ಲಂಡನ್ ಅಗ್ನಿ ದುರಂತದಲ್ಲಿ 79 ಮಂದಿ ಮೃತಪಟ್ಟಿರುವ ಸಾಧ್ಯತೆ: ಪೊಲೀಸ್

ಲಂಡನ್ ನ ವಸತಿ ಸಮುಚ್ಛಯದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 79 ಮಂದಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು...
ಲಂಡನ್ ಟವರ್ ಅಗ್ನಿ ದುರಂತ
ಲಂಡನ್ ಟವರ್ ಅಗ್ನಿ ದುರಂತ
ಲಂಡನ್: ಲಂಡನ್ ನ ವಸತಿ ಸಮುಚ್ಛಯದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 79 ಮಂದಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದಿದ್ದಾರೆ.
ಸಜೀವ ದಹನವಾದ ಐವರ ಗರುತು ಪತ್ಯೆ ಹಚ್ಚಲಾಗಿದೆ ಮತ್ತು 74 ನಾಪತ್ತೆಯಾಗಿದ್ದು, ಅವರೂ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಗ್ನಿ ದುರಂತದಲ್ಲಿ ಕನಿಷ್ಠ 79 ಮಂದಿ ಮೃತಪಟ್ಟಿದ್ದಾರೆ ಎಂದು ನಂಬಿರುವುದಾಗಿ ಪೊಲೀಸ್ ಕಮಾಂಡರ್ ಸ್ಟುವರ್ಟ್ ಕ್ಯಾಂಡಿ ಅವರು ಹೇಳಿದ್ದಾರೆ. ಅಲ್ಲದೆ ಬೆಂಕಿಯನ್ನು ಉದ್ದೇಶಪೂರ್ವಕವಾಗಿ ಹಚ್ಚಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ಬುಧವಾರ ಲಂಡನ್ನಿನ ನಾರ್ಥ್ ಕೆನ್ಸಿಂಗ್ಟನ್ ನಲ್ಲಿರುವ ಲಾಟಿಮರ್ ರಸ್ತೆಯ ಲ್ಯಾಂಕೆಸ್ಟರ್ ವೆಸ್ಟ್ ಎಸ್ಟೇಟ್ ನ ಅಪಾರ್ಟ್ ಮೆಂಟ್ ನಲ್ಲಿ ಅಗ್ನಿ ಕಾಣಿಸಿಕೊಂಡಿತ್ತು. ನೋಡ ನೋಡುತ್ತಿದ್ದಂತೆಯೇ ಬೆಂಕಿ ಅಪಾರ್ಟ್ ಮೆಂಟ್ ನ 24 ಅಂತಸ್ತಿನ ಇಡೀ ಕಟ್ಟಡಕ್ಕೆ ವ್ಯಾಪಿಸಿತ್ತು.
ಈ ಪ್ರತಿಷ್ಠಿತ ಅಪಾರ್ಟ್ ಮೆಂಟ್ ನಲ್ಲಿ ಸುಮಾರು 120 ಮನೆಗಳಿದ್ದು, ಅಗ್ನಿ ಅವಘಡದಲ್ಲಿ ಇದುವರೆಗೆ ಕನಿಷ್ಠ 30 ಮಂದಿ ಸಜೀವ ದಹನವಾಗಿದ್ದಾರೆ ಮತ್ತು 50ಕ್ಕು ಹೆಚ್ಚು ಜನ ಗಾಯಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com