ಇಸ್ರೇಲ್ ಗೆ ನನ್ನ ಮಿತ್ರ, ಭಾರತದ ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದಾರೆ: ಇಸ್ರೇಲ್ ಪ್ರಧಾನಿ ನೇತನ್ಯಾಹು ಟ್ವೀಟ್

ಇಸ್ರೇಲ್ ನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಟ್ವೀಟ್ ಮಾಡಿದ್ದು, ಭಾರತದ ಪ್ರಧಾನಿ, ನನ್ನ ಮಿತ್ರ ನರೇಂದ್ರ ಮೋದಿ ಇಸ್ರೇಲ್ ಗೆ ಭೇಟಿ ನೀಡುತ್ತಿರುವುದು ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆಗೆ...
ಬೆಂಜಮಿನ್ ನೇತನ್ಯಾಹು-ಮೋದಿ
ಬೆಂಜಮಿನ್ ನೇತನ್ಯಾಹು-ಮೋದಿ
ಜೆರುಸಲೇಂ: ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಪ್ರವಾಸ ನಿಗದಿಯಾಗಿದ್ದು, ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಇಸ್ರೇಲ್ ಗೆ ಭೇಟಿ ನೀಡುತ್ತಿದ್ದಾರೆ. ಈ ಬಗ್ಗೆ ಇಸ್ರೇಲ್ ನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಟ್ವೀಟ್ ಮಾಡಿದ್ದು, ಭಾರತದ ಪ್ರಧಾನಿ, ನನ್ನ ಮಿತ್ರ ನರೇಂದ್ರ ಮೋದಿ ಇಸ್ರೇಲ್ ಗೆ ಭೇಟಿ ನೀಡುತ್ತಿರುವುದು ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆಗೆ ಮಹತ್ವದ ಹೆಜ್ಜೆಯಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಜು.4 ರಂದು ಇಸ್ರೇಲ್ ಗೆ ಭೇಟಿ ನೀಡುತ್ತಿದ್ದು ಮೂರು ದಿನಗಳ ಪ್ರವಾಸ ಇದಾಗಿದೆ. ವಾರದ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿರುವ ನೆತನ್ಯಾಹು, ಭಾರತದ ಪ್ರಧಾನಿ, ನನ್ನ ಮಿತ್ರ ನರೇಂದ್ರ ಮೋದಿ  ಇಸ್ರೇಲ್ ಗೆ ಆಗಮಿಸುತ್ತಿದ್ದಾರೆ. ಇದು ಇಸ್ರೇಲ್ ಗೆ ಐತಿಹಾಸಿಕ ಭೇಟಿಯಾಗಿರಲಿದೆ. 70 ವರ್ಷಗಳಲ್ಲಿ ಇಸ್ರೇಲ್ ಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ನರೇಂದ್ರ ಮೋದಿ ಆಗಿರಲಿದ್ದಾರೆ. ಇದರಿಂದ ಇಸ್ರೇಲ್- ಭಾರತದ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಹೇಳಿದ್ದಾರೆ. ಇದನ್ನೇ ಟ್ವೀಟ್ ನಲ್ಲಿಯೂ ನೇತನ್ಯಾಹು ಹೇಳಿದ್ದು, ಭಾರತ ವಿಶ್ವದ ಬೆಳವಣಿಗೆಯಾಗುತ್ತಿರುವ ಅತಿ ದೊಡ್ಡ ಆರ್ಥಿಕತೆಯ ದೇಶವಾಗಿದೆ. ಇಸ್ರೇಲ್- ಭಾರತದ ದ್ವಿಪಕ್ಷೀಯ ಸಂಬಂಧ ಉತ್ತಮವಾಗಿದ್ದು, ಪ್ರಧಾನಿ ಮೋದಿ ಭೇಟಿಯಿಂದ ಮತ್ತಷ್ಟು ಗಟ್ಟಿಯಾಗಲಿದೆ ಎಂದು ನೇತನ್ಯಾಹು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com