
ವಿಜಯವಾಡ: ಜನಾಂಗೀಯ ಭೇದದಿಂದಾಗಿ ಅಮೆರಿಕಾದಲ್ಲಿರುವ ಭಾರತೀಯ ಯುವಕರ ಪ್ರಾಣಕ್ಕೆ ಅಪಾಯವಿದೆ ಎಂದು ಯುಎಸ್ ನಲ್ಲಿರುವ ಮಕ್ಕಳ ಪೋಷಕರು ಆತಂಕ ವ್ಯಕ್ತ ಪಡಿಸಿದ್ದಾರೆ.
ಕಳೆದ ಒಂದು ವಾರದ ಹಿಂದೆ ಕ್ಯಾಲಿಪೋರ್ನಿಯಾದಲ್ಲಿ ವಿದ್ಯಾರ್ಥಿಯೊಬ್ಬನನ್ನು ಹತ್ಯೆ ಮಾಡಲಾಗಿತ್ತು. ಬುಧವಾರ ರಾತ್ರಿ ಅಮೆರಿಕಾದ ಕನ್ಸಾಸ್ ನಗರದ ಬಾರ್ ವೊಂದರಲ್ಲಿ ಇಬ್ಬರನ್ನು ಶೂಟ್ ಮಾಡಲಾಗಿದೆ. ಅದರಲ್ಲಿ ಆಂಧ್ರ ಮೂಲಕ ಶ್ರೀನಿವಾಸ್ ಎಂಬ ಸಾಫ್ಟ್ ವೇರ್ ಎಂಜಿನೀಯರ್ ಅವರನ್ನು ಕೊಲೆ ಮಾಡಲಾಗಿದೆ.
ಡೊನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ನಂತರ ನಮಗೆ ಸರಿಯಾಗಿ ನಿದ್ರೆ ಬರುತ್ತಿಲ್ಲ, ಭಯದಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ, ಕೇವಲ ಭಾರತೀಯರನ್ನು ಕೊಲೆ ಮಾಡುವುದು ಮಾತ್ರವಲ್ಲ, ಅಮೆರಿಕಾ ಅಧ್ಯಕ್ಷೀಯ ಚುನಾವಣೆ ನಂತರ ಪೂರ್ಣವಾಗಿ ಎಲ್ಲಾ ಬದಲಾಗಿದೆ, ವಲಸಿಗರು ಹಾಗೂ ವಿದ್ಯಾರ್ಥಿಗಳು ಮತ್ತು ಪ್ರತಿಯೊಬ್ಬರು ತಮ್ಮ ಭವಿಷ್ಯದ ಬಗ್ಗೆ ಭಯ ಹಾಗೂ ಅಭದ್ರತೆ ಹೊಂದಿದ್ದಾರೆ . ಪ್ರತಿ ದಿನ ಕ್ಯಾಂಪಸ್ ನಲ್ಲಿ ನಾವು ಹಲವು ಟೀಕೆ ಹಾಗೂ ಜನಾಂಗೀಯ ತಾರತಮ್ಯಕ್ಕೆ ಒಳಗಾಗುತ್ತಿದ್ದೇವೆ ಎಂದು ಕಾನ್ಸಾಸ್ ಸ್ಟೇರ್ ಯೂನಿವರ್ಸಿಟಿ ವಿದ್ಯಾರ್ಥಿ ಕೆ. ವರುಣ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಅಮೆರಿಕಾದಲ್ಲಿ ನಡೆಯುತ್ತಿರುವ ಸರಣಿ ದುರಂತಗಳಿಂದಾಗಿ ವಿದ್ಯಾರ್ಥಿಗಳು ಪಾರ್ಟ್ ಟೈಮ್ ಉದ್ಯೋಗ ಮಾಡಲು ಹೆದರುತ್ತಿದ್ದಾರೆ. ನಮ್ಮ ವಿದ್ಯಾಭ್ಯಾಸಕ್ಕೆ ಸಹಾಯ ಹಾಗೂ ಅಲ್ಲಿನ ಜೀವನಕ್ಕೆ ಬೇಕಾದ ಖರ್ಚುವೆಚ್ಚಗಳನ್ನು ಸರಿಪಡಿಸಿಕೊಳ್ಳಲು ವಿದ್ಯಾರ್ಥಿಗಳು ಪಾರ್ಟ್ ಟೈಮ್ ಉದ್ಯೋಗ ಮಾಡುತ್ತಾರೆ. ಆದರೆ ಈಗ ಸಂಶೋಧನೆ ಸೇರಿದಂತೆ ಯಾವುದೇ ಪಾರ್ಟ್ ಟೈಮ್ ಉದ್ಯೋಗದ ಅವಕಾಶ ನೀಡುತ್ತಿಲ್ಲ, ಒಂದು ವೇಳೆ ನಾವು ಪಾರ್ಟ್ ಟೈಮ್ ಉದ್ಯೋಗ ಧಕ್ಕಿಸಿಕೊಳ್ಳಲು ಯಶಸ್ವಿಯಾದರೇ ನಮ್ಮ ಮೇಲೆ ಸ್ಥಳೀಯರು ದಾಳಿ ಮಾಡುತ್ತಾರೆ. ಹೀಗಾಗಿ ನಾವು ಪಾರ್ಟ್ ಟೈಮ್ ಉದ್ಯೋಗದಿಂದ ದೂರ ಉಳಿಯಲು ನಿರ್ಧರಿಸಿದ್ದೇವೆ ಎಂದು ವರುಣ್ ಹೇಳಿದ್ದಾರೆ.
ಇದು ಕೇವಲ ವರುಣ್ ಒಬ್ಬರ ಸಮಸ್ಯೆಯಲ್ಲಿ, ಅಮೆರಿಕಾದಲ್ಲಿರುವ ಬಹುತೇಕ ಭಾರತೀಯ ಅನುಭವವಾಗಿದೆ. ಅಮೆರಿಕಾದಲ್ಲಿ ಕೆಲಸ ಮಾಡಬೇಕೆಂಬ ಕನಸು ಹೊತ್ತಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ಟ್ರಂಪ್ ಸರ್ಕಾರದಿಂದ ಕೆಟ್ಟ ಅನುಭವವಾಗುತ್ತಿದೆ.
ಕಳೆದ ಕೆಲವು ತಿಂಗಳಿಂದ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈ ಸಂಬಂಧ ನಾಗರಿಕ ಹಕ್ಕು ಕಚೇರಿಗೆ ಹಲವು ದೂರುಗಳು ದಾಖಲಾಗಿವೆ.
ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಅಮೆರಿಕಾದಲ್ಲಿ ಡಿಸೇನ್ ಎಂಜಿನೀಯರ್ ಆಗಿರುವ ಸ್ವಾತಿ( ಹೆಸರು ಬದಲಾಯಿಸಲಾಗಿದೆ) ಹಾಗೂ ಅವರ ಸ್ನೇಹಿತೆ ಮಧ್ಯರಾತ್ರಿ ತಿಂಡಿ ತಿನ್ನಲು ಕಾಫಿ ಶಾಪ್ ಗೆ ತೆರಳಿದ್ದರು, ನಾನು ಆರ್ಡರ್ ಕೊಡಲು ಕೌಂಟರ್ ಗೆ ತೆರಳಿದ್ದೆ, ನನ್ನ ಸ್ನೇಹಿತೆ ಟೇಬಲ್ ಹಿಡಿದು ಕೂತಿದ್ದಳು. 20 ವರ್ಷದ ಅಮೆರಿಕನ್ ಒಬ್ಬ, ನಮ್ಮ ದೇಶ ಬಿಟ್ಟು ತೊಲಗಿ ಎಂದು ಕೂಗಾಡಿದ. ನಾವು ಕಾಫಿಶಾಪ್ ನಿಂದ ತೆರಳಿದೆವು. ಅದು ತುಂಬಾ ಕೆಟ್ಟ ಸನ್ನಿವೇಶವಾಗಿತ್ತು, ಆದಾದ ನಂತರನಾವು ಯಾವುದೇ ನೈಟ್ ಕ್ಲಬ್ ಗೆ ಹೋಗುವುದನ್ನು ನಿಲ್ಲಿಸಿದೆವು ಎಂದು ಸ್ವಾತಿ ತಿಳಿಸಿದ್ದಾರೆ. ಜಗತ್ತಿನ ಬಹುತೇಕ ಜನ ಟ್ರಂಪ್ ನಿರ್ಧಾರವನ್ನು ವಿರೋಧಿಸಿದ್ದಾರೆ.
