ಟೀಕೆ ವ್ಯಕ್ತವಾದರೂ ಉತ್ತರ ಕೊರಿಯಾದೊಂದಿಗೆ ಮೈತ್ರಿ ಮುಂದುವರೆಸಿದ ಚೀನಾ!

ಚೀನಾ ಉತ್ತರ ಕೊರಿಯಾದಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತಿರುವುದನ್ನು ಸ್ಥಗಿತಗೊಳಿಸಿದ್ದಕ್ಕೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆಯಾದರೂ ಉತ್ತರ ಕೊರಿಯಾದೊಂದಿಗೆ ಮೈತ್ರಿ ಮುಂದುವರೆಸುವುದಾಗಿ ಚೀನಾ ಸ್ಪಷ್ಟಪಡಿಸಿದೆ.
ಟೀಕೆ ವ್ಯಕ್ತವಾದರೂ ಉತ್ತರ ಕೊರಿಯಾದೊಂದಿಗೆ ಮೈತ್ರಿ ಮುಂದುವರೆಸಿದ ಚೀನಾ!
ಬೀಜಿಂಗ್: ಚೀನಾ ಉತ್ತರ ಕೊರಿಯಾದಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತಿರುವುದನ್ನು ಸ್ಥಗಿತಗೊಳಿಸಿದ್ದಕ್ಕೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆಯಾದರೂ ಉತ್ತರ ಕೊರಿಯಾದೊಂದಿಗೆ ಮೈತ್ರಿ ಮುಂದುವರೆಸುವುದಾಗಿ ಚೀನಾ ಸ್ಪಷ್ಟಪಡಿಸಿದೆ. 
ಉತ್ತರ ಕೊರಿಯಾದಿಂದ ಕಲ್ಲಿದ್ದಲು ಆಮದನ್ನು ಚೀನಾ ತಾತ್ಕಾಲಿಕವಾಗಿ ನಿಷೇಧಿಸಿದ್ದರ ಬಗ್ಗೆ ಉತ್ತರ ಕೊರಿಯಾದ ಸರ್ಕಾರಿ ಸಂಸ್ಥೆ ಕೆಸಿಎನ್ಎ ತೀವ್ರವಾಗಿ ವಿರೋಧಿಸಿ, ಅಮಾನವೀಯ ನಡೆ ಎಂದು ಟೀಕಿಸಿತ್ತು. ಅಷ್ಟೇ ಅಲ್ಲದೇ ಇದು ಶತ್ರುಗಳ ಕುತಂತ್ರ ಎಂದೂ ಹೇಳಿತ್ತು.
ಉತ್ತರ ಕೊರಿಯಾದ ಟೀಕೆ ಬೆನ್ನಲ್ಲೇ ಹೇಳಿಕೆ ನೀಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು, ಉತ್ತರ ಕೊರಿಯಾದೊಂದಿಗಿನ ಮೈತ್ರಿ ಮುಂದುವರೆಯಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಉತ್ತರ ಕೊರಿಯಾದ ಅಣ್ವಸ್ತ್ರಕ್ಕೆ ಸಂಬಂಧಿಸಿದಂತೆ ತನ್ನ ನಿಲುವು ಸ್ಥಿರವಾಗಿದೆ ಎಂದು ಚೀನಾ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com