ಪನಾಮಾ ತೀರ್ಪು ಇಂದು: ಪಾಕ್ ಪ್ರಧಾನಿ ಷರೀಫ್ ಹಣೆಬರಹ ನಿರ್ಧಾರ

ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರ ಹಣೆಬರಹ ನಿರ್ಧರಿಸುವ ಪನಾಮಾ ಪೇಪರ್ಸ್ ಹಗರಣದ ತೀರ್ಪು ಶುಕ್ರವಾರ ಪ್ರಕಟಗೊಳ್ಳಲಿದೆ...
ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್
ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್
ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರ ಹಣೆಬರಹ ನಿರ್ಧರಿಸುವ ಪನಾಮಾ ಪೇಪರ್ಸ್ ಹಗರಣದ ತೀರ್ಪು ಶುಕ್ರವಾರ ಪ್ರಕಟಗೊಳ್ಳಲಿದೆ. 
ಪನಾಮಾ ಹಗರಣ ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್ 11.30ಕ್ಕೆ ತೀರ್ಪನ್ನು ಪ್ರಕಟಗೊಳಿಸಲಿದೆ. 
ಷರಾಫ್ ಕುಟುಂಬ ಲಂಡನ್ ನಲ್ಲಿ 2 ಬೇನಾಮಿ ಆಸ್ತಿ ಹೊಂದಿದ್ದು, ಪನಾಮಾ ಪೇಪರ್ಸ್ ಸೋರಿಕೆ ಮೂಲಕ ಈ ಸತ್ಯ ಬೆಳಕಿಗೆ ಬಂದಿತ್ತು. ಈ ಬಗ್ಗೆ ತನಿಖೆಗೆ ನೇಮಕಗೊಂಡಿದ್ದ ಸುಪ್ರೀಂಕೋರ್ಟ್ ಸಮಿತಿಯು ಷರೀಫ್ ಬೇನಾಮಿ ಆಸ್ತಿ ಹೊಂದಿದ್ದು ನಿಜ ಎಂದು ವರದಿ ನೀಡಿತ್ತು. 
ಆದರೆ, ವರದಿಯನ್ನು ಷರೀಫ್ ನಿರಾಕರಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಲಿದೆ. ಒಂದೇ ತೀರ್ಪು ಷರೀಫ್ ವಿರುದ್ಧ ಬಂದಿದ್ದೇ ಆದರೆ, ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವುದು ಅನಿವಾರ್ಯವಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com