
ಲಂಡನ್: ಲಂಡನ್ ನಲ್ಲಿ ಮತ್ತೆ ಉಗ್ರ ದಾಳಿಯಾಗಿದ್ದು, ಎರಡು ಪ್ರತಿಷ್ಟಿತ ಪ್ರದೇಶಗಳಲ್ಲಿ ಏಕಕಾಲದಲ್ಲಿ ಉಗ್ರರು ದಾಳಿ ಮಾಡಿದ ಪರಿಣಾಮ ಸುಮಾರು 6 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದಬಂದಿದೆ.
ಪ್ರತಿಷ್ಟಿತ ಲಂಡನ್ ಬ್ರಿಡ್ಜ್ ಬಳಿ ಉಗ್ರನೋರ್ವ ನಡೆಸಿದ ವ್ಯಾನ್ ದಾಳಿಯಲ್ಲಿ ಕನಿಷ್ಚ ಓರ್ವ ನಾಗರಿಕ ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ವಾರಾಂತ್ಯವಾದ್ದರಿಂದ ಲಂಡನ್ ಬ್ರಿಡ್ಜ್ ಬಳಿ ಸಾಕಷ್ಚು ಜನ ಸೇರಿದ್ದರು. ಇದನ್ನೇ ತನ್ನ ಕುಕೃತ್ಯಕ್ಕೆ ಬಳಕೆ ಮಾಡಿಕೊಂಡ ಉಗ್ರಗಾಮಿಯೋರ್ವ ವ್ಯಾನ್ ಅನ್ನು ವೇಗವಾಗಿ ಪಾದಾಚಾರಿಗಳ ಮೇಲೆ ಹರಿಸಿದ್ದಾನೆ. ಪರಿಣಾಮ ಸ್ಥಳದಲ್ಲೇ ಓರರ್ವ ಸಾವನ್ನಪ್ಪಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇನ್ನು ಮತ್ತೊಂದು ಪ್ರತಿಷ್ಠಿತ ಪ್ರದೇಶವಾದ ಬಾರೋ ಮಾರ್ಕೆಟ್ ಬಳಿಯಲ್ಲಿಯೂ ಉಗ್ರ ದಾಳಿಯಾಗಿದ್ದು, ಬಾರೋ ಮಾರ್ಕೆಟ್ ಬಳಿಯ ಬಾರ್ ಬಳಿ ಉಗ್ರಗಾಮಿಗಳು ಹರಿತವಾದ ಚಾಕುವಿನಿಂದ ಸಿಕ್ಕಸಿಕ್ಕವರಿಗೆ ಇರಿದಿದ್ದಾರೆ. ಪರಿಣಾಮ ಅಲ್ಲಿಯೂ ಸಾಕಷ್ಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಲಂಡನ್ ಪೊಲೀಸ್ ಮೂಲಗಳು ತಿಳಿಸಿರುವಂತೆ ಒಟ್ಟಾರೆ ಉಗ್ರದಾಳಿಯಲ್ಲಿ ಕನಿಷ್ಛ 6 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೂರಕ್ಕೂ ಹೆಚ್ಚು ಉಗ್ರರಿಂದ ದಾಳಿ
ಇನ್ನು ಬಾರೋ ಮಾರ್ಕೆಟ್ ನಲ್ಲಿ ಚಾಕು ದಾಳಿ ಮಾಡಿರುವ ಉಗ್ರರ ಸಮೂಹದಲ್ಲಿ ಕನಿಷ್ಠ 3ಕ್ಕೂ ಹೆಚ್ಚು ಉಗ್ರರು ಇರಬಹುದು ಎಂದು ಶಂಕಿಸಿದ್ದಾರೆ. ಚಾಕು ಇರಿತ ಪ್ರಕರಣ ವರದಿಯಾಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ಮೂರು ಮಂದಿ ಉಗ್ರರನ್ನು ಗುಂಡಿಟ್ಟುಕೊಂದು ಹಾಕಿದ್ದು, ಕಾರ್ಯಾಚರಣೆ ಮುಂದುವರೆಸಿದ್ದಾರೆ. ಇನ್ನು ಘಟನೆಯಲ್ಲಿ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಲಂಡನ್ 6 ಪ್ರಮುಖ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಘಟನಾ ಸ್ಥಳದಲ್ಲಿ ಶಸಸ್ತ್ರ ಪೊಲೀಸರು ಸುತ್ತುವರೆದಿದ್ದು. ಭಾರಿ ಪ್ರಮಾಣದ ಗುಂಡಿನ ಚಕಮಕಿಯ ಸದ್ದು ಕೇಳಿಬರುತ್ತಿದೆ. ಅಂತೆಯೇ ಎರಡು ಬಾರಿ ಬಾಂಬ್ ಸ್ಫೋಟದ ಶಬ್ದ ಕೂಡ ಕೇಳಿಬಂದಿದೆ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
Advertisement