ದಕ್ಷಿಣ ಚೀನಾ ಸಮುದ್ರಕ್ಕೆ ಚೀನಾ ಪ್ರವೇಶ ನಿರ್ಬಂಧಿಸಬೇಕು: ಟ್ರಂಪ್ ಆಪ್ತ

ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ನಿರ್ಮಿಸಲಾಗಿರುವ ಕೃತಕ ದ್ವೀಪಗಳಿಗೆ ಚೀನಾ ಪ್ರವೇಶವನ್ನು ನಿರ್ಬಂಧಿಸಬೇಕೆಂದು ಟ್ರಂಪ್ ಸಚಿವ ಸಂಪುಟದ ಸದಸ್ಯ ರೆಕ್ಸ್ ಟಿಲರ್ಸನ್ ಹೇಳಿದ್ದಾರೆ.
ರೆಕ್ಸ್ ಟೆಲರ್ಸನ್
ರೆಕ್ಸ್ ಟೆಲರ್ಸನ್
ವಾಷಿಂಗ್ ಟನ್: ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ನಿರ್ಮಿಸಲಾಗಿರುವ ಕೃತಕ ದ್ವೀಪಗಳಿಗೆ ಚೀನಾ ಪ್ರವೇಶವನ್ನು ನಿರ್ಬಂಧಿಸಬೇಕೆಂದು ಟ್ರಂಪ್ ಸಚಿವ ಸಂಪುಟದ ಸದಸ್ಯ ರೆಕ್ಸ್ ಟಿಲರ್ಸನ್ ಹೇಳಿದ್ದಾರೆ. 
ಸೆನೆಟ್ ನ ವಿದೇಶಾಂಗ ವ್ಯವಹಾರಗಳ ಸಮಿತಿಯಲ್ಲಿ ಮಾತನಾಡಿರುವ ರೆಕ್ಸ್ ಟಿಲರ್ಸನ್, ಮೊದಲು ಟ್ರಂಪ್ ಆಡಳಿತ ಚೀನಾಗೆ ದಕ್ಷಿಣ ಚೀನಾ ಸಮುದ್ರದ ವಿಚಾರವಾಗಿ ಸ್ಪಷ್ಟ ಸಂದೇಶ ರವಾನೆ ಮಾಡಲಿದೆ, ನಂತರ ಚೀನಾ ವಿವಾದಿತ ಪ್ರದೇಶದಲ್ಲಿ ನಿರ್ಮಿಸಿರುವ ಕೃತಕ ದ್ವೀಪಗಳಿಗೆ ಪ್ರವೇಶ ನಿರ್ಬಂಧಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. 
ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ನಡೆಸುತ್ತಿರುವ ಚಟುವಟಿಕೆಗಳು ಆತಂಕಕಾರಿಯಾಗಿವೆ. ಈ ನಿಟ್ಟಿನಲ್ಲಿ ಪ್ರತಿಕ್ರಿಯೆ ನೀಡದೇ ಇರುವ ಧೋರಣೆ ತನ್ನ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸಿ ಸಕ್ರಿಯವಾಗಿರಲು ಚೀನಾಗೆ ಉತ್ತೇಜನ ನೀಡುತ್ತಿದೆ. ಅಕ್ರಮವಾಗಿ ಕೃತಕ ದ್ವೀಪಗಳನ್ನು ನಿರ್ಮಿಸುವುದಷ್ಟೇ ಅಲ್ಲದೇ ಜಪಾನ್ ನ ನಿಯಂತ್ರಿತ ಪ್ರದೇಶದಲ್ಲಿ ವಾಯು ರಕ್ಷಣಾ ಗುರುತಿಸುವಿಕೆಯ ವಲಯವನ್ನು ಘೋಷಿಸಿರುವುದು ಚೀನಾದ ಅಕ್ರಮ ಕೆಲಸವಾಗಿದ್ದು, ತನಗೆ ಸಂಬಂಧಪಡದ ಪ್ರದೇಶದ ಮೇಲೆ ಚೀನಾ ನಿಯಂತ್ರಣ ಹೊಂದಲು ಯತ್ನಿಸುತ್ತಿದೆ ಎಂದು ರೆಕ್ಸ್ ಟೆಲರ್ಸನ್ ಹೇಳಿದ್ದಾರೆ. 
ಚೀನಾದ ಚಟುವಟಿಕೆಗಳು ಜಾಗತಿಕ ಆರ್ಥಿಕತೆಗೆ ಮಾರಕವಾಗಿದ್ದು, ಈ ಬೆಳವಣಿಗೆ ಹಲವು ರಾಷ್ಟ್ರಗಳಿಗೆ ಪ್ರಮುಖವಾಗಿ ನಮ್ಮ ಮಿತ್ರ ರಾಷ್ಟ್ರಗಳಿಗೆ ತೀರಾ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಚೀನಾಗೆ ಸ್ಪಷ್ಟ ಸಂದೇಶ ರವಾನೆ ಮಾಡುವ  ಅನಿವಾರ್ಯತೆ ಇದೆ ಎಂದು ಟೆಲರ್ಸನ್ ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com