ಉಗ್ರ ದಾಳಿ ನಡುವೆಯೇ ಪೊಲೀಸ್ ಅಧಿಕಾರಿಯ ಪ್ರಾಣ ರಕ್ಷಣೆಗೆ ಮುಂದಾಗಿದ್ದ ಬ್ರಿಟನ್ ಸಂಸದ!

ಲಂಡನ್ ಸಂಸತ್ ಭವನದ ಬಳಿ ಉಗ್ರರು ನಡೆಸಿದ್ದ ಉಗ್ರ ದಾಳಿಯಲ್ಲಿ ಗಾಯಗೊಂಡು ಪ್ರಾಣಾಪಯದಲ್ಲಿದ್ದ ಪೊಲೀಸ್ ಅಧಿಕಾರಿಯೋರ್ವ ಪ್ರಾಣ ರಕ್ಷಣೆಗೆ ಬ್ರಿಟನ್ ಸಂಸದರೊಬ್ಬರು ಮುಂದಾಗಿ ಮಾನವೀಯತೆ ಮೆರೆದಿದ್ದಾರೆ.
ಪೊಲೀಸ್ ಅಧಿಕಾರಿಗೆ ಪ್ರಥಮ ಚಿಕಿತ್ಸೆ ನೀಡುತ್ತಿರುವ ಸಂಸದ
ಪೊಲೀಸ್ ಅಧಿಕಾರಿಗೆ ಪ್ರಥಮ ಚಿಕಿತ್ಸೆ ನೀಡುತ್ತಿರುವ ಸಂಸದ

ಲಂಡನ್: ಲಂಡನ್ ಸಂಸತ್ ಭವನದ ಬಳಿ ಉಗ್ರರು ನಡೆಸಿದ್ದ ಉಗ್ರ ದಾಳಿಯಲ್ಲಿ ಗಾಯಗೊಂಡು ಪ್ರಾಣಾಪಯದಲ್ಲಿದ್ದ ಪೊಲೀಸ್ ಅಧಿಕಾರಿಯೋರ್ವ ಪ್ರಾಣ ರಕ್ಷಣೆಗೆ ಬ್ರಿಟನ್ ಸಂಸದರೊಬ್ಬರು ಮುಂದಾಗಿ ಮಾನವೀಯತೆ ಮೆರೆದಿದ್ದಾರೆ.

ಲಂಡನ್ ವೆಸ್ಚ್ ಮಿನ್ಸ್ ಸ್ಟರ್ ಸೇತುವೆ ಮೇಲೆ ಉಗ್ರರು ದಾಳಿ ನಡೆಸುತ್ತಿದ್ದರೆ ಇತ್ತ ಉಗ್ರ ದಾಳಿಯಲ್ಲಿ ಗುಂಡೇಟಿಗೆ ಒಳಗಾಗಿ ಪ್ರಾಣಾಪಾಯದಲ್ಲಿದ್ದ ಪೊಲೀಸ್ ಅಧಿಕಾರಿಗಯನ್ನು ಬ್ರಿಟನ್ ಸಂಸದ ಟಾಬಿಯಸ್ ಎಲ್ವುಡ್ ರಕ್ಷಿಸಲು  ಯತ್ನಿಸಿ ಮಾನವೀಯತೆ ಮೆರೆದಿದ್ದಾರೆ. ಸಂಸತ್ ಭವನದ ಹೊರಗೆ ಗುಂಡಿನ ಚಕಮಕಿ ನಡೆಯುತ್ತಿರುವಾಗಲೇ ಕಿಟಕಿ ಮೂಲಕ ಹೊರಗೆ ನೋಡಿದ್ದ ಟಾಬಿಯಸ್ ಎಲ್ವುಡ್ ಅವರು, ಪೊಲೀಸ್ ಅಧಿಕಾರಿಯೋರ್ವ ಕಾರ್ಯಾಚರಣೆ  ವೇಳೆ ಗಾಯಗೊಂಡು ಪ್ರಾಣಾಪಾಯದಲ್ಲಿದ್ದನ್ನು ಗಮನಿಸಿದ್ದಾರೆ.

ಕೂಡಲೇ ತಡಮಾಡದೇ ಸಂಸತ್ ಭವನದ ಹೊರಗೆ ಬಂದ ಟಾಬಿಯಸ್ ಎಲ್ವುಡ್, ಪ್ರಜ್ಞಾಹೀನನಾಗಿ ಬಿದ್ದಿದ್ದ ಪೊಲೀಸ್ ಅಧಿಕಾರಿಗೆ ಸಿಪಿಆರ್ (ಬಾಯಿಗೆ ಬಾಯಿ ಇಟ್ಟು ಉಸಿರನ್ನು ಊದುವ ಪ್ರಕ್ರಿಯೆ) ಮತ್ತು ಪ್ರಥಮ ಚಿಕಿತ್ಸೆ  ನೀಡಲು ಪ್ರಯತ್ನಿಸಿದ್ದಾರೆ. ಟಾಬಿಯಸ್ ಎಲ್ವುಡ್ ಅವರು ಪೊಲೀಸ್ ಅಧಿಕಾರಿಯ ಬಳಿ ಬರುತ್ತಿದ್ದಂತೆಯೇ ಅಲ್ಲಿನ ಕೆಲ ಭದ್ರತಾ ಅಧಿಕಾರಿಗಳೂ ಕೂಡ ಅವರಿಗೆ ಸಾಥ್ ನೀಡಿದ್ದಾರೆ. ಗಾಯಗೊಂಡಿದ್ದ ಪೊಲೀಸ್ ಅಧಿಕಾರಿಯ  ಬಳಿಕ  ಏರ್ ಆ್ಯಂಬುಲೆನ್ಸ್ ಮತ್ತು ವೈಧ್ಯಾಧಿಕಾರಿಗಳು ಬರುವವರೆಗೂ ಪೊಲೀಸ್ ಅಧಿಕಾರಿಗೆ ಪ್ರಥಮ ಚಿಕಿತ್ಸೆ ನೀಡುತ್ತಿದ್ದ ಟಾಬಿಯಸ್ ಎಲ್ವುಡ್ ಅವರು, ಏರ್ ಆ್ಯಂಬುಲೆನ್ಸ್ ನಲ್ಲಿ ಪೊಲೀಸ್ ಅಧಿಕಾರಿಯನ್ನು ಆಸ್ಪತ್ರೆಗೆ ರವಾನಿಸಿದ  ಬಳಿಕವಷ್ಟೇ ಸಂಸತ್ ಭವನಕ್ಕೆ ಮರಳಿದರಂತೆ.

ಮೂಲಗಳ ಪ್ರಕಾರ ಸಂಸದ ಟಾಬಿಯಸ್ ಎಲ್ವುಡ್ ಅವರು ಈ ಹಿಂದೆ ಸೇನಾ ತರಬೇತಿ ಪಡೆದಿದ್ದರಂತೆ. ದುರಾದೃಷ್ಟವಶಾತ್ ಟಾಬಿಯಸ್ ಎಲ್ವುಡ್ ಪ್ರಥಮ ಚಿಕಿತ್ಸೆ ನೀಡಿದ ಪೊಲೀಸ್ ಅಧಿಕಾರಿ ಬದುಕುಳಿಯಲಿಲ್ಲ. ದೇಹಕ್ಕೆ ಬಿದ್ದಿದ್ದ  ಸುಮಾರು ಗುಂಡುಗಳು ಅವರ ಪ್ರಾಣ ತೆಗೆದಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಇವಿಷ್ಟೂ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟಾಬಿಯಸ್ ಎಲ್ವುಡ್ ಅವರ ಮಾನವೀಯತೆ ಎಲ್ಲೆಡೆ ವ್ಯಾಪಕ ಪ್ರಶಂಸೆ ಗಳಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com