ಯುಎಸ್ಎ: ಚಂದ್ರನ ಮೇಲೆ ಕೊನೆಯ ಬಾರಿಗೆ ನಡೆದಾಡಿ, ಭೂಮಿಗೆ ಎಲ್ಲಾ ಮಾನವ ಜನಾಂಗಕ್ಕೆ ಶಾಂತಿ ಮತ್ತು ಭರವಸೆ'ಯ ಸಂದೇಶದೊಂದಿಗೆ ಮರಳಿದ ಅಮೆರಿಕಾದ ಮಾಜಿ ಗಗನಯಾತ್ರಿ ಯುಜೀನ್ ಸೆರ್ನಾನ್ ನಿನ್ನೆ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.ಅನಾರೋಗ್ಯದಿಂದ ಸೆರ್ನಾನ್ ನಿಧನ ಹೊಂದಿದ್ದಾರೆ ಎಂದು ಅವರ ಕುಟುಂಬದವರು ಹೇಳಿರುವುದಾಗಿ ನಾಸಾ ವಕ್ತಾರ ಬಾಬ್ ಜಾಕೊಬ್ ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.