ಟ್ರಂಪ್ ಅಧ್ಯಕ್ಷರಾದ ನಂತರ , ಇಷ್ಟು ದಿನ ಅಡಗಿ ಕುಳಿತಿದ್ದ ಜನಾಂಗಿಯ ತಾರತಮ್ಯ ಮತ್ತೆ ಮರುಕಳಿಸಿದೆ. ರಿಪಬ್ಲಿಕನ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಅಮೆರಿಕಾದಲ್ಲಿ ವಲಸಿಗರು ಹಾಗೂ ಭಾರತೀಯರ ಮೇಲಿನ ದಾಳಿಗಳು ಹೆಚ್ಚಿವೆ. ಇತು ಅಮೆರಿಕಾ ಇತಿಹಾಸದಲ್ಲಿ ಅತಿ ಕೆಟ್ಟ ಸಮಯ ಈ ಸಮಯ ಬೇಗ ಕಳೆದು ಹೋಗಲಿ, ಅಮೆರಿಕಾದಲ್ಲಿರುವ ಭಾರತೀಯರು ಸುರಕ್ಷಿತವಾಗಿರಲಿ ಎಂದು ಆಶಿಸುತ್ತೇನೆ ಎಂದು ನ್ಯೂಯಾರ್ಕ್ ನಲ್ಲಿ ಸಾಫ್ಟ್ ವೇರ್ ಆಗಿರುವ ವಿ ರಸಗ್ನ್ಯಾ ಎಂಬುವರು ಹೇಳಿದ್ದಾರೆ.
ಪೂರ್ವ ಮತ್ತು ಪಶ್ಚಿಮ ರಾಷ್ಟ್ರಗಳಿಂದ ಅಮೆರಿಕಾಗೆ ಬಂದಿರುವವರು ಕೇಂದ್ರ ಭಾಗದ ಜನಗಳಿಗಿಂತೆ ಹೆಚ್ಚು ಸಹಿಷ್ಣುಗಳು, ಗೌರವಾನ್ವಿತರು ಹಾಗೂ ಹೃದಯ ವೈಶಾಲ್ಯತೆಯುಳ್ಳ ಜನ, ಅಮೆರಿಕಾದಲ್ಲಿ ಇಬ್ಬರು ಎಂಜಿನೀಯರ್ ಗಳ ಮೇಲೆ ಗುಂಡಿನ ದಾಳಿ ನಡೆದಾಗ ಅಮೆರಿಕಾ ಜನ ತಮ್ಮ ಜೀವ ಪಣಕ್ಕಿಟ್ಟು ದಾಳಿಗೊಳಗಾದವರನ್ನು ರಕ್ಷಿಸಲು ಪ್ರಯತ್ನಿಸಿದರು. ಇಂಥಹ ಘಟನೆಗಳನ್ನು ನಮ್ಮ ಪೋಷಕರನ್ನು ಆಂತಕಕ್ಕೆ ಡೂಡಿವೆ. ನಾವು ನಮ್ಮ ಪೋಷಕರನ್ನು ಬಿಟ್ಟು ದೂರ ಇದ್ದೇವೆ. ಅವರಿಗೆ ನಮ್ಮ ಜೀವದ ಬಗ್ಗೆ ಆತಂಕ ಎದುರಾಗಿದೆ ಎಂದು ನ್ಯೂಯಾರ್ಕ್ ನಲ್ಲಿರುವ ವಿಶಾಖ ಪಟ್ಟಣಂ ಮೂಲದ ಕಾರ್ತಿಕ್ ಕಳವಳ ವ್ಯಕ್ತ ಪಡಿಸಿದ್ದಾರೆ.
Advertisement