ಇರಾಕ್ ನಿಂದ ಪಲಾಯನ ಮಾಡಿ, ಇಲ್ಲ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾಗಿ: ಬಾಗ್ದಾದಿ ಅಂತಿಮ ಕರೆ!

ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಮುಖ್ಯಸ್ಥ ಅಬು ಬಕರ್ ಅಲ್ ಬಗ್ದಾದಿ ತನ್ನ ಕೊನೆಯ ಭಾಷಣ ಮಾಡಿದ್ದು, ಇಸಿಸ್ ಉಗ್ರರು ಇರಾಕ್ ನಿಂದ ಪಲಾಯನ ಮಾಡುವಂತೆ ಅಥವಾ ತಮ್ಮನ್ನು ತಾವು ಆತ್ಮಾಹುತಿ ಮಾಡಿಕೊಂಡು ಹುತಾತ್ಮರಾಗುವಂತೆ ಕರೆ ನೀಡಿದ್ದಾನೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಾಗ್ದಾದ್: ಇರಾಕ್ ನಲ್ಲಿ ತೀವ್ರ ಹಿನ್ನಡೆಯನುಭವಿಸಿ ಸೋಲು ಕಂಡಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಮುಖ್ಯಸ್ಥ ಅಬು ಬಕರ್ ಅಲ್ ಬಗ್ದಾದಿ ತನ್ನ ಕೊನೆಯ ಭಾಷಣ ಮಾಡಿದ್ದು, ಇಸಿಸ್ ಉಗ್ರರು ಇರಾಕ್ ನಿಂದ ಪಲಾಯನ  ಮಾಡುವಂತೆ ಅಥವಾ ತಮ್ಮನ್ನು ತಾವು ಆತ್ಮಾಹುತಿ ಮಾಡಿಕೊಂಡು ಹುತಾತ್ಮರಾಗುವಂತೆ ಕರೆ ನೀಡಿದ್ದಾನೆ.

ಇತ್ತೀಚೆಗಷ್ಟೇ ಇರಾಕ್ ಸೋಲಿನ ಹಿನ್ನಲೆಯಲ್ಲಿ ಅಬು ಅಲ್ ಬಕರ್ ಬಾಗ್ದಾದಿ ತನ್ನ ಅಂತಿಮ ವಿದಾಯದ ಭಾಷಣ ಮಾಡಿದ್ದು, ಈ ಭಾಷಣದಲ್ಲಿ "ಕೂಡಲೇ ದೇಶಬಿಟ್ಟು ತೆರಳಿ, ಇಲ್ಲವೆ ಆತ್ಮಾಹುತಿ ದಾಳಿಗಳ ಮೂಲಕ ಪ್ರಾಣಬಿಡಿ’  ಎಂದು ಕರೆ ಕೊಟ್ಟಿದ್ದಾನೆ.  ಐಸಿಸ್ ಮುಖ್ಯಸ್ಥ ಅಲ್ ಬಗ್ದಾದಿ ತನ್ನ ಕಮಾಂಡರ್​ ಗಳನ್ನು ಉದ್ದೇಶಿಸಿ ‘ವಿದಾಯ ಭಾಷಣ’ ಮಾಡಿದ್ದು, ಅರಬ್ ರಾಷ್ಟ್ರದವರಲ್ಲದ ‘ಹೋರಾಟಗಾರರು’ ದೇಶಬಿಟ್ಟು ತೆರಳುವಂತೆ ಇಲ್ಲವೆ ಆತ್ಮಾಹುತಿ  ದಾಳಿಗಳ ಮೂಲಕ ಪ್ರಾಣ ಬಿಡುವಂತೆ ಹೇಳಿದ್ದಾನೆ. ಅಲ್ಲದೆ ಐಸಿಸ್ ಕಚೇರಿಯನ್ನೂ ಮುಚ್ಚುವಂತೆ ಬಾಗ್ಗಾದಿ ಹೇಳಿದ್ದು, ಇರಾಕ್​'ನ ಸರ್ಕಾರಿ ಟೆಲಿವಿಷನ್ ಅಲ್ ಸುರಾಮಿಯಾ ಅಲ್ ಬಗ್ದಾದಿ ಬರೆದಿರುವ ಪತ್ರವನ್ನು ಉಲ್ಲೇಖಿಸಿ ಈ  ಸುದ್ದಿ ಮಾಡಲಾಗಿದೆ.

ಬಗ್ದಾದಿ ಬದುಕಿದ್ದಾನೆಯೇ?
ಇನ್ನು ಇರಾಕ್ ಸೇನಾ ಪಡೆಗಳು ಪ್ರಾಬಲ್ಯ ಸಾಧಿಸುತ್ತಿದ್ದಂತೆಯೇ ಇತ್ತ ಮತ್ತೊಂದು ಊಹಾಪೋಹಗಳು ಹರಿದಾಡಲು ಆರಂಭವಾಗಿದೆ. ಅದರಂತೆ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಮುಖ್ಯಸ್ಥ ಅಬು ಅಲ್ ಬಕರ್ ಬಗ್ದಾದಿ  ಸತ್ತಿದ್ದಾನೆ ಎಂದು ಒಂದು ಮೂಲ ಹೇಳಿದರೆ, ಮತ್ತೊಂದು ಮೂಲದಿಂದ ಆತ ಬದುಕಿದ್ದು, ಯುದ್ಧದವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಇರಾಕ್​ನ ಉತ್ತರಭಾಗದಲ್ಲಿ ಸೇನೆ ನಡೆಸಿದ  ಕಾರ್ಯಾಚರಣೆಯಲ್ಲಿ ಬಗ್ದಾದಿ ಗಂಭೀರವಾಗಿ ಗಾಯಗೊಂಡಿದ್ದು, ಆತ ನಡೆದಾಡಲೂ ಕೂಡ ಆಗದದ ಸ್ಥಿತಿಯಲ್ಲಿದ್ದಾನೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಮೊಸೂಲ್ ಸನಿಹದ ಸುರಂಗವೊಂದರಲ್ಲಿ  ಆತ ಅಡಗಿಕೊಂಡಿದ್ದು, ಭೂಗತನಾಗಿ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದಾನೆ ಎಂದೂ ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com