ಭಾರತಕ್ಕೆ ಬೆಲ್ಲ.. ಪಾಕಿಸ್ತಾನಕ್ಕೆ ಬೇವು: ಪಾಕ್ ಗೆ ರಕ್ಷಣಾ ಸಹಕಾರ ನಿಧಿ ಬಿಡುಗಡೆಗೆ ಅಮೆರಿಕ ಷರತ್ತು!

ಇತ್ತ ಅಮೆರಿಕ-ಭಾರತ ದೇಶಗಳ ನಡುವೆ ಸುಮಾರು 600 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಸಹಾಕಾರ ಒಪ್ಪಂದವಾದ ಬೆನ್ನಲ್ಲೇ ಅತ್ತ ಪಾಕಿಸ್ತಾನಕ್ಕೆ ಅಮೆರಿಕ ನೀಡುತ್ತಿರುವ ರಕ್ಷಣಾ ಸಹಕಾರ ನಿಧಿಗೆ ಕೊಕ್ಕೆ ಬಿದ್ದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ಇತ್ತ ಅಮೆರಿಕ-ಭಾರತ ದೇಶಗಳ ನಡುವೆ ಸುಮಾರು 600 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಸಹಾಕಾರ ಒಪ್ಪಂದವಾದ ಬೆನ್ನಲ್ಲೇ ಅತ್ತ ಪಾಕಿಸ್ತಾನಕ್ಕೆ ಅಮೆರಿಕ ನೀಡುತ್ತಿರುವ ರಕ್ಷಣಾ ಸಹಕಾರ ನಿಧಿಗೆ ಕೊಕ್ಕೆ ಬಿದ್ದಿದೆ.

ಇಷ್ಟು ದಿನ ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ನೀಡುತ್ತಿದ್ದ ರಕ್ಷಣಾ ಸಹಕಾರ ನಿಧಿ ಬಿಡುಗಡೆಗೆ ಷರತ್ತು ವಿಧಿಸಲಾಗಿದ್ದು, ಈ ಷರತ್ತುಗಳೆಲ್ಲವೂ ಉಗ್ರ ನಿಗ್ರಹಕ್ಕೆ ಸಂಬಂಧಿಸಿದ್ದವುಗಳಾಗಿವೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ  ಪಾಕಿಸ್ತಾನ ಅಮೆರಿಕಕ್ಕೆ ತಾನು ಉಗ್ರ ನಿಗ್ರಹಕ್ಕಾಗಿ ಕೈಗೊಂಡಿರುವ ಯೋಜನೆಗಳು ಹಾಗೂ ಕ್ರಮಗಳ ಕುರಿತು ವರದಿ ನೀಡಬೇಕಿದ್ದು, ಈ ವರದಿ ಅಮೆರಿಕಕ್ಕೆ ಸಮಾಧಾನಕರವಾಗಿದ್ದರೆ ಮಾತ್ರ ನಿಧಿ ಬಿಡುಗಡೆ ಮಾಡುವುದಾಗಿ  ಅಮೆರಿಕ ಹೇಳಿದೆ.

ಇತ್ತೀಚೆಗಷ್ಟೇ ಅಮೆರಿಕ ನೆನೆಟ್ ನಲ್ಲಿ ಚರ್ಚೆ ನಡೆಸಿದ್ದ ಅಮರಿಕ ಜನಪ್ರತಿನಿಧಿಗಳು ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದರು. ಪಾಕಿಸ್ತಾನ ಉಗ್ರತ್ವಕ್ಕೆ ಪ್ರಾಯೋಜಕತ್ವ ನೀಡುತ್ತಿದ್ದು, ಅಮೆರಿಕ ನೀಡುತ್ತಿರುವ ರಕ್ಷಣಾ ಸಹಕಾರವನ್ನು  ನಿಲ್ಲಿಸಬೇಕು ಎಂದು ಆಗ್ರಹಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಟ್ರಂಪ್ ಸರ್ಕಾರ ಪಾಕಿಸ್ತಾನದ ರಕ್ಷಣಾ ಸಹಕಾರ ನಿಧಿ ಕೊಕ್ಕೆ ಹಾಕಿದ್ದು, ಸಮಾಧಾನಕರ ಪ್ರಗತಿ ಇದ್ದರೆ ಮಾತ್ರ ನಿಧಿ ಬಿಡುಗಡೆ ಮಾಡುವುದಾಗಿ ಹೇಳಿದೆ.

ಇನ್ನು ಇದೇ ಅಕ್ಟೋಬರ್ 1 ರಿಂದ ಅಮೆರಿಕದ ಹಣಕಾಸು ವರ್ಷ ಆರಂಭವಾಗಲಿದ್ದು, ಪಾಕಿಸ್ತಾನಕ್ಕೆ 2018ನೇ ವರ್ಷದಲ್ಲಿ ಸುಮಾರು 4000 ಮಿಲಿಯನ್ ಡಾಲರ್ ಮೊತ್ತದ ರಕ್ಷಣಾ ಸಹಕಾರ ನಿಧಿ ಬಿಡುಗಡೆ ಅಮೆರಿಕ ಕಾಂಗ್ರೆಸ್  ಅನುಮೋದನೆ ನೀಡಿತ್ತು. ಆದರೆ ಈ ನಿಧಿ ಬಿಡುಗಡೆಗೆ ಕಾಂಗ್ರೆಸ್ ಕೆಲ ಷರತ್ತುಗಳನ್ನು ವಿಧಿಸಿದ್ದು, ಪ್ರಮುಖವಾಗಿ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಪ್ರಗತಿ ಇದ್ದರೆ ಮಾತ್ರ ನಿಧಿ ಬಿಡುಗಡೆ ಮಾಡುವುದಾಗಿ ಅಮೆರಿಕ ಷರತ್ತು ವಿಧಿಸಿದೆ.

ನಿನ್ನೆಯಷ್ಟೇ ಅಮೆರಿಕ ಭಾರತದೊಂದಿಗೆ ಸುಮಾರು 600 ಬಿಲಯನ್ ಡಾಲರ್ ಮೊತ್ತದ ರಕ್ಷಣಾ ಸಹಕಾರ ಮಸೂದೆಗೆ ಅನುಮೋದನೆ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com