ಲೋಕಸಭೆಯ ಮಾದರಿಯಲ್ಲಿರುವ ಅಮೆರಿಕಾದ ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್ ನಲ್ಲಿ 435 ಸದಸ್ಯರಿದ್ದು, ಡೊನಾಲ್ಡ್ ಟ್ರಂಪ್ ಪ್ರತಿನಿಧಿಸುವ ರಿಪಬ್ಲಿಕನ್ ಪಕ್ಷ 235 ಸದಸ್ಯರ ಸರಳ ಬಹುಮತ ಹೊಂದಿದೆ. ಆದರೆ ರಿಪಬ್ಲಿಕನ್ ಪಕ್ಷದ ಕೆಲವು ಸದಸ್ಯರೇ ಮಸೂದೆ ರದ್ದತಿಗೆ ಅಗತ್ಯವಿದ್ದ 215 ಮತಗಳನ್ನು ಗಳಿಸಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್ ನ ಸಭಾಧ್ಯಕ್ಷರು ಒಬಾಮ ಹೆಲ್ತ್ ಕೇರ್ ಮಸೂದೆಗೆ ಪರ್ಯಾಯವಾಗಿ ರೂಪಿಸಲಾಗಿದ್ದ ಹೊಸ ಮಸೂದೆಯನ್ನು ವಾಪಸ್ ಪಡೆದಿದ್ದಾರೆ. ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್ ನಲ್ಲಿ ಹೊಸ ಮಸೂದೆ ಅಂಗೀಕಾರವಾಗದೇ ಇರುವುದು ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಉಂಟಾದ ದೊಡ್ಡ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.