ವಿಯೆಟ್ನಾಂ ಗೆ ಆಕಾಶ್ ಕ್ಷಿಪಣಿ ಮಾರಾಟ ಮಾಡಲಿರುವ ಭಾರತ: ಚೀನಾ ಹೆದರುತ್ತಿರುವುದೇಕೆ ಗೊತ್ತಾ?

ಭಾರತ ತನ್ನ ಮಿಲಿಟರಿ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ಭಾಗವಾಗಿ ಆಕಾಶ್ ಕ್ಷಿಪಣಿಯನ್ನು ವಿಯೆಟ್ನಾಂ ಗೆ ಮಾರಾಟ ಮಾಡುವ ಬಗ್ಗೆ ಮಾತುಕತೆ ನಡೆಸುತ್ತಿದೆ. ಈ ಬೆಳವಣಿಗೆ ಚೀನಾಗೆ ಆತಂಕಕಾರಿಯಾಗಿ ಪರಿಣಮಿಸಿದೆ.
ಆಕಾಶ್ ಕ್ಷಿಪಣಿ
ಆಕಾಶ್ ಕ್ಷಿಪಣಿ
ನವದೆಹಲಿ: ಭಾರತ ತನ್ನ ಮಿಲಿಟರಿ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ಭಾಗವಾಗಿ ಆಕಾಶ್ ಕ್ಷಿಪಣಿ ವ್ಯವಸ್ಥೆಯನ್ನು ವಿಯೆಟ್ನಾಂ ಗೆ ಮಾರಾಟ ಮಾಡುವ ಬಗ್ಗೆ ಮಾತುಕತೆ ನಡೆಸುತ್ತಿದೆ. ಈ ಬೆಳವಣಿಗೆ ಚೀನಾಗೆ ಆತಂಕಕಾರಿಯಾಗಿ ಪರಿಣಮಿಸಿದೆ. 
ಚೀನಾದೊಂದಿಗೆ ವಿಯೆಟ್ನಾಂ ದಕ್ಷಿಣ ಚೀನಾ ಸಮುದ್ರ ವಿವಾದ ಹೊಂದಿದ್ದು, ಚೀನಾಗೆ ಪರೋಕ್ಷವಾಗಿ ಹೊಡೆತ ನೀಡಲು ಭಾರತ ಚೀನಾದ ಬದ್ಧ ವೈರಿಗಳೊಂದಿಗೆ ಮಿಲಿಟರಿ ಬಾಂಧವ್ಯವನ್ನು ಹೆಚ್ಚಿಸಲು ಯತ್ನಿಸುತ್ತಿದೆ.  ಪ್ರಮುಖವಾಗಿ ಜಪಾನ್ ಹಾಗೂ ವಿಯೆಟ್ನಾಂ ದೇಶಗಳೊಂದಿಗೆ ಭಾರತ ತನ್ನ ಸೇನಾ ಸಂಬಂಧವನ್ನು ಹೆಚ್ಚುಗೊಳಿಸುವ ಮೂಲಕ ಚೀನಾದ ವಿಸ್ತರಣಾವಾದಕ್ಕೆ ಕಡಿವಾಣ ಹಾಕಲು ಯತ್ನಿಸುತ್ತಿದೆ. 
2011 ನಿಂದಲೂ ಬ್ರಹ್ಮೋಸ್ ಕ್ಷಿಪಣಿ ಖರೀದಿಗಾಗಿ ಬೇಡಿಕೆ ಇಡುತ್ತಿದ್ದ ವಿಯೆಟ್ನಾಂ ಗೆ ಬ್ರಹ್ಮೋಸ್ ಕ್ಷಿಪಣಿ ಜೊತೆಗೆ ಆಕಾಶ್ ಕ್ಷಿಪಣಿಯನ್ನು ಮಾರಾಟ ಮಾಡುವ ಪ್ರಸ್ತಾವನೆಯನ್ನೂ ಭಾರತ ಮುಂದಿಟ್ಟಿದೆ. ಇದರೊಂಡಿಗೆ ವಿಯೆಟ್ನಾಂ ನ ಫೈಟರ್ ಪೈಲಟ್ ಗಳಿಗೂ ಸಹ ಭಾರತ ತರಬೇತಿ ನೀಡಲು ಮುಂದಾಗಿದ್ದು ಹಂತ ಹಂತವಾಗಿ ವಿಯೆಟ್ನಾಂ ನೊಂದಿಗಿನ ಮಿಲಿಟರಿ ಬಾಂಧವ್ಯವನ್ನು ಗಟ್ಟಿಗೊಳಿಸುತ್ತಿದೆ. 
ಭಾರತ ಚೀನಾದೊಂದಿಗೆ ಭೂಗಡಿ ವಿವಾದ ಹೊಂದಿದ್ದು, ಹಿಂದೂ ಮಹಾಸಾಗರ ಪ್ರದೇಶದಲ್ಲಿ ನೌಕಾ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿರುವುದರ ಬಗ್ಗೆ ಆತಂಕ ವ್ಯಕ್ತವಾಗಿದೆ. ಇದರೊಂದಿಗೆ ಭಾರತದ ಎನ್ ಎಸ್ ಜಿ ಸದಸ್ಯತ್ವ ಹಾಗೂ ವಿಶ್ವಸಂಸ್ಥೆಯಲ್ಲಿ ಉಗ್ರ ಮಸೂದ್ ಅಜರ್ ಗೆ ನಿಷೇಧ ವಿಧಿಸುವ ಭಾರತದ ಪ್ರಯತ್ನಕ್ಕೆ ಅಡ್ಡಿ ಉಂಟುಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಚೀನಾದ ಪ್ರಾಬಲ್ಯವನ್ನು ತಗ್ಗಿಸಲು ಭಾರತ ಮುಂದಾಗಿದ್ದು ವಿಯೆಟ್ನಾಂ, ಮಲೇಷ್ಯಾ, ಫಿಲಿಪೀನ್ಸ್ ನೊಂದಿಗೆ ರಕ್ಷಣಾ ಕ್ಷೇತ್ರದ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸುವ ಭಾಗವಾಗಿ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳನ್ನು  ಮಾರಾಟಕ್ಕೆ ಮುಂದಾಗಿದ್ದು ಚೀನಾಗೂ ಇದರಿಂದ ವಿಶ್ಲೇಷಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com