ಕಾಶ್ಮೀರದ ಬಗ್ಗೆ ಬ್ರಿಟೀಷ್ ಸಂಸದರ ಚರ್ಚೆ: ಭಾರತ-ಪಾಕ್ ಮಾತುಕತೆಗೆ ಕರೆ

ಬ್ರಿಟನ್ ಸಂಸತ್ ನಲ್ಲಿ ಕಾಶ್ಮೀರದ ಬಗ್ಗೆ ಚರ್ಚೆ ನಡೆದಿದ್ದು, ಅಲ್ಲಿನ ಸಂಸದರು ಭಾರತ-ಪಾಕ್ ಮಾತುಕತೆಗೆ ಕರೆ ನೀಡಿದ್ದಾರೆ.
ಬ್ರಿಟನ್ ಸಂಸತ್
ಬ್ರಿಟನ್ ಸಂಸತ್
ಲಂಡನ್: ಬ್ರಿಟನ್ ಸಂಸತ್ ನಲ್ಲಿ ಕಾಶ್ಮೀರದ ಬಗ್ಗೆ ಚರ್ಚೆ ನಡೆದಿದ್ದು, ಅಲ್ಲಿನ ಸಂಸದರು ಭಾರತ-ಪಾಕ್ ಮಾತುಕತೆಗೆ ಕರೆ ನೀಡಿದ್ದಾರೆ. 
ಕಾಶ್ಮೀರ ಪ್ರದೇಶದಲ್ಲಿ ಗಲಭೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ-ಪಾಕಿಸ್ತಾನ ಮಾತುಕತೆಗೆ ಮುಂದಾಗಬೇಕೆಂದು ಬ್ರಿಟನ್ ಸಂಸದರು ಕರೆ ನೀಡಿದ್ದಾರೆ. ಈ ಬಗ್ಗೆ ಹೌಸ್ ಆಫ್ ಕಾಮನ್ಸ್ ನಲ್ಲಿ ನಿಲುವಳಿ ಮಂಡಿಸಲಾಗಿದ್ದು, ಬ್ರಿಟನ್ ಸರ್ಕಾರ ಭಾರತ-ಪಾಕಿಸ್ತಾನ ನಡುವಿನ ಮಾತುಕತೆ ನಡೆಸಬೇಕೆಂದು ಅಭಿಪ್ರಾಯಪಟ್ಟಿದೆ. 
ಈ ಬಗ್ಗೆ ಮಾತನಾಡಿರುವ ಬ್ರಿಟನ್ ನ ವಿದೇಶಾಂಗ ಇಲಾಖೆ, ಏಷ್ಯಾ ವ್ಯವಹಾರಗಳ ಉಸ್ತುವಾರಿಯ ಸಚಿವ ಅಲೋಕ್ ಶರ್ಮಾ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಬ್ರಿಟನ್ ನ ನಿಲುವನ್ನು ತಿಳಿಸಿದ್ದು, " ಭಾರತ-ಪಾಕಿಸ್ತಾನ ಬ್ರಿಟನ್ ನ ಹಳೆಯ ಪ್ರಮುಖ ಮಿತ್ರ ರಾಷ್ಟ್ರಗಳಾಗಿವೆ. ಯುಕೆ ಉಭಯ ರಾಷ್ಟ್ರಗಳೊಂದಿಗೂ ಮಹತ್ವದ ದ್ವಿಪಕ್ಷೀಯ ಸಂಬಂಧ ಹೊಂದಿದೆ. ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಬ್ರಿಟನ್ ಯಾವುದೇ ಸಲಹೆಗಳನ್ನು ನೀಡದಿರುವುದಕ್ಕೆ, ಮಧ್ಯಸ್ಥಿಕೆ ವಹಿಸದೇ ಇರುವ ತನ್ನ ದೀರ್ಘಾವಧಿಯ ನಿಲುವನ್ನು ಮುಂದುವರೆಸಲಿದೆ ಎಂದು ತಿಳಿಸಿದ್ದಾರೆ. 
ಕಾಶ್ಮೀರಿ ಜನರ ಆಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು ಭಾರತ- ಪಾಕಿಸ್ತಾನವೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಬ್ರಿಟನ್ ಹೇಳಿದೆ. ಕಾಶ್ಮೀರದ ವಿಚಾರವಾಗಿ ಬ್ರಿಟನ್ ಸಂಸದರ ಕರೆಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಇಲಾಖೆ ಪ್ರತಿಕ್ರಿಯೆ ನೀಡಿದ್ದು ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆಯ ಅವಶ್ಯಕತೆ ಇಲ್ಲ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com