ಬಿಲ್ ಗೇಟ್ಸ್ ಹಿಂದಿಕ್ಕಿಂದ ಅಮೆಜಾನ್ ಸಿಇಓ: ಜೆಫ್ ಬೆಜೋಸ್ ವಿಶ್ವದ ಶ್ರೀಮಂತ ವ್ಯಕ್ತಿ

ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಸಿಇಓ ಜೆಫ್ ಬೆಜೋಸ್ ವಿಶ್ವದ ಅತೀ ಶ್ರೀಮಂತ ವ್ಯಕ್ತಿಯಾಗಿದ್ದಾರೆ...
ಜೆಫ್ ಬೆಜೋಸ್
ಜೆಫ್ ಬೆಜೋಸ್
ನ್ಯೂಯಾರ್ಕ್ : ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಸಿಇಓ ಜೆಫ್ ಬೆಜೋಸ್ ವಿಶ್ವದ ಅತೀ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ಮೈಕ್ರೋಸಾಫ್ಟ್  ಸಹ ಸಂಸ್ಥಾಪಕ ಬಿಲ್ ಗೇಟ್ಸ್ ರನ್ನು ಜೆಬೋಸ್ ಹಿಂದಿಕ್ಕಿದ್ದಾರೆ.
ಗುರುವಾರ ಮಾರುಕಟ್ಟೆ ಆರಂಭದಲ್ಲಿ ಅಮೆಜಾನ್ ಷೇರು ಬೆಲೆಗಳು ಶೇ.1.6ರಷ್ಟು ಏರಿಕೆಯಾಗಿದ್ದು ಜೆಫ್ ಬೆಜೋಸ್ ಗೆ ಹೆಚ್ಚುವರಿಯಾಗಿ 1.4 ಶತಕೋಟಿ ಡಾಲರ್ ಗಳ ಲಭಿಸಿತು. ಇದರಿಂದ ಅವರ ಸಂಪತ್ತು 90 ಶತಕೋಟಿ ಡಾಲರ್ ಗಳನ್ನು ಮೀರಿತು ಫೋರ್ಬ್ಸ್ ವರದಿ ಮಾಡಿದೆ.
ಕೇವಲ ಒಂದು ದಿನದ ಮಾರುಕಟ್ಟೆ ಷೇರುಗಳ ವ್ಯತ್ಯಾಸದಲ್ಲಿ ಜೆಫ್ ಬೆಜೋಸ್, ಬಿಲ್ ಗೇಟ್ಸ್ ಹಿಂದಿಕ್ಕಿದ್ದಾರೆ. ಅಂದರೆ ಬುಧವಾರ ಷೇರು ಮಾರುಕಟ್ಟೆ ಕೊನೆಯಾಗುವ ವೇಳೆಗೆ ಬಿಲ್ ಗೇಟ್ಸ್ ಸಂಪತ್ತು 90 ಶತಕೋಟಿ ಡಾಲರ್ ನಷ್ಟಿತ್ತು. 
2013ರ ಮೇ ತಿಂಗಳಿಂದ ಬ್ಲೂಮ್ ಬರ್ಗ್ ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಬಿಲ್ ಗೇಟ್ಸ್ ಮೊದಲ ಸ್ಥಾನದಲ್ಲಿರುತ್ತಿದ್ದರು. ಕಳೆದ 30 ವರ್ಷಗಳಿಂದ ಬೆಜೋಸ್ ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com