ಅಳಿವಿನಂಚಿನಲ್ಲಿರುವ ನೀಲಿ ಬಣ್ಣದ ಚಿಟ್ಟೆ ಕೊಂದ ಅಪರಾಧಿಗೆ ಲಂಡನ್ ನ್ಯಾಯಾಲಯದ ಶಿಕ್ಷೆ!

ತೀರಾ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ದೊಡ್ಡ ಗಾತ್ರದ ನೀಲಿ ಬಣ್ಣದ ಚಿಟ್ಟೆಗಳನ್ನು ಕೊಂದ ಆರೋಪದ ಮೇರೆಗೆ ಲಂಡನ್ ನ್ಯಾಯಾಲಯ ವ್ಯಕ್ತಿಯೋರ್ವನನ್ನು ಅಪರಾಧಿ ಎಂದು ಘೋಷಿಸಿದೆ.
ಅಳಿವಿನಂಚಿನಲ್ಲಿರುವ ನೀಲಿ ಬಣ್ಣದ ದೊಡ್ಡ ಚಿಟ್ಟೆಗಳು
ಅಳಿವಿನಂಚಿನಲ್ಲಿರುವ ನೀಲಿ ಬಣ್ಣದ ದೊಡ್ಡ ಚಿಟ್ಟೆಗಳು

ಲಂಡನ್: ತೀರಾ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ದೊಡ್ಡ ಗಾತ್ರದ ನೀಲಿ ಬಣ್ಣದ ಚಿಟ್ಟೆಗಳನ್ನು ಕೊಂದ ಆರೋಪದ ಮೇರೆಗೆ ಲಂಡನ್ ನ್ಯಾಯಾಲಯ ವ್ಯಕ್ತಿಯೋರ್ವನನ್ನು ಅಪರಾಧಿ ಎಂದು ಘೋಷಿಸಿದೆ.

2 ದೊಡ್ಡ ಗಾತ್ರದ ನೀಲಿ ಬಣ್ಣದ ಚಿಟ್ಟೆಗಳನ್ನು ಕೊಂದ ಪ್ರಕರಣದಲ್ಲಿ 57 ವರ್ಷದ ಆರೋಪಿ ಫಿಲಿಪ್ ಕಲೆನ್ ಅಪರಾಧಿ ಎಂದು ಲಂಡನ್ ನ ಬ್ರಿಸ್ಟಲ್ ನ್ಯಾಯಾಲಯ ಅಪರೂಪದ ತೀರ್ಪು ನೀಡಿದೆ. ಅಂತೆಯೇ ಪ್ರಕರಣದ ಶಿಕ್ಷೆ  ಪ್ರಮಾಣವನ್ನು ಮುಂದಿನ ತಿಂಗಳು ನೀಡುವುದಾಗಿಯೂ ಘೋಷಣೆ ಮಾಡಿದೆ.

ಪ್ರಪಂಚದ ಜೀವ ಪರಿಸರದಲ್ಲಿ ಅತೀ ವಿರಳವಾದ ಮತ್ತು ಅಳಿವಿನಂಚಿನಲ್ಲಿರುವ ಪ್ರಬೇಧಗಳಲ್ಲಿ ನೀಲಿ ಬಣ್ಣದ ದೊಡ್ಡ ಗಾತ್ರದ ಚಿಟ್ಟೆ ಕೂಡ ಒಂದಾಗಿದ್ದು, ಚಿಟ್ಟೆ ಕೊಂದ ಆರೋಪದ ಮೇರೆಗೆ ವ್ಯಕ್ತಿಗೆ ಶಿಕ್ಷೆಯಾದ ಯಾವುದೇ  ಪ್ರಕರಣಗಳಿಲ್ಲ. ಹೀಗಾಗಿ ಇದೊಂದು ಅಪರೂಪದ ಪ್ರಕರಣವಾಗಿದೆ ಎಂದು ನ್ಯಾಯಾಧೀಶ ಕೆವಿನ್ ವಿಥೆ ಹೇಳಿದ್ದಾರೆ.

ಕಳೆದ ವರ್ಷದ ಫೆಬ್ರವರಿಯಲ್ಲಿ ನೈರುತ್ಯ ಲಂಡನ್ ನ ಗ್ಲೌಸೆಸ್ಟರ್ಷೈರ್ ಮತ್ತು ಸಾಮರ್ಸೆಟ್ ನ 2 ಸಂರಕ್ಷಿತಾರಣ್ಯ ಪ್ರದೇಶದಲ್ಲಿ ನೀಲಿ ಬಣ್ಣದ ಚಿಟ್ಟೆಗಳನ್ನು ಕಲೆನ್ ಹಿಡಿದಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಅದೇ  ಫೆಬ್ರವರಿಯಲ್ಲೇ ಬ್ರಿಸ್ಟಲ್ ನಲ್ಲಿರುವ ಕಲೆನ್ ನಿವಾಸದ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಕಲೆನ್ ಮನೆಯಲ್ಲಿ ಸುಮಾರು 30 ಟ್ರೇಗಳಲ್ಲಿ ಸತ್ತ ಚಿಟ್ಟೆಗಳು ಹಾಗೂ 2 ದೊಡ್ಡ ಗಾತ್ರದ ನೀಲಿ ಬಣ್ಣದ ಚಿಟ್ಟೆಗಳು ಪತ್ತೆಯಾಗಿದ್ದವು. ಬಳಿಕ  ತನಿಖೆ ಮುಂದುವರೆಸಿದ್ದ ಅಧಿಕಾರಿಗಳು ಆರೋಪಿ ಕಲೆನ್ ಚಿಟ್ಟೆಗಳನ್ನು ಅಕ್ರಮವಾಗಿ ಆನ್ ಲೈನ್ ಮೂಲಕ ಮಾರಾಟ ಮಾಡುತ್ತಿದ್ದ ವಿಚಾರವನ್ನು ಬಹಿರಂಗ ಪಡಿಸಿದ್ದರು. ಅಮೇಜಾನ್ ಮೂಲಕ ಕಲೆನ್ ಚಿಟ್ಟೆಗಳನ್ನು ಮಾರಾಟ  ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ದೊಡ್ಡ ಗಾತ್ರದ ನೀಲಿ ಬಣ್ಣದ ಚಿಟ್ಟೆಗಳು ತೀರಾ ಅಪರೂಪದ ಪ್ರಬೇದವಾಗಿದ್ದು, ಮೊಟ್ಟ ಮೊದಲ ಬಾರಿಗೆ 1795 ಲಂಡನ್ ನಲ್ಲಿ ಪತ್ತೆಯಾಗಿತ್ತು. ಬಳಿಕ 1979ರಲ್ಲಿ ಈ ಸಂತತಿ ಸಂಪೂರ್ಣ ನಾಶವಾಗಿ, 1983ರಲ್ಲಿ ಸ್ವೀಡನ್ ನಿಂದ  ಈ ನೀಲಿ ಬಣ್ಣದ ಚಿಟ್ಟೆಗಳನ್ನು ತರಿಸಿಕೊಂಡು ಲಂಡನ್ 12ಕ್ಕೂ ಹೆಚ್ಚು ಪ್ರದೇಶಗಳಲ್ಲಿಟ್ಟು ಈ ಪ್ರದೇಶಗಳನ್ನು ಚಿಟ್ಟೆ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com