ಬ್ರಿಟನ್ ಸಂಸತ್ ಬಳಿ ದಾಳಿ ಮಾಡಿದ ವ್ಯಕ್ತಿ ಖಾಲಿದ್ ಮಸೂದ್: ಪೊಲೀಸರು

ಬ್ರಿಟನ್ ಸಂಸತ್ತು ಬಳಿ ದಾಳಿ ನಡೆಸಲು ಯತ್ನಿಸಿ ಪೊಲೀಸ್ ಸಿಬ್ಬಂದಿಗೆ ಚಾಕುವಿನಿಂದ ಇರಿದು...
ಲಂಡನ್ ನ ವೆಸ್ಟ್ ಮಿನ್ಟರ್ ಅರಮನೆಯ ಹೊರಗೆ ತುರ್ತು ಸೇವಾ ಸಿಬ್ಬಂದಿಗಳು.
ಲಂಡನ್ ನ ವೆಸ್ಟ್ ಮಿನ್ಟರ್ ಅರಮನೆಯ ಹೊರಗೆ ತುರ್ತು ಸೇವಾ ಸಿಬ್ಬಂದಿಗಳು.
ಲಂಡನ್: ಬ್ರಿಟನ್ ಸಂಸತ್ತು ಬಳಿ ದಾಳಿ ನಡೆಸಲು ಯತ್ನಿಸಿ ಪೊಲೀಸ್ ಸಿಬ್ಬಂದಿಗೆ ಚಾಕುವಿನಿಂದ ಇರಿದು ಹತ್ಯೆಗೈದ ವ್ಯಕ್ತಿಯನ್ನು 52 ವರ್ಷದ ಖಾಲಿದ್ ಮಸೂದ್ ಎಂದು ಗುರುತಿಸಲಾಗಿದೆ.
ಮಸೂದ್ ಹಲವು ಆಲಿಯಾಸ್ ಹೆಸರುಗಳಿಂದ ಗುರುತಿಸಿಕೊಂಡಿದ್ದಾನೆ ಎಂದು ಲಂಡನ್ ಮೆಟ್ರೊಪಾಲಿಟನ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಗ್ನೇಯ ಇಂಗ್ಲೆಂಡ್ ನ ಕೆಂಟ್ ನಲ್ಲಿ ಜನಿಸಿದ ಮಸೂದ್ ಪಶ್ಚಿಮ ಮಿಡ್ಲಾಂಡ್ ನಲ್ಲಿ ವಾಸಿಸುತ್ತಿದ್ದಾನೆ. ಅಲ್ಲಿ ಬಿರ್ಮಿಂಗ್ ಹ್ಯಾಮ್ ನಗರವಿದ್ದು ಇಲ್ಲಿ ಸಶಸ್ತ್ರ ಪೊಲೀಸರು ನಡೆಸಿದ ದಾಳಿಗೂ ನಿನ್ನೆ ಸಂಸತ್ತು ಬಳಿ ದಾಳಿ ನಡೆಸಲು ಯತ್ನಿಸಿದ ಘಟನೆಗೂ ಸಂಬಂಧವಿದೆ ಎನ್ನಲಾಗುತ್ತಿದೆ.
ಘೋರ ದೈಹಿಕ ಹಾನಿ ಸೇರಿದಂತೆ ದಾಳಿ ನಡೆಸಿದ ಆರೋಪ, ಅಪರಾಧ ಶಸ್ತ್ರಾಸ್ತ್ರಗಳನ್ನು ಹೊಂದಿರುವಿಕೆ ಮತ್ತು 1983 ರಿಂದ 2003 ವರೆಗಿನ ಸಾರ್ವಜನಿಕ ಆದೇಶದ ಅಪರಾಧಗಳಿಗೆ ಸಂಬಂಧಪಟ್ಟ ಆರೋಪಗಳು ಮಸೂದ್ ಮೇಲಿವೆ.
ಆದರೆ ಈ ಹಿಂದೆ ಮಸೂದ್ ವಿರುದ್ಧ ಯಾವುದೇ ಭಯೋತ್ಪಾದನೆ ಅಪರಾಧಗಳಲ್ಲಿ ತಪ್ಪಿತಸ್ಥ ಎಂದು ಶಿಕ್ಷೆಯಾಗಿರಲಿಲ್ಲ. ಈ ಹಿಂದೆ ಆತನ ವಿರುದ್ಧ ತನಿಖೆ ಕೂಡ ನಡೆಸಿರಲಿಲ್ಲ ಮತ್ತು ಭಯೋತ್ಪಾದಕ ದಾಳಿ ನಡೆಸುತ್ತಾನೆ ಎಂದು ಗುಪ್ತಚರ ಇಲಾಖೆ ಕೂಡ ಮಾಹಿತಿ ಪಡೆದಿರಲಿಲ್ಲ.
ನಿನ್ನೆ  ಪ್ರತಿಕ್ರಿಯೆ ನೀಡಿದ್ದ ಬ್ರಿಟನ್ ಪ್ರಧಾನಿ ತೆರೆಸಾ ಮೇ, ಹಿಂಸಾತ್ಮಕ ತೀವ್ರಗಾಮಿತ್ವ ಕುರಿತು ಕಳವಳ ವ್ಯಕ್ತಪಡಿಸಿದ ಗುಪ್ತಚರ ಸೇವಾ ಇಲಾಖೆ ಎಮ್ 15 ವ್ಯಕ್ತಿಯನ್ನು ತನಿಖೆ ನಡೆಸಿತ್ತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com