
ಮೆಕ್ಸಿಕೊ: ಅಮೆರಿಕದ ಮೆಕ್ಸಿಕೋದಲ್ಲಿ ನಡೆಯುತ್ತಿದ್ದ ಸಂಗೀತೋತ್ಸವದಲ್ಲಿ ದುಷ್ಕರ್ಮಿ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 5 ಮಂದಿ ಸಾವಿಗೀಡಾಗಿ 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೆಕ್ಸಿಕೋದ ಪ್ಲಾಯಾ ಡೆಲ್ ಕಾರ್ಮೆನ್ ರೆಸಾರ್ಟ್ ನಲ್ಲಿ ಬಿಎಂಪಿ ಸಂಗೀತೋತ್ಸವ ನಡೆಸಲಾಗುತ್ತಿದ್ದು, ಸಂಗೀತೋತ್ಸವ ವೀಕ್ಷಿಸಲು ಸಾವಿರಾರು ಸಂಗೀತ ಪ್ರೇಮಿಗಳು ಆಗಮಿಸಿದ್ದರು. ಈ ವೇಳೆ ದುಷ್ಕರ್ಮಿ ನೆಡೆಸಿದ ಗುಂಡಿನ ದಾಳಿಯಿಂದಾಗಿ 4 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಓರ್ವ ವಿದೇಶಿ ಪ್ರವಾಸಿಗ ಕೂಡ ಸೇರಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಗುಂಡಿನ ದಾಳಿ ನಡೆಯುತ್ತಿದ್ದಂತೆಯೇ ರೆಸಾರ್ಟ್ ನಲ್ಲಿ ಸಂಭವಿಸಿದ ಕಾಲ್ತುತಿಳದಲ್ಲಿ ಓರ್ವ ಅಮೆರಿಕನ್ ಸಾವನ್ನಪ್ಪಿದ್ದಾನೆ. ಆ ಮೂಲಕ ಗುಂಡಿನ ದಾಳಿಯಲ್ಲಿ ಒಟ್ಟು 5 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತೆಯೇ ಮೆಕ್ಸಿಕೋ ದಾಳಿಯನ್ನು ಭಯೋತ್ಪಾದಕ ಕೃತ್ಯ ಅಲ್ಲ ಎಂದು ಹೇಳಿರುವ ಪೊಲೀಸರು ಅಮೆರಿಕದಲ್ಲಿ ಪ್ರಾದೇಶಿಕ ಮತ್ತು ಜನಾಂಗೀಯ ದಾಳಿಗಳು ಆಗ್ಗಿಂದಾಗ್ಗೆ ನಡೆಯುತ್ತಿದ್ದು, ಪ್ರಸ್ತುತ ನಡೆದಿರುವ ಗುಂಡಿನ ದಾಳಿ ಪ್ರಾದೇಶಿಕ ಅಸಮಾನತೆ ವಿರುದ್ಧ ಹೋರಾಡುತ್ತಿರುವ ಹೋರಾಟಗಾರನದ್ದಾಗಿರಬಹುದು ಎಂದು ಶಂಕಿಸಿದ್ದಾರೆ. ಪ್ರಸ್ತುತ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿ ಪರಾರಿಯಾಗಿದ್ದು,. ಆತನ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
Advertisement