ಪ್ರಯಾಣ ವೀಸಾ ನಿಷೇಧ: ಆರು ಮುಸ್ಲಿಂ ರಾಷ್ಟ್ರಗಳ ವೀಸಾ ಅರ್ಜಿದಾರರಿಗೆ ಮಾನದಂಡ ನಿಗದಿಪಡಿಸಿದ ಅಮೆರಿಕಾ

ಆರು ಮುಸಲ್ಮಾನ ರಾಷ್ಟ್ರಗಳ ನಾಗರಿಕರು ಮತ್ತು ಎಲ್ಲಾ ನಿರಾಶ್ರಿತರ ವೀಸಾ ಅರ್ಜಿಗಳಿಗೆ ಅಮೆರಿಕಾದ ಡೊನಾಲ್ಡ್ ಟ್ರಂಪ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಆರು ಮುಸಲ್ಮಾನ ರಾಷ್ಟ್ರಗಳ ನಾಗರಿಕರು ಮತ್ತು ಎಲ್ಲಾ ನಿರಾಶ್ರಿತರ ವೀಸಾ ಅರ್ಜಿಗಳಿಗೆ ಅಮೆರಿಕಾದ ಡೊನಾಲ್ಡ್ ಟ್ರಂಪ್ ಸರ್ಕಾರ ಹೊಸ ಮಾನದಂಡವನ್ನು ನಿಗದಿಪಡಿಸಿದ್ದು ಈ ಕುರಿತು ನಿನ್ನೆ ಮಾರ್ಗದರ್ಶನವನ್ನು ನೀಡಿದೆ.
ಆರು ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ಪ್ರವೇಶ ವೀಸಾ ನಿರಾಕರಣೆ ಮಾಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರ್ಯನಿರ್ವಾಹಕ ಆದೇಶಕ್ಕೆ ವ್ಯಾಪಕ ಟೀಕೆ ಕೇಳಿಬಂದಿರುವುದರಿಂದ ಸುಪ್ರೀಂ ಕೋರ್ಟ್, ನಿಯಮವನ್ನು ಭಾಗಶಃ ಮೂಲರೂಪಕ್ಕೆ ತಂದಿರುವುದರಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.  
ಯುಎಸ್ ರಾಜತಾಂತ್ರಿಕ ಹುದ್ದೆಗಳು ಮತ್ತು ಸುದ್ದಿ ಸಂಸ್ಥೆಗಳಾದ ರಾಯ್ ಟರ್ಸ್ ಮತ್ತು ಅಸೋಸಿಯೇಟೆಡ್ ಪ್ರೆಸ್ ಗೆ ವಿತರಿಸಿದ ಮಾರ್ಗಸೂಚಿಗಳ ಪ್ರತಿಯ ಪ್ರಕಾರ, ಪೋಷಕರು, ಸಂಗಾತಿ, ಮಕ್ಕಳು, ಅಳಿಯ, ಸೊಸೆ ಅಥವಾ ಮಲ ಸೋದರರು ಸೇರಿದಂತೆ ಸೋದರರು ಕುಟುಂಬದ ಹತ್ತಿರದ ಸಂಬಂಧಿಕರೆಂದು ಪರಿಗಣಿಸಲಾಗುತ್ತದೆ. 
ಅಜ್ಜ-ಅಜ್ಜಿ, ಮೊಮ್ಮಕ್ಕಳು, ಚಿಕ್ಕಮ, ಅತ್ತೆ, ಮಾವ, ಚಿಕ್ಕಪ್ಪ, ಸೋದರ ಸಂಬಂಧಿಗಳು, ಸೋದರಳಿಯರು, ಸೋದರ ಸಂಬಂಧಿಗಳು, ಸಹೋದರ ಮತ್ತು ಸಹೋದರಿಯರು, ಭಾವಿ ಪತಿ ಅಥವಾ ಪತ್ನಿ ಮೊದಲಾದವರನ್ನು ಹತ್ತಿರದ ಸಂಬಂಧಿಗಳೆಂದು ಪರಿಗಣಿಸಲಾಗುವುದಿಲ್ಲ.
ಅಮೆರಿಕಾ ಜೊತೆಗಿನ ಯಾವುದೇ ಗುರುತಿಸುವಿಕೆ, ದಾಖಲೆಗಳು ಸಾಮಾನ್ಯ ಪ್ರಕ್ರಿಯೆ ಮೂಲಕ ರಚಿಸಲಾಗಿದೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. 
ಅಮೆರಿಕಾದ ವೀಸಾ ಸೌಲಭ್ಯದಿಂದ ನಿಷೇಧಕ್ಕೊಳಪಟ್ಟ ದೇಶಗಳೆಂದರೆ ಇರಾನ್, ಲಿಬಿಯಾ, ಸೊಮಾಲಿಯಾ, ಸುಡಾನ್, ಸಿರಿಯಾ ಮತ್ತು ಯೆಮೆನ್.
ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ಇಲಾಖೆ, ಇದು ಆಂತರಿಕ ವಿಷಯವಾಗಿದ್ದು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com