಕೆ ಪಾಕಿಸ್ತಾನ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಭಾರತ ಪಾಕಿಸ್ತಾನದ ನೆಲದಲ್ಲಿ ನಡೆಸುತ್ತಿರುವ ಭಯೋತ್ಪಾದನೆಯ ಬಗ್ಗೆಯೂ ವಿಚಾರ ಮಾಡಬೇಕೆಂದು ಹೇಳಿದೆ. 
ಭಯೋತ್ಪಾದನೆ ವಿಚಾರದಲ್ಲಿ ಅನ್ಯರನ್ನು ದೂಷಿಸುವುದಕ್ಕೂ ಮುನ್ನ ಭಾರತ ತಾನು ಪಾಕಿಸ್ತಾನದಲ್ಲಿ ನಡೆಸುತ್ತಿರುವ ಭಯೋತ್ಪಾದನೆ ಬಗ್ಗೆ ಯೋಚನೆ ಮಾಡಬೇಕು ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರ ನಫೀಸ್ ಜಕಾರಿಯ ಹೇಳಿದ್ದಾರೆ. 
ಪಾಕಿಸ್ತಾನದಲ್ಲಿ ಭಾರತವೇ ಭಯೋತ್ಪಾದನೆ ನಡೆಸುತ್ತಿದ್ದು, ಕಾಶ್ಮೀರಿಗಳ ಮೇಲೆ ದಾಳಿ ನಡೆಯುತ್ತಿದೆ.  ಕಳೆದ ವರ್ಷ ಅಜಾಗರೂಕತೆಯಿಂದ ನಾರೋವಾಲ್ ಪ್ರದೇಶದಿಂದ ಪಂಜಾಬ್ ಗಡಿಯನ್ನು ದಾಟಿದ್ದ ಮೂವರು ಯುವಕರು ಇನ್ನೂ ಜೈಲಿನಲ್ಲಿಯೇ ಇದ್ದಾರೆ. ಈ ಬಗ್ಗೆ ಭಾರತ ಸರ್ಕಾರದೊಂದಿಗೆ ಚರ್ಚಿಸಲಾಗಿದೆಯಾದರೂ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಜಕಾರಿಯಾ ಹೇಳಿದ್ದಾರೆ. 
ಮುಂಬೈ ದಾಳಿ ರೂವಾರಿ, ಪಾಕಿಸ್ತಾನದ ಜಮಾತ್-ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದ್ ರನ್ನು ಗೃಹಬಂಧನದಲ್ಲಿ ಇಡಲಾಗಿದೆ ಎಂದು ಪಾಕ್ ಪತ್ರಿಕೆಗಳಲ್ಲಿ ವರದಿಯಾಗಿದ್ದು ಇದು ನಂಬಲು ಸಾಧ್ಯವಿಲ್ಲ ಎಂದಿದ್ದ ಭಾರತ ಈ ಸಂಬಂಧ ಪೂರಕ ಸಾಕ್ಷ್ಯಾಧಾರ ನೀಡುವಂತೆ ಪಾಕಿಸ್ತಾನವನ್ನು ಕೇಳಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com