ಢಾಕಾ ದಾಳಿಯ ಮಾಸ್ಟರ್ ಮೈಂಡ್ ನುರುಲ್ ಇಸ್ಲಾಂ ಮಾರ್ಜನ್ ಸಾವು!

ಓರ್ವ ಭಾರತೀಯ ಮಹಿಳೆ ಸೇರಿದಂತೆ ಸುಮಾರು 30 ಮಂದಿ ಸಾವಿಗೆ ಕಾರಣವಾಗಿದ್ದ ಢಾಕಾ ದಾಳಿಯ ಮಾಸ್ಟರ್ ಮೈಂಡ್ ನುರುಲ್ ಇಸ್ಲಾಂ ಮಾರ್ಜನ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಢಾಕಾ ಕೆಫೆ ದಾಳಿ (ಸಂಗ್ರಹ ಚಿತ್ರ)
ಢಾಕಾ ಕೆಫೆ ದಾಳಿ (ಸಂಗ್ರಹ ಚಿತ್ರ)
Updated on: 

ಢಾಕಾ: ಓರ್ವ ಭಾರತೀಯ ಮಹಿಳೆ ಸೇರಿದಂತೆ ಸುಮಾರು 30 ಮಂದಿ ಸಾವಿಗೆ ಕಾರಣವಾಗಿದ್ದ ಢಾಕಾ ದಾಳಿಯ ಮಾಸ್ಟರ್ ಮೈಂಡ್ ನುರುಲ್ ಇಸ್ಲಾಂ ಮಾರ್ಜನ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಢಾಕಾದ ರೇಯರ್ ಬಜಾರ್ ಮೇಲೆ ನಡೆದ ಪೊಲೀಸ್ ದಾಳಿ ಸಂದರ್ಭದಲ್ಲಿ ನುರುಲ್ ಇಸ್ಲಾಂ ಮಾರ್ಜನ್ ಸಾವನ್ನಪ್ಪಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಢಾಕಾ ಪೊಲೀಸರು ತಿಳಿಸಿರುವಂತೆ ರೇಯರ್ ಬಜಾರ್  ನಲ್ಲಿ ಶಂಕಿತರು ಅಡಗಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಈ ಹಿನ್ನಲೆಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ವೇಳೆ ನಡೆದ ಪರಸ್ಪರ ಗುಂಡಿನ ಚಕಮಕಿಯಲ್ಲಿ ನುರುಲ್ ಇಸ್ಲಾಂ ಮಾರ್ಜನ್ ಸಾವನ್ನಪ್ಪಿದ್ದಾನೆ.

ರೇಯರ್ ಬಜಾರ್ ನಲ್ಲಿ ಕಟ್ಟಡದೊಳಗೆ ಒಟ್ಟು ಎರಡು ಮೃತ ದೇಹಗಳು ಪತ್ತೆಯಾಗಿದ್ದು, ಈ ಪೈಕಿ ಒಂದು ದೇಹ ನುರುಲ್ ಇಸ್ಲಾಂ ಮಾರ್ಜನ್ ನದ್ದೇ ಎಂದು ಪೊಲೀಸರು ಗುರುತಿಸಿದ್ದಾರೆ. ಮತ್ತೊಂದು ಇತರೆ  ಉಗ್ರಗಾಮಿಯದ್ದಾಗಿರಬಹುದು ಎಂದು ಢಾಕಾ ಪೊಲೀಸ್ ಉಪಾಯುಕ್ತ ಯೂಸುಫ್ ಅಲಿ ತಿಳಿಸಿದ್ದಾರೆ.

ಸುಮಾರು 30 ವರ್ಷ ವಯಸ್ಸಿನ ಮಾರ್ಜನ್ ಕಳೆದ ಜುಲೈ 1ರಂದು ಢಾಕಾದ ಕೆಫೆ ಮೇಲೆ ಉಗ್ರರು ನಡೆಸಿದ್ದ ಭೀಕರ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ. ದಾಳಿಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ನಡೆಸಿರುವುದಾಗಿ  ಹೇಳಿಕೊಂಡಿತ್ತು. ಹೀಗಾಗಿ ಈತ ಕೂಡ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯವನೇ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com