ಸಿರಿಯಾದಲ್ಲಿ ಅವಳಿ ಆತ್ಮಾಹುತಿ ಬಾಂಬ್ ಸ್ಫೋಟ, 42 ಸಾವು

ಸಿರಿಯಾ ಸರ್ಕಾರದ ವಶದಲ್ಲಿರುವ ಮೂರನೇ ನಗರವಾಗಿರುವ ಹೋಮ್ಸ್‌ ನ ಎರಡು ಭದ್ರತಾ ಸೇವಾ ನೆಲೆಗಳ ಮೇಲೆ ಶನಿವಾರ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಲೆಬನಾನ್: ಸಿರಿಯಾ ಸರ್ಕಾರದ ವಶದಲ್ಲಿರುವ ಮೂರನೇ ನಗರವಾಗಿರುವ ಹೋಮ್ಸ್‌ ನ ಎರಡು ಭದ್ರತಾ ಸೇವಾ ನೆಲೆಗಳ ಮೇಲೆ ಶನಿವಾರ ಆತ್ಮಾಹುತಿ ಬಾಂಬ್‌ ದಾಳಿ ನಡೆದಿದ್ದು, ಅವಳಿ ಸ್ಫೋಟದಲ್ಲಿ 42 ಮಂದಿ ಮೃತಪಟ್ಟಿದ್ದಾರೆ.
ಈ ದಾಳಿ ಇದೀಗ ಜಿನೇವಾದಲ್ಲಿ ನಡೆಯಲಿರುವ ಶಾಂತಿ ಮಾತುಕತೆಯ ಮೇಲೆ ಕರಿನೆರಳನ್ನು ಚೆಲ್ಲಿದೆ ಎಂದು ಸರ್ಕಾರಿ ಒಡೆತನದ ಟಿವಿ ವಿಶ್ಲೇಷಕರು ಮತ್ತು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಭದ್ರತಾ ಮತ್ತು ಮಿಲಿಟರಿ ಗುಪ್ತಚರ ದಳದ ಪ್ರಧಾನ ಕಚೇರಿಯ ಸಮೀಪ ಕನಿಷ್ಟ ಆರು ಉಗ್ರರು ತಮ್ಮನ್ನು ತಾವು ಸ್ಫೋಟಿಸಿಕೊಂಡಿದ್ದಾರೆ ಎಂದು ಸಿರಿಯಾದ ಮಾನವ ಹಕ್ಕುಗಳ ವಿಚಕ್ಷಣ ಕೇಂದ್ರ ನಿರ್ದೇಶಕ ರಮೀ ಅಬ್ಧೆಲ್‌ ರೆಹಮಾನ್‌ ಅವರು ಹೇಳಿದ್ದಾರೆ. 
ಗುಪ್ತಚರ ಇಲಾಖೆಯ ಓರ್ವ ಹಿರಿಯ ಅಧಿಕಾರಿ ಸೇರಿದಂತೆ ದಾಳಿಯಲ್ಲಿ 42 ಮಂದಿ ಮೃತಪಟ್ಟಿದ್ದಾರೆ. ಅವಳಿ ಆತ್ಮಾಹುತಿ ದಾಳಿಯ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ನಗರ ಕೇಂದ್ರವನ್ನು ಬಂದ್ ಮಾಡಿವೆ.
2014ರ ಮೇ ತಿಂಗಳಲ್ಲಿ  ಬಂಡುಕೋರರು ತಾವೇ ಕದನ ವಿರಾಮ ಘೋಷಿಸಿ ನಿರ್ಗಮಿಸಿದ ಬಳಿಕ ಹೋಮ್ಸ್‌ ಪಟ್ಟಣವು ಸಂಪೂರ್ಣವಾಗಿ ಸಿರಿಯಾ ಸರ್ಕಾರದ ವಶದಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com