ಜಪಾನ್‌ ಸೇನಾ ವಿಮಾನ ಪತನ, ನಾಲ್ವರು ಸೈನಿಕರ ದುರ್ಮರಣ

ಜಪಾನ್ ಸೇನಾ ವಿಮಾನ ಪತನಗೊಂಡು ನಾಲ್ವರು ಸೈನಿಕರು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ವಿಮಾನ ಪತನಗೊಂಡ ಹಕ್ಕಾಯಿಡೋ ದ್ವೀಪ
ವಿಮಾನ ಪತನಗೊಂಡ ಹಕ್ಕಾಯಿಡೋ ದ್ವೀಪ
Updated on: 
ಟೋಕಿಯೊ: ಜಪಾನ್ ಸೇನಾ ವಿಮಾನ ಪತನಗೊಂಡು ನಾಲ್ವರು ಸೈನಿಕರು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ಆಸ್ಪತ್ರೆಯೊಂದರ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆಗೆ ಸ್ಥಳಾಂತರಿಸಲು ಬರುತ್ತಿದ್ದ ಸೇನಾ ವಿಮಾನ ಹಕ್ಕಾಯಿಡೋ ದ್ವೀಪದಲ್ಲಿ ಪತನಗೊಂಡಿದೆ ಎಂದು ಜಪಾನ್ ರಕ್ಷಣಾ ಸಚಿವಾಲಯ ತಿಳಿಸಿದೆ.
ಸೋಮವಾರ ಹಕೋಡೇಟ್‌ ವಿಮಾನ ನಿಲ್ದಾಣದ ಆಸುಪಾಸಿನಲ್ಲಿ ತನ್ನ ರೆಡಾರ್‌ ಸಂಪರ್ಕವನ್ನು ಕಡಿದುಕೊಂಡಿದ್ದ ವಿಮಾನದ ಅವಶೇಷಗಳು ಪತ್ತೆಯಾಗಿದ್ದು, ಈ ಬಗ್ಗೆ ರಕ್ಷಣಾ ಸಚಿವಾಲಯ ಖಚಿತಪಡಿಸಿದೆ. 
ಹಕ್ಕಾಯಿಡೋನ ಗೌವರ್ನರ್‌ ಅಲ್ಲಿನ ಹಕೋಡೇಟ್‌ನ ಆಸ್ಪತ್ರೆಯಲ್ಲಿರುವ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಸಹಕರಿಸಬೇಕೆಂದು ಸೇನೆಯನ್ನು ಕೋರಿದ್ದರು. ಅದರಂತೆ ಹೆಚ್ಚಿನ ಚಿಕಿತ್ಸೆಗಾಗಿ ಹಕ್ಕಾಯಿಡೋ ರಾಜಧಾನಿ ಸಪ್ಪೋರೋಗೆ ರೋಗಿಗಳನ್ನು ಕರೆದೊಯ್ಯಲು ಈ ವಿಮಾನ ಹೊರಟಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com