ಕುಲಭೂಷಣ್ ಮನವಿ ತಿರಸ್ಕರಿಸಿದ ಪಾಕಿಸ್ತಾನ ಸೇನಾ ಮೇಲ್ಮನವಿ ನ್ಯಾಯಾಲಯ

ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಮನವಿಯನ್ನು ಪಾಕಿಸ್ತಾನ ಮಿಲಿಟರಿ...
ಕುಲಭೂಷಣ್ ಜಾಧವ್
ಕುಲಭೂಷಣ್ ಜಾಧವ್
Updated on: 
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಮನವಿಯನ್ನು ಪಾಕಿಸ್ತಾನ ಮಿಲಿಟರಿ ಮೇಲ್ಮನವಿ ನ್ಯಾಯಾಲಯ ತಿರಸ್ಕರಿಸಿದೆ ಎಂದು ವರದಿಯಾಗಿದೆ. 
ಪಾಕಿಸ್ತಾನ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಅವರು ಕುಲಭೂಷಣ್ ಜಾಧವ್ ವಿರುದ್ಧದ ಸಾಕ್ಷಿಗಳನ್ನು ವಿಶ್ಲೇಷಿಸುತ್ತಿದ್ದು ತದ ನಂತರ ಸೇನಾ ಮುಖ್ಯಸ್ಥರು ಕುಲಭೂಷಣ್ ಅವರಿಗೆ ಕ್ಷಮಾದಾನ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಪಾಕಿಸ್ತಾನ ಸೇನೆಯ ವಕ್ತಾರ ಮೇಜರ್ ಜನರಲ್ ಅಸೀಫ್ ಗಫೂರ್ ಹೇಳಿದ್ದಾರೆ. 
ಪಾಕ್ ಕಾನೂನಿನ ಪ್ರಕಾರ ಅಪರಾಧಿ ಸೇನಾ ಮುಖ್ಯಸ್ಥರಿಗೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಬಹುದು. ಒಂದು ವೇಳೆ ಅರ್ಜಿ ತಿರಸ್ಕರಗೊಂಡರೆ ಅವರು ಪಾಕಿಸ್ತಾನ ಅಧ್ಯಕ್ಷರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ಗಫೂರ್ ಹೇಳಿದ್ದಾರೆ. ಈ ಹಿಂದೆ ಕುಲಭೂಷಣ್ ಜಾಧವ್ ಅವರು ಪಾಕ್ ಸೇನಾ ಮುಖ್ಯಸ್ಥರಿಗೆ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಪಾಕ್ ಸೇನೆ ಹೇಳಿತ್ತು. 
ಜಾಧವ್ ಅವರು ತಮ್ಮ ಅರ್ಜಿಯಲ್ಲಿ ಪಾಕಿಸ್ತಾನದಲ್ಲಿ ಗೂಢಾಚಾರಿಕೆ ನಡೆಸಿದ ಬಗ್ಗೆ ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬಗ್ಗೆ ತಪ್ಪೊಪ್ಪಿಕೊಂಡಿರುವುದಾಗಿ ಪ್ರಕಟಿಸಿತ್ತು. ಸಹಾನುಭೂತಿಯ ಆಧಾರದ ಮೇಲೆ ತನ್ನ ತಪ್ಪಿಗೆ ಕ್ಷಮೆ ನೀಡುವಂತೆ ಕೋರಿ ಜಾಧವ್ ಅವರು ಪಾಕ್ ಸೇನಾ ಮುಖ್ಯಸ್ಥರಿಗೆ ಮನವಿ ಮಾಡಿದ್ದು ಈ ಅರ್ಜಿಯನ್ನು ವಜಾ ಮಾಡಿರುವುದಾಗಿ ಸೇನೆ ಹೇಳಿತ್ತು. 
ಗೂಢಚಾರಿಕೆ ನಡೆಸಿದ ಆರೋಪದ ಮೇಲೆ ಪಾಕಿಸ್ತಾನ ಸೇನಾ ಕೋರ್ಟ್ ಕುಲಭೂಷಣ್ ಜಾಧವ್ ಅವರಿಗೆ ಗಲ್ಲು ಶಿಕ್ಷೆ ನೀಡಿತ್ತು. ಈ ಪ್ರಕರಣವನ್ನು ಭಾರತ ಅಂತಾರಾಷ್ಟ್ರೀಯ ಕೋರ್ಟ್ ಗೆ ತೆಗೆದುಕೊಂಡು ಹೋಗಿದ್ದು ಕುಲಭೂಷಣ್ ಗಲ್ಲುಶಿಕ್ಷೆಗೆ ಕೋರ್ಟ್ ತಡೆಯಾಜ್ಞೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com