ಬ್ರೆಜಿಲ್ ಜೈಲಿನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ: 56 ಜನರ ಸಾವು

ಬ್ರೆಜಿಲ್ ನ ಜೈಲೊಂದರಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆಸಿದ್ದು, ಘರ್ಷಣೆಯಲ್ಲಿ 56ಕ್ಕೂ ಹೆಚ್ಚು ಕೈದಿಗಳು ಸಾವನ್ನಪ್ಪಿ 144 ಖೈದಿಗಳು ಪರಾರಿಯಾಗಿರುವ ಘಟನೆ ಸೋಮವಾರ ನಡೆದಿದೆ...
ಘಟನಾ ಸ್ಥಳದಲ್ಲಿ ಬೀಡುಬಿಟ್ಟಿರುವ ಸೇನೆ ಹಾಗೂ ಪೊಲೀಸರ ತಂಡ
ಘಟನಾ ಸ್ಥಳದಲ್ಲಿ ಬೀಡುಬಿಟ್ಟಿರುವ ಸೇನೆ ಹಾಗೂ ಪೊಲೀಸರ ತಂಡ

ಮನಾಸ್: ಬ್ರೆಜಿಲ್ ನ ಜೈಲೊಂದರಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆಸಿದ್ದು, ಘರ್ಷಣೆಯಲ್ಲಿ 56ಕ್ಕೂ ಹೆಚ್ಚು ಕೈದಿಗಳು ಸಾವನ್ನಪ್ಪಿ 144 ಖೈದಿಗಳು ಪರಾರಿಯಾಗಿರುವ ಘಟನೆ ಸೋಮವಾರ ನಡೆದಿದೆ.

ಬ್ರೆಜಿಲ್ ನಲ್ಲಿ ದೊಡ್ಡ ಗ್ಯಾಂಗ್ ಎಂದೇ ಹೇಳಲಾಗುವ ಪಿಸಿಸಿ ಮತ್ತು ರೆಡ್ ಕಮಾಂಡ್ (ಸಿವಿ) ನಡುವೆ ಘರ್ಷಣೆ ನಡೆದಿದೆ. ಅಮೆಜಾನ್ ಪ್ರದೇಶದಲ್ಲಿನ ಜೈಲಿನಲ್ಲಿ ಬಂಧನಕ್ಕೊಳಪಡಿಸಲಾಗಿದ್ದ ಎರಡು ಗುಂಪುಗಳ ನಡುವೆ ಗಲಭೆ ಆರಂಭವಾಗಿದೆ.

ಭಾನುವಾರ ಮಧ್ಯಾಹ್ನದಿಂದಲೇ ಈ ಎರಡೂ ಗುಂಪುಗಳ ನಡುವೆ ನಿಧಾನಗತಿಯಲ್ಲಿ ಘರ್ಷಣೆ ಆರಂಭವಾಗಿತ್ತು. ರಾತ್ರಿಯಾಗುತ್ತಲೇ ಎರಡೂ ಗುಂಪುಗಳು ಜೈಲಿನಲ್ಲಿಯೇ ಪರಸ್ಪರ ಹೊಡೆದಾಡಿಕೊಂಡಿವೆ. ಇದು ನಿನ್ನೆ ಕೂಡ ಮುಂದುವರೆದಿದೆ. ಪೊಲೀಸರು ಮಧ್ಯೆ ಪ್ರವೇಶ ಮಾಡಲು ಪ್ರಯತ್ನ ನಡೆಸಿದ್ದರು ಪ್ರಯೋಜನವಾಗಿಲ್ಲ.

ಗಲಭೆಯಲ್ಲಿ 56 ಮಂದಿ ಸಾವನ್ನಪ್ಪಿದ್ದು, ಸಾವನ್ನಪ್ಪಿದ್ದವರಲ್ಲಿ ಹಲವರ ರುಂಡಗಳನ್ನು ಕತ್ತರಿಸಲಾಗಿದೆ. ಅಲ್ಲದೆ, ಕೆಲವರನ್ನು ಸುಟ್ಟು ಹಾಕಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ 144 ಕೈದಿಗಳು ಜೈಲಿನಿಂದ ತಪ್ಪಿಸಿಕೊಂಡಿರುವುದಾಗಿ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com