ಲಂಡನ್: ಮಹಾತ್ಮ ಗಾಂಧಿ ಅವರ ಅಪರೂಪದ ಪೆನ್ಸಿಲ್ ಸ್ಕೆಚ್ ಒಂದು ಲಂಡನ್ ನಲ್ಲಿ 32,500 ಪೌಂಡ್ ಗಳಿಗೆ ಹರಾಜಾಗಿದ್ದು, ನಿರೀಕ್ಷೆಗಿಂತಲೂ ನಾಲ್ಕು ಪಟ್ಟು ಹೆಚ್ಚಿನ ಬೆಲೆಗೆ ಬಿಕರಿಯಾಗಿದೆ.
ಪೆನ್ಸಿಲ್ ಸ್ಕೆಚ್ ನೊಂದಿಗೆ ಮಹಾತ್ಮ ಗಾಂಧಿ ಅವರು ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರಬೋಸ್ ಅವರ ಹಿರಿಯ ಸಹೋದರ ಶರತ್ ಚಂದ್ರ ಬೋಸ್ ಅವರ ಕುಟುಂಬಸ್ಥರಿಗೆ ತಾವೇ ಸ್ವತಃ ಬರೆದಿರುವ ಪತ್ರಗಳ ಸಂಗ್ರಹಗಳನ್ನೂ ಹರಾಜು ಹಾಕಲಾಗಿದ್ದು, ಒಟ್ಟಾರೆ 37,500 ಪೌಂಡ್ ಗಳಿಗೆ ಹರಾಜಾಗಿದೆ.
"ಗಾಂಧಿ ಅವರು ಸಾಮಾನ್ಯವಾಗಿ ಔಪಚಾರಿಕ ಛಾಯಾಚಿತ್ರಗಳಿಗೆ ಒಪ್ಪುತ್ತಿರಲಿಲ್ಲ. ಆದರೆ 1931 ರಲ್ಲಿ ಲಂಡನ್ ಗೆ ಆಗಮಿಸಿದ್ದ ಗಾಂಧಿ ಅವರು ಏನನ್ನೋ ಬರೆಯುತ್ತಾ ಕುಳಿತಿದ್ದರು. ಆಗ ಜಾನ್ ಹೆನ್ರಿ ಅಮ್ಶಿಯೆಟ್ಜ್ ಅವರು ಈ ಚಿತ್ರವನ್ನು ಬಿಡಿಸಿದ್ದರು ಎಂದು ಹರಾಜು ಹಾಕಿದ ಸಂಸ್ಥೆ ತಿಳಿಸಿದೆ